ಕರಾವಳಿ

ವಿವಿಧ ರಕ್ತದ ಗುಂಪುಗಳಿರುವ ಜನರಿಗೆ ನಿರ್ದಿಷ್ಟ ಆಹಾರಕ್ರಮಗಳ ಪಟ್ಟಿ.

Pinterest LinkedIn Tumblr

blood_group_photo

ದೇಹದ ಆರೋಗ್ಯ ಕಾಪಾಡಲು ಡಯಟಿಂಗ್ ಬಹಳ ಒಳ್ಳೆಯ ವಿಧಾನ. ಆದರೆ, ಆಹಾರ ಸೇವನೆಗೂ ನಮ್ಮ ರಕ್ತದ ಗುಂಪಿಗೂ ಸಂಬಂಧವಿದೆಯಂತೆ. ಪ್ರತೀ ಆಹಾರವು ವಿವಿಧ ರಕ್ತದ ಗುಂಪಿನವರ ದೇಹದ ಮೇಲೆ ವಿವಿಧ ರೀತಿಯ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಕೆಲ ರಕ್ತದ ಗುಂಪಿನವರಿಗೆ ಒಳ್ಳೆಯದು ಮಾಡುವ ಆಹಾರ, ಬೇರೆ ರಕ್ತದ ಗುಂಪಿನವರಿಗೆ ಕೆಟ್ಟದಾಗಿರಬಹುದು ಎಂದು ಡಾ. ಪೀಟರ್ ಡಾಡಮೋ ಎಂಬ ವೈದ್ಯರು ಹೇಳುತ್ತಾರೆ. ಅವರು ವಿವಿಧ ರಕ್ತದ ಗುಂಪುಗಳಿರುವ ಜನರಿಗೆ ನಿರ್ದಿಷ್ಟ ಆಹಾರಕ್ರಮಗಳನ್ನು ಶಿಫಾರಸು ಮಾಡಿದ್ದಾರೆ. ಅದರ ವಿವರ ಈ ಕೆಳಕಂಡಂತಿದೆ.

‘ಓ’ ರಕ್ತಗುಂಪು:
ಇವನ್ನು ತಿನ್ನಿರಿ: ಪ್ರೋಟೀನ್ ಅಂಶ ಹೆಚ್ಚಿರುವಂಥ ಹಾಗೂ ಕಾರ್ಬೊಹೈಡ್ರೇಟ್ ಕಡಿಮೆ ಇರುವಂಥ ಆಹಾರ ಸೇವಿಸಬೇಕು. ಸ್ಕಿನ್’ಔಟ್ ಮಾಡಿದ ಚಿಕನ್, ಮಟನ್, ಮೀನು, ತರಕಾರಿಗಳನ್ನು ತಿನ್ನಬಹುದು. ಬೇಳೆಕಾಳು, ಬೀನ್ಸ್ ಮತ್ತು ಹಾಲಿನ ಪದಾರ್ಥಗಳನ್ನು ಸ್ವಲ್ಪಮಟ್ಟಿಗೆ ಸೇವಿಸಬಹುದು.

ಇವು ಬೇಡ: ಈ ರಕ್ತದ ಗುಂಪಿನವರು ಗೋದಿ, ಆಲ್ಕೋಹಾಲ್ ಸೇವನೆಯಿಂದ ದೂರವಿರಬೇಕು.

‘ಎ’ ರಕ್ತಗುಂಪು:
ಇವನ್ನು ತಿನ್ನಿರಿ: ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಹಣ್ಣುಹಂಪಲು, ಕಾಳುಗಳು, ಧಾನ್ಯಗಳನ್ನು(ವ್ಹೋಲ್ ಗ್ರೇನ್) ಸೇವಿಸಬೇಕು.
ಇವು ಬೇಡ: ಮಾಂಸಾಹಾರವನ್ನು ತ್ಯಜಿಸಬೇಕು.

”ಬಿ’ ರಕ‍್ತಗುಂಪು:
ಇವನ್ನು ತಿನ್ನಿರಿ: ಕಡಿಮೆ ಕೊಬ್ಬಿನ ಹಾಲಿನ ಪದಾರ್ಥಗಳನ್ನು ಸೇವಿಸಬೇಕು. ತರಕಾರಿ, ಮೊಟ್ಟೆ ಹಾಗೂ ಕೆಲ ಮಾಂಸಗಳನ್ನು ತಿನ್ನಬಹುದು.
ಇವು ಬೇಡ: ಈ ರಕ್ತದ ಗುಂಪಿನವರಿಗೆ ಅನೇಕ ಆಹಾರಗಳು ನಿಷಿದ್ಧ. ಜೋಳ, ಗೋಧಿ, ಹುರುಳಿಬೀಜ, ಹೆಸರುಬೇಳೆ, ಟೊಮ್ಯಾಟೋ, ಕಡಲೆಕಾಯಿ, ಸಾಸಿವೆಕಾಳನ್ನು ವ್ಯರ್ಜಿಸಿದರೆ ಒಳ್ಳೆಯದು. ಚಿಕನ್ ತಿನ್ನುವುದೂ ಕೂಡ ಸಮಸ್ಯೆಯೇ.

‘ಎಬಿ’ ರಕ್ತ:
ಇವನ್ನು ತಿನ್ನಿರಿ: ಸಮುದ್ರ ಮೀನುಗಳು, ಸೋಯಾ ಹಾಲು(ತೋಫು), ಆಹಾರ ಪದಾರ್ಥ, ಹಸಿರು ತರಕಾರಿಗಳನ್ನು ಸೇವಿಸಬೇಕು.
ಇವು ಬೇಡ: ಕೆಫೀನ್ ಪದಾರ್ಥಗಳು, ಆಲ್ಕೋಹಾಲ್ ಸೇವನೆ ನಿಷಿದ್ಧ. ಸ್ಮೋಕ್ಡ್ ಅಥವಾ ಕ್ಯೂರ್ ಮಾಡಿದ ಮಾಂಸವನ್ನು ತಿನ್ನಬಾರದು.

Comments are closed.