ಕರ್ನಾಟಕ

ಪಿಯು ಮೌಲ್ಯಮಾಪಕರ ಯಡವಟ್ಟು: ಪಡೆದಿದ್ದು 90 ಕೊಟ್ಟಿದ್ದು 16

Pinterest LinkedIn Tumblr

pibಬಳ್ಳಾರಿ: ಪಿಯು ಮೌಲ್ಯಮಾಪಕರು ಮಾಡಿದ ಯಡವಟ್ಟುಗಳು ಒಂದೊಂದೇ ಬಹಿರಂಗವಾಗುತ್ತಿದ್ದು 90 ಅಂಕ ಪಡೆದ ವಿದ್ಯಾರ್ಥಿಯೊಬ್ಬ ನಪಾಸು ಫಲಿತಾಂಶ ಪಡೆದು ಪರದಾಡುತ್ತಿದ್ದಾನೆ.

ಮೌಲ್ಯಮಾಪಕರ ಮಾಡಿರುವ ಯಡವಟ್ಟಿಗೆ ಹರಪನಹಳ್ಳಿ ಜೈನ್ ಪಿಯು ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿ ಎಸ್. ಎಂ. ರಿಯಾಜ್ ಸಮಸ್ಯೆಯಲ್ಲಿ ಸಿಲುಕಿದ್ದಾನೆ.

ಸಂಡೂರು ತಾಲ್ಲೂಕಿನ ತುಮರಗುದ್ದಿ ನಿವಾಸಿ ರಿಯಾಜ್‌ಗೆ ಕನ್ನಡದಲ್ಲಿ 16 ಅಂಕಗಳನ್ನು ನೀಡಲಾಗಿತ್ತು. ಫಲಿತಾಂಶ ನಪಾಸು ಎಂದು ಬಂದಿತ್ತು. ಇದರಿಂದ ಗಾಬರಿಗೊಂಡ ಯುವಕ ಉತ್ತರ ಪತ್ರಿಕೆಯ ನಕಲು ಪ್ರತಿ ತರಿಸಿದಾಗ ತನಗೆ ಬಂದಿದ್ದು 16 ಅಲ್ಲ 90 ಎಂದು ಆತನಿಗೆ ಖಚಿತವಾಗಿದೆ.

ಈ ರೀತಿಯಾದಲ್ಲಿ ಒಂದು ದಿನದೊಳಗೆ ಫಲಿತಾಂಶ ನೀಡುತ್ತೇವೆ ಎಂದು ಹೇಳಿರುವ ಶಿಕ್ಷಣ ಇಲಾಖೆ ಇನ್ನುವರೆಗೂ ನನ್ನ ಫಲಿತಾಂಶವನ್ನು ನೀಡಿಲ್ಲ. ಇದು ನನ್ನ ಸಿಇಟಿ ಫಲಿತಾಂಶ ಹೊರಬೀಳಲು ಸಹ ತಡೆಯಾಗಿದೆ ಎಂದು ವಿದ್ಯಾರ್ಥಿ ಮಾಧ್ಯಮದ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾನೆ.

Comments are closed.