ಕರ್ನಾಟಕ

ಕುಡಿಯಲು ಹಣವಿಲ್ಲ…ಕರುಳ ಕುಡಿಯನ್ನೇ ಮಾರಾಟ ಮಾಡಿಕೊಳ್ಳಲು ಮುಂದಾದ ಮಹಾತಾಯಿ!

Pinterest LinkedIn Tumblr

baby

ಚನ್ನಪಟ್ಟ: ಮದ್ಯದ ಚಟಕ್ಕೆ ಬಿದ್ದ ಮಹಿಳೆಗೆ ತನ್ನ ಮಕ್ಕಳ ಮೇಲೆ ಮಮಕಾರವೇ ಇಲ್ಲ. ಕುಡಿದ ಅಮಲಿನಲ್ಲಿ ತನ್ನ ಎರಡೂ ಮಕ್ಕಳನ್ನು ಹಿಡಿದುಕೊಳ್ಳಲು ಕೂಡ ಹೆಣಗಾಡುತ್ತಿದ್ದಳು. ಕುಡಿದ ಮತ್ತಳಿದಾಗ ಹಣಕ್ಕಾಗಿ ಬೇಡುತ್ತಿದ್ದಳು. ಹಣ ಸಿಗದಿದ್ದಾಗ ಯಾರಾದರೂ ಈ ಮಕ್ಕಳನ್ನು ತೆಗೆದುಕೊಂಡು ನನಗೆ ಹಣ ಕೊಡಿ ಎಂದು ಅಂಗಲಾಚುತ್ತಿದ್ದಳು. ಇಂತಹ ಒಂದು ಮನಕಲಕುವ ಘಟನೆ ನಡೆದಿದ್ದು ಚನ್ನಪಟ್ಟಣದಲ್ಲಿ. ಸರಿಸುಮಾರು 40ರ ಆಸುಪಾಸಿನ ದೇವೀರಮ್ಮ ಎಂದು ಹೇಳಿಕೊಳ್ಳುವ ಈಕೆ, ಕಂಕುಳದಲ್ಲಿ ಒಂದು ಕೂಸು, ಕೈಯಲ್ಲಿ ಒಂದು ಕೂಸು ಹಿಡಿದುಕೊಂಡು ಕುಡಿದು ತೂರಾಡುತ್ತಿದ್ದಳು.

ಯಾವ ಊರಿಂದ ಬಂದಳೋ, ಅದ್ಯಾವ ರೈಲಿನಲ್ಲಿ ಸಂಚರಿಸಿದ್ದಳೋ, ಅದೆಲ್ಲೆಲ್ಲಿ ಅಲೆದಾಡಿದ್ದಳೋ ಮಾಹಿತಿ ಇಲ್ಲ. ಆದರೆ ಅಲ್ಲಲ್ಲಿ ಬೇಡುತ್ತಿದ್ದಳು. ಕೈನಲ್ಲಿ ಬಿಡಿಗಾಸಿಲ್ಲದಿದ್ದರೂ ಮಿತಿಮೀರಿ ಕುಡಿದಿದ್ದಳು. ಕುಡಿಯುವ ಚಟಕ್ಕೆ ಹಣ ಹೊಂದಿಸಿಕೊಳ್ಳಲು ಹೆಣಗಾಡುತ್ತಿದ್ದಳು. ಎರಡೂ ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ಯುತ್ತಲೇ ಕಾಡಿಬೇಡಿ ಕಂಠ ಮಟ್ಟ ಕುಡಿದರೆ ಅದುವೇ ಆಕೆಗೆ ಸರ್ವಸುಖ. ಪಾಪ, ಆ ದುರದೃಷ್ಟ ಮಕ್ಕಳು ಇಂತಹ ಕುಡುಕ ತಾಯಿಯೊಂದಿಗೆ ಅದು ಹೇಗೆ ಕಾಲ ಕಳೆಯುತ್ತವೆಯೋ ಎಂಬ ಕಲ್ಪನೆ ಊಹಿಸಲು ಅಸಾಧ್ಯ. ರೈಲ್ವೆ ನಿಲ್ದಾಣದಲ್ಲಿ ಎರಡು ದಿನಗಳಿಂದ ಕುಡಿದು ತೂರಾಡುತ್ತಲೇ ಮಕ್ಕಳೊಂದಿಗೆ ಅಲೆದಾಡುತ್ತಿದ್ದಾಳೆ.

ಈ ಒಂದು ವಿಕೃತ ವ್ಯಸನದ ಬಳ್ಳಾರಿ ಮೂಲದ ದೇವೀರಮ್ಮ, ಅದೆಷ್ಟು ಕುಡಿದಿದ್ದಳೋ ಬಿಸಿಲಿನ ತಾಪಕ್ಕೆ ನಶೆ ಏರುತ್ತಿದ್ದಂತೆ ತನ್ನ ಕಂದಮ್ಮಗಳನ್ನೇ ಮಾರಲು ಮುಂದಾದಳು. ಅಲ್ಲಿ ನೆರೆದಿದ್ದ ಸಾರ್ವಜನಿಕರು ಬೈದು ಆಕೆಯನ್ನು ದೂರ ಕಳುಹಿಸಿದ್ದರು. ಅಲ್ಲಿಗೆ ಆಗಮಿಸಿದ ಇಬ್ಬರು ಪುರುಷ ಮದ್ಯವ್ಯಸನಿಗಳು ಆಕೆಗೆ ನಾಲ್ಕು ಧರ್ಮದೇಟು ನೀಡಿದ್ದಾರೆ. ಇಂತಹ ಬೆಳವಣಿಗೆ ನಡೆಯುತ್ತಿದ್ದಂತೆ ಅವಳನ್ನು ಅಲ್ಲಿಂದ ಹೊರ ಹಾಕಲಾಗಿದೆ.

ಕುಡಿದ ನಿಶೆ ಇಳಿದು ಹೋದಾಗ ಆಕೆ ಬೇಡಲು ಶುರುಮಾಡಿದ್ದಳು. ಪ್ರಾಯಶಃ ಇದು ಮತ್ತೆ ಕುಡಿಯಲೆಂದೇ ಇರಬೇಕು. ಇಂದಿನ ದಿನಗಳಲ್ಲಿ ಮಹಿಳೆ ಕೂಲಿ ಮಾಡಿದರೂ ದಿನವೊಂದಕ್ಕೆ 250ರೂ. ಕನಿಷ್ಠ ವೇತನ ಸಿಗುತ್ತದೆ. ಇಂತಹ ಚಟಗಳ ದಾಸ್ಯಕ್ಕೆ ಬಿದ್ದು ಅದನ್ನು ಪೂರೈಸಿಕೊಳ್ಳಲು ಕರುಳ ಕುಡಿಯನ್ನೇ ಮಾರಾಟ ಮಾಡಿಕೊಳ್ಳುವುದಕ್ಕೂ ಹೇಸದ ಇಂತಹ ರಕ್ಕಸ ಮಹಿಳೆಯರಿಗೆ ಅದೇನ್ನೇನಬೇಕೋ ಗೊತ್ತಾಗುತ್ತಿಲ್ಲ.

Comments are closed.