ಕರ್ನಾಟಕ

ಕನ್ನಡಿಗರಲ್ಲದ ವೆಂಕಯ್ಯ ನಾಯ್ಡುರನ್ನು ರಾಜ್ಯಸಭೆಗೆ ಆಯ್ಕೆ ವಿರೋಧಿಸಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಕರವೇ

Pinterest LinkedIn Tumblr

Venkaiah-Naidu

ಬೆಂಗಳೂರು: ಹೊರ ರಾಜ್ಯದವರಾದ ವೆಂಕಯ್ಯ ನಾಯ್ಡು ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುವ ನಿರ್ಧಾರವನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಎದುರು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕನ್ನಡಿಗರಲ್ಲದ ವೆಂಕಯ್ಯ ನಾಯ್ಡು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಾರದು ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರವೇ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿ ಎದುರು ಭಾರಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರತಿಭಟನಾಕಾರರು ಕಚೇರಿ ನುಗ್ಗದಂತೆ ಭದ್ರತೆ ಒದಗಿಸಲಾಗಿತ್ತು.

18 ವರ್ಷಗಳಿಂದ ವೆಂಕಯ್ಯ ನಾಯ್ಡು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಕರ್ನಾಟಕದ ಪರ ಕೆಲಸ ಮಾಡಿಲ್ಲ. ಕಾವೇರಿ ವಿಚಾರ, ಕೃಷ್ಣ ನದಿ ವಿಚಾರ, ಕಳಸಾ ಬಂಡೂರಿ ವಿಚಾರದಲ್ಲಿ ಎಲ್ಲೂ ಧ್ವನಿ ಎತ್ತಲಿಲ್ಲ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಹೀಗಾಗಿ ನಿಮಗೆ ಮಾನ ಮರ್ಯಾದೆ ಇದ್ರೆ, ಕನ್ನಡಿಗರ ಬಗ್ಗೆ ಕಳಕಳಿ ಇದ್ರೆ ನಿಮ್ಮ ಪಕ್ಷದಲ್ಲೇ ಇರುವ ಕನ್ನಡಿಗನನ್ನು ಆಯ್ಕೆ ಮಾಡಿ. ಕೊನೆ ಪಕ್ಷ ಕಸ ಗುಡಿಸುವ ವ್ಯಕ್ತಿಯನ್ನಾದ್ರೂ ರಾಜ್ಯಸಭೆಗೆ ಕಳಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಆಗ್ರಹಿಸಿದರು.

Comments are closed.