ಕರ್ನಾಟಕ

ಮೊಬೈಲ್ ಕಳ್ಳತನ ಮಾಡುತ್ತಿದ್ದ ಯುವಕನಿಗೆ ಧರ್ಮದೇಟು ನೀಡಿದ ಸಾರ್ವಜನಿಕರು

Pinterest LinkedIn Tumblr

kalla

ಹರಿಹರ: ಮೊಬೈಲ್ ಕಳ್ಳತನ ಮಾಡುತ್ತಿದ್ದ ಯುವಕನಿಗೆ ಧರ್ಮದೇಟು ನೀಡಿದ ಸಾರ್ವಜನಿಕರು ನಂತರ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಗರದ ಶಿವಮೊಗ್ಗ ರಸ್ತೆಯಲ್ಲಿ ನಡೆದಿದೆ.

ನಗರದ ಶಿವಮೊಗ್ಗ ರಸ್ತೆಯಲ್ಲಿ ಸಂತೇ ವಹಿವಾಟು, ಜನದಟ್ಟಣೆ ಸ್ಥಳಗಳಲ್ಲಿ ಮೊಬೈಲ್ ಕದ್ದು ಓಡಿ ಹೋಗುತ್ತಿದ್ದ ಸುಮಾರು 20 ವರ್ಷದ ವ್ಯಕ್ತಿಯನ್ನು ಹಿಡಿದ ಸುತ್ತಮುತ್ತಲಿನ ನಾಗರೀಕರು ಧರ್ಮದೇಟನ್ನು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರತಿ ಮಂಗಳವಾರ ಸಂತೇ ನಡೆಯುವ ಮತ್ತು ಜನದಟ್ಟಣೆ ಇರುವ ಸ್ಥಳಗಳಲ್ಲಿ ಸುಮಾರು ದಿನಗಳಿಂದ ಮೊಬೈಲ್ ಕಳ್ಳತನವಾಗುತ್ತಿರುವ ಬಗ್ಗೆ ಪೊಲೀಸರಿಗೆ ಸಾರ್ವಜನಿಕರು ತಿಳಿಸಿದ್ದಾರೆ. ಕಳ್ಳನನ್ನು ಹಿಡಿಯುತ್ತಿದ್ದಂತೆ ನಾಗರೀಕರು ಪೊಲೀಸ್ ಠಾಣೆಗೆ ಬಂದು ಅವರವರ ಮೊಬೈಲ್‍ಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರನ್ನು ನೀಡಲು ಮುಂದಾದರು.

ಈ ವೇಳೆ ಪಿಎಸ್‍ಐ ಹನುಮಂತಪ್ಪ ಶಿರೇಹಳ್ಳಿ ಮಾತನಾಡಿ ಸಾರ್ವಜನಿಕರು ಸಂತೇ ಮತ್ತು ಜನದಟ್ಟಣೆ ಇರುವ ಸ್ಥಳಗಳಲ್ಲಿ ತಮ್ಮ ವಸ್ತುಗಳ ಜವಾಬ್ದಾರಿಯನ್ನು ಮರೆತರೆ ಈ ರೀತಿ ಕಳ್ಳತನವಾಗುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.

ಸಂತೇ ನಡೆಯುವ ಸ್ಥಳಗಳಲ್ಲಿ ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಅನುಮಾನಾಸ್ಪದ ವ್ಯಕ್ತಿ ಕಂಡು ಬಂದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಪೇದೆಗಳಿಗೆ ಅಥವಾ ಠಾಣೆಗೆ ತಿಳಿಸಿದರೆ ಕಳ್ಳರನ್ನು ಹಿಡಿಯುವುದಕ್ಕೆ ಸಹಕಾರಿಯಾಗುತ್ತದೆ.ಕಳ್ಳನ್ನು ವಿಚಾರಣೆಗೊಳಪಡಿಸಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದರು.

Comments are closed.