ರಾಷ್ಟ್ರೀಯ

ಭಗತ್‍ಸಿಂಗ್‍ಗೆ ಗಲ್ಲು ಶಿಕ್ಷೆ ವಿರುದ್ಧ ಕೋರ್ಟ್ ಪ್ರಕರಣ ಪರಿಹಾರಕ್ಕೆ ಭಾರತ, ಪಾಕ್ ವಕೀಲರ ವಾದ

Pinterest LinkedIn Tumblr

bhagath

ಅಮೃತಸರ್: ನ್ಯಾಯಾಂಗ ವಿಧಾನವನ್ನು ಕಡೆಗಣಿಸಿ ಬ್ರಿಟೀಷ್ ಸರ್ಕಾರ ಯಾವ ರೀತಿ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್‍ರನ್ನು ಗಲ್ಲಿಗೇರಿಸಿತು ಎಂಬ ಪ್ರಕರಣವನ್ನು ಲಾಹೋರ್ ಹೈಕೋರ್ಟ್‍ನಲ್ಲಿ ಮತ್ತೆ ಆರಂಭಿಸಿದ್ದು, ಪಾಕಿಸ್ತಾನದ ವಕೀಲ ಮೊಮಿನ್ ಮಲಿಕ್ ಅವರೂ ಭಾರತದ ವಕೀಲರೊಂದಿಗೆ ಕೈಜೋಡಿಸಿದ್ದಾರೆ. ಕ್ರಾಂತಿಕಾರಿಗಳಿಗೆ ಬ್ರಿಟೀಷ್ ಸರ್ಕಾರ ಅನ್ಯಾಯ ಮಾಡಿದ್ದು, ಕ್ಷಮೆ ಕೋರಬೇಕು ಹಾಗೂ ಕ್ರಾಂತಿಕಾರಿ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ವಕೀಲರು ವಾದಿಸಲಿದ್ದಾರೆ.

ಪಾಕಿಸ್ತಾನದಿಂದ ಭಾರತಕ್ಕೆ ಬಂದ ಗೀತಾ ಪ್ರಕರಣದಲ್ಲಿ ಮೊಮಿನ್ ಸಾಕಷ್ಟು ಸಹಕಾರ ನೀಡಿದ್ದರು. ಮೇ.15ರಂದು ಮಲಿಕ್ ಮತ್ತು ಖುರೇಶಿ ಅಮೃತಸರದಲ್ಲಿ ಹುತಾತ್ಮ ಸುಖದೇವ್ ಥಾಪರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಿದ್ದರು. ಭಗತ್‍ಸಿಂಗ್, ಸುಖದೇವ್, ರಾಜಗುರು ಅವರಿಗೆ ಬ್ರಿಟೀಷ್ ಸರ್ಕಾರ ನೇಣು ಶಿಕ್ಷೆ ನೀಡಿರುವ ಆದೇಶ ಪ್ರತಿಯನ್ನು ಖುರೇಶಿ ಅವರು ನೀಡಿದ್ದಾರೆ ಎಂದು ಮೊಮಿನ್ ತಿಳಿಸಿದ್ದಾರೆ.

ಭಾರತ-ಪಾಕ್ ವಿಭಜನೆಗೂ ಮುನ್ನ ಈ ಆದೇಶ ನೀಡಲಾಗಿದೆ. ಈಗ ಕಾನೂನಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಪ್ರಕರಣದಲ್ಲಿ ಭಾರತೀಯ ವಕೀಲರಿಗೆ ಸಹಾಯ ಮಾಡುವುದಾಗಿ ಹೇಳಿದರು.

ಪಾಕಿಸ್ತಾನದಲ್ಲಿ ಭಗತ್‍ಸಿಂಗ್ ಸ್ಮಾರಕ ಸಂಸ್ಥೆಯ ಅಧ್ಯಕ್ಷರಾಗಿರುವ ಖುರೇಶಿ 2013ರಲ್ಲಿ ಲಾಹೋರ್ ನ್ಯಾಯಾಲಯದಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಹುತಾತ್ಮರು ಅಮಾಯಕರಾಗಿದ್ದರು ಎಂಬುದನ್ನು ತಿಳಿಸಿದ್ದರು.

Comments are closed.