ಕರ್ನಾಟಕ

ಪೊಲೀಸರ ಬಂಧನ ವೇಳೆ ಆಸ್ಪತ್ರೆಯಿಂದಲೇ ಪರಾರಿಯಾಗಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಲೇಡಿ ರೌಡಿ ಯಶಸ್ವಿನಿ!

Pinterest LinkedIn Tumblr

Lady Rowdy Yashaswini

ಬೆ೦ಗಳೂರು: ಮೀಟರ್ ಬಡ್ಡಿ ಕಟ್ಟಲಿಲ್ಲವೆ೦ಬ ಕಾರಣಕ್ಕಾಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬ೦ಧನ ಭೀತಿಗೆ ಒಳಗಾಗಿ ಆಸ್ಪತ್ರೆಯಿ೦ದ ಪರಾರಿಯಾಗಿದ್ದ ಮಹಿಳಾ ರೌಡಿಶೀಟರ್ ಯಶಸ್ವಿನಿ ತಮಿಳುನಾಡಿನಲ್ಲಿ ತಲೆಮರೆಸಿಕೊ೦ಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಕಲೆಹಾಕಿರುವ ಮಾಹಿತಿ ಮೇರೆಗೆ ಆಕೆ ತಮಿಳುನಾಡು ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದು, ಆಕೆ ಅವಿತಿರುವ ನಿರ್ಧಿಷ್ಟ ಜಾಗ ಪತ್ತೆಯಾಗುತ್ತಿದ್ದಂತೆಯೇ ಆಕೆಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಯಶಸ್ವಿನಿ ಪತಿ ಮಹೇಶ್ ಕೂಡ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಈಗಾಗಲೇ ಆರೋಪಿ ಬ೦ಧನಕ್ಕಾಗಿ 3 ವಿಶೇಷ ತ೦ಡಗಳ ರಚಿಸಲಾಗಿದೆ.

ಯಶಸ್ವಿನಿ ಪತಿಯ ಮೊಬೈಲ್ ತಮಿಳುನಾಡಿನಲ್ಲಿ ನೆಟ್‍ವಕ್‍೯ ಪಡೆಯುತ್ತಿರುವುದು ಗೊತ್ತಾಗಿದೆ. ಪತಿ-ಪತ್ನಿ ಇಬ್ಬರೂ ಅಲ್ಲೇ ಭೂಗತರಾಗಿರುವ ಶ೦ಕೆ ಇದ್ದು,1 ತ೦ಡವನ್ನು ಅಲ್ಲಿಗೆ ಈಗಾಗಲೇ ಕಳುಹಿಸಲಾಗಿದೆ. ಆದರೆ, ಅಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣ ಬ೦ಧನ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಯಶಸ್ವಿನಿ ಬಳಿ ಕೊತ್ತನೂರು ಮುಖ್ಯರಸ್ತೆ ನಿವಾಸಿ ತಾಯಮ್ಮ ಎ೦ಬುವವರು ತಮ್ಮ ಗಭ೯ಕೋಶ ಶಸ್ತ್ರ ಚಿಕಿತ್ಸೆಗೆ 1 ಲಕ್ಷ ರು. ಸಾಲ ಮಾಡಿದ್ದರು. ಸಕಾಲಕ್ಕೆ ಬಡ್ಡಿ ಹಣ ಪಾವತಿಸಲಿಲ್ಲ ಎ೦ದು ತಾಯಮ್ಮನ ಮನೆಗೆ ನುಗ್ಗಿದ್ದ ಲೇಡಿ ರೌಡಿ ಮನಬ೦ದ೦ತೆ ಹಲ್ಲೆ ನಡೆಸಿದ್ದಳು. ಈ ಬಗ್ಗೆ ದೂರು ದಾಖಲಾಗುತ್ತಿದ್ದ೦ತೆ ಎದೆನೋವೆ೦ದು ಆಕೆ ಆಸ್ಪತ್ರೆ ಸೇರಿದ್ದಳು. ಬಳಿಕ ಆಸ್ಪತ್ರೆ ಕೊಠಡಿಯಿಂದಲೇ ಪೊಲೀಸರಿಗೆ ಏಮಾರಿಸಿ ಕಿಟಕಿ ಮೂಲಕ ಪರಾರಿಯಾಗಿದ್ದಳು.

Write A Comment