
ಪ್ರಸ್ತುತ ಇಂಡಿಯನ್ ಪ್ರಿಮಿಯರ್ ಲೀಗ್ ನ ಟಾಪ್ ಮೊಸ್ಟ್ ಬ್ಯಾಟ್ಸ್ ಮನ್ ಯಾರು ಗೊತ್ತೆ… ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ.
ಹೌದು ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಖ್ಯಾತಿಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ. ಇನ್ನು ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ವಿರಾಟ್ ಕೊಹ್ಲಿ
ಐಪಿಎಲ್ 9ನೇ ಆವೃತ್ತಿಯಲ್ಲಿ ಪ್ರತಿ ಪಂದ್ಯದಲ್ಲೂ ಮಿಂಚುತ್ತಿರುವ ವಿರಾಟ್ ಕೊಹ್ಲಿ ತಾನು ಆಡಿರುವ 12 ಪಂದ್ಯಗಳಲ್ಲಿ 83.55 ರ ಸರಾಸರಿಯಲ್ಲಿ 752 ರನ್ ಸಿಡಿಸಿದ್ದಾರೆ. ಇದು ಸದ್ಯದ ವಿಶ್ವದಾಖಲೆಯಾಗಿದೆ.ಇನ್ನು ಇದರಲ್ಲಿ 3 ಶತಕ ಹಾಗೂ 5 ಅರ್ಧಶತಕ ದಾಖಲಾಗಿವೆ. ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 100 ರನ್ ಸಿಡಿಸುವ ಮೂಲಕ ಐಪಿಎಲ್ ನಲ್ಲಿ ಮೊದಲ ಶತಕ ದಾಖಲಿಸಿದ್ದರು. ಬಳಿಕ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ 108 ರನ್ ಗಳಿಸಿ ಎರಡನೇ ಶತಕ ಸಿಡಿಸಿದ್ದರು. ಮತ್ತೆ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ 109 ರನ್ ಗಳಿಸಿ ಸೀಸನ್ ಒಂದರಲ್ಲಿ ಮೂರು ಶತಕ ಸಿಡಿಸಿದ ದಾಖಲೆ ಮಾಡಿದ್ದರು.
ಕ್ರಿಸ್ ಗೇಯ್ಲ್
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ 2012ರ ಐಪಿಎಲ್ ನಲ್ಲಿ ಸೀಸನ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿ ದಾಖಲೆ ಮಾಡಿದ್ದರು. ಈ ವೇಳೆ ಅವರು 14 ಇನ್ನಿಂಗ್ಸ್ ನಲ್ಲಿ ಆಡಿ 733 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಹಾಗೂ 7 ಅರ್ಧಶತಕ ದಾಖಲಾಗಿದ್ದವು.