ಕರ್ನಾಟಕ

ಮದುವೆಗೆ ತೆರಳಿದ ನಾಲ್ವರು ಕೆರೆಗೆ ಆಹುತಿಯಾದರು

Pinterest LinkedIn Tumblr

death

ಕೋಲಾರ: ಸಂಬಂಧಿಕರ ಮದುವೆಗೆಂದು ಬಂದು ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ. ರಾಜಿಕ್ (14), ಮುಸ್ತಕಾ (12), ಉದಾಸಿರ್ ಅಹಮ್ಮದ್ (21), ಮನ್ಸೂರ್‌ಖಾನ್ (15) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಸಂಬಂಧಿಕರೊಬ್ಬರ ಮದುವೆಗೆ ಶ್ರೀನಿವಾಸಪುರದಿಂದ ಅಡ್ಡಗಲ್ಲಿಗೆ ಐವರು ತೆರಳಿದ್ದರು. ಮದುವೆ ನಂತರದಲ್ಲಿ ಕೆಂಪರೆಡ್ಡಿ ಗಾರಪಲ್ಲಿ ಬಳಿ ಇರುವ ಕೆರೆಗೆ ಈಜಲು ತೆರಳಿದ ಸಂದರ್ಭದಲ್ಲಿ ನಾಲ್ವರು ಈಜು ಬಾರದೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಅದರಲ್ಲಿ ಈಜಿ ದಡ ಸೇರಿದ ಒಬ್ಬ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸಂಬಂಧಿಕರು, ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಶವಗಳನ್ನು ಮೇಲೆತ್ತಿದ್ದಾರೆ. ಘಟನೆ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment