ಕರ್ನಾಟಕ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸು ಕುಗ್ಗುತ್ತಿದೆ: ಸಾಹಿತಿ ದೇವನೂರು ಮಹದೇವ

Pinterest LinkedIn Tumblr

Devanuru-Mahadeva

ಪಾಂಡವಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಡಳಿತವನ್ನು 3 ವರ್ಷ ಪೂರೈಸಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು ಮುಸುಕುಗೊಳ್ಳುತ್ತಿದೆ. ಸಿದ್ದರಾಮಯ್ಯ ಅವರು ಆಡಳಿತದಲ್ಲಿ ಮರು ಹುಟ್ಟು ಪಡೆದುಕೊಳ್ಳಬೇಕಾಗಿದೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.

ಪಟ್ಟಣದಲ್ಲಿ ಪತ್ರಕರ್ತರ ಪ್ರಶ್ನೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಅವಧಿ ಕಳೆಯುತ್ತಿದ್ದಂತೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ 5 ವರ್ಷ ಮುಖ್ಯಮಂತ್ರಿ ಖುರ್ಚಿ ಇರುತ್ತದೆ ಎಂದು ಭಾವಿಸಿ ಆಡಳಿತ ನಡೆಸಬಾರದು. ಉಳಿದ ಆಡಳಿತ ಅವಧಿಯನ್ನು ಒಂದು ದಿನ ಮಾತ್ರ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಭಾವಿಸಿ ಉತ್ತಮ ಕೆಲಸ ಮಾಡಬೇಕು ಎಂಬ ನಿರೀಕ್ಷೆಯಲ್ಲಿದ್ದೇನೆ.

ಹಿಂದುಳಿದ ವರ್ಗಗಳ ನೇಕಾರ ದೇವರಾಜು ಅರದು ನಂತರ ಸಿದ್ದರಾಮಯ್ಯ ಅಂತ ಹೆಸರು ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದೇವೆ. ಸಿದ್ದರಾಮಯ್ಯ ಅವರಿಗೆ ಈ ಸಾರ್ಮಥ್ಯ ಖಂಡಿತ ಇದೆ. ಆದರೂ ಇನ್ನು ಮುಂದಿನ ಆಡಳಿತ ಹೇಗೆ ನಡೆಸುತ್ತಾರೆಂದು ಕಾದು ನೋಡಬೇಕಾಗಿದೆ.

ಸರ್ಕಾರದ ಕಾಮಗಾರಿಯಲ್ಲಿ ದಲಿತರಿಗೆ ಮೀಸಲು ನೀಡುವ ಕುರಿತು ಸುಗ್ರಿವಾಜ್ಞೆ ಹೊರಡಿಸಿ ರಾಜ್ಯಾಪಾಲರಿಗೆ ಅಂಕಿತ ಹಾಕಲು ನೀಡದ್ದರು. ಆದರೆ ಇದೀಗ ರಾಜ್ಯಪಾಲರು ಅಂಕಿತ ಹಾಕದೆ ವಾಪಸ್ಸು ಸರ್ಕಾರಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ಸಂವಿಧಾನದ ಪ್ರಕಾರ ವಾಪಸ್ಸು ಸರ್ಕಾರಕ್ಕೆ ಕಳುಹಿಸಿದರೆ ಒಪ್ಪಿಕೊಳ್ಳೋಣ, ಆದರೆ ಬೇರೆ ಉದ್ದೇಶದಿಂದ ವಾಪಸ್ಸು ಸರ್ಕಾರಕ್ಕೆ ಕಳುಹಿಸಿದ್ದರೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

Write A Comment