ಕರ್ನಾಟಕ

ಗುಂಡಿನ ಮತ್ತೆ ಗಮ್ಮತ್ತು ಕೆಲಸಕೆ ಬಂತೇ ಆಪತ್ತು! ಕಿಕ್ಕೇರಿ ಠಾಣೆ ಪಿಎಸ್ ಐ ಯಶವಂತ್ ಕುಮಾರ್ ಅಮಾನತ್ತು

Pinterest LinkedIn Tumblr

KRPETE

ಕೃಷ್ಣರಾಜಪೇಟೆ: ತಾಲೂಕಿನ ತೇಗನಹಳ್ಳಿ ಗೇಟ್‍ನಲ್ಲಿ ಶಿಕ್ಷಕ ರಾಜೇಗೌಡರ ಮೇಲೆ ಹಲ್ಲೆ ನಡೆಸಿ ಮನೆಯೊಳಗೆ ನುಗ್ಗಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದೀರಾ ಎಂದು ನಿಂಧಿಸಿ ಕುಡಿದ ಮತ್ತಿನಲ್ಲಿ ದಾಂಧಲೆ ನಡೆಸಿ ಮನೆಯೊಳಗಿದ್ದ ವಸ್ತುಗಳನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿದ್ದ ಕಿಕ್ಕೇರಿ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಅವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀರ್‍ಕುಮಾರ್‍ರೆಡ್ಡಿ ಆದೇಶ ಹೊರಡಿಸಿದ್ದಾರೆ.

ತೇಗನಹಳ್ಳಿ ಗೇಟಿನಲ್ಲಿರುವ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದ್ದ ಕಿಕ್ಕೇರಿ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಅಂಗಡಿಗಳಲ್ಲಿ ಮಧ್ಯದ ಬಾಟಲುಗಳು ದೊರೆಯದ ಹಿನ್ನೆಲೆಯಲ್ಲಿ ಪಕ್ಕದಲ್ಲಿಯೇ ಇರುವ ಶಿಕ್ಷಕ ರಾಜೇಗೌಡರ ಮನೆಯೊಳಗೆ ನುಗ್ಗಿ ಮಧ್ಯದ ಬಾಟಲುಗಳನ್ನು ಎಲ್ಲಿಟ್ಟಿದ್ದೀರಿ, ಎಂದು ಅವಾಚ್ಯ ಶಬ್ಧಗಳಿಂಧ ನಿಂದಿಸಿ ಹಲ್ಲೆ ಮಾಡಲು ಮುಂದಾದಾಗ ಗ್ರಾಮಸ್ಥರೆಲ್ಲರೂ ಒಂದಾಗಿ ಪ್ರತಿಭಟಿಸಿ ಸಬ್‍ಇನ್ಸ್‍ಪೆಕ್ಟರ್‍ಗೆ ದಿಗ್ಭಂಧನ ವಿಧಿಸಿ ಹಲ್ಲೆ ನಡೆಸಲು ಮುಂದಾದಾಗ ಗ್ರಾಮ ಪಂಚಾಯಿತಿ ಮಾಜಿಸದಸ್ಯ ನಾಗೇಶನ ಮನೆಯೊಳಗೆ ಹೋಗಿ ಬಚ್ಚಿಟ್ಟುಕೊಂಡು ಬಾಗಿಲು ಹಾಕಿಕೊಂಡಾಗ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳಕ್ಕೆ ಪೋಲಿಸ್ ಉನ್ನತಾಧಿಕಾರಿಗಳು ಬರುವವರೆಗೂ ಸಬ್‍ಇನ್ಸ್‍ಪೆಕ್ಟರ್ ಇಲ್ಲಿಂದ ಹೊರಗೆ ಬರಲು ಬಿಡುವುದಿಲ್ಲ ಎಂದು ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿಗಳು ಮತ್ತು ನಾಗಮಂಗಲ ಡಿವೈಎಸ್‍ಪಿ ಜನಾರ್ಧನ್ ಅವರಿಗೆ ದೂರವಾಣಿಯ ಮೂಲಕ ವಿಚಾರ ತಿಳಿಸಿದಾಗ ಸ್ಥಳಕ್ಕಾಗಮಿಸಿದ ವೃತ್ತ ಆರಕ್ಷಕ ನಿರೀಕ್ಷಕರಾದ ಕೆ.ಸಂತೋಷ್ ಗ್ರಾಮಸ್ಥರ ಮನವೊಲಿಸಿ ಸಬ್‍ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಕುಡಿದು ಬಂದಿರುವುದು ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಧೃಡಪಟ್ಟರೆ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿ ಮನೆಯ ಬಾಗಿಲು ತೆಗೆಸಿ ಕೆ.ಆರ್.ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಹೆಚ್ಚಿನ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆಗೊಳಪಡಿಸಿದಾಗ ಮಧ್ಯಪಾನ ಮಾಡಿರುವುದು ಖಚಿತವಾಯಿತು.

ವೃತ್ತ ಆರಕ್ಷಕ ನಿರೀಕ್ಷಕರಾದ ಸಂತೋಷ್ ಮಧ್ಯಪಾನ ಮಾಡಿರುವುದು ಧೃಡಪಟ್ಟಿರುವುದರ ಬಗ್ಗೆ ನಾಗಮಂಗಲ ಡಿವೈಎಸ್‍ಪಿ ಜನಾರ್ಧನ್ ಅವರು ವರದಿ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀರ್‍ಕುಮಾರ್‍ರೆಡ್ಡಿ ಕಿಕ್ಕೇರಿ ಪೋಲಿಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಯಶ್ವಂತ್‍ಕುಮಾರ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Write A Comment