ಕರ್ನಾಟಕ

ಮಂಡ್ಯ ಜಿಲ್ಲೆ ಜನತೆಯ ಪ್ರೀತಿಗೆ ಋಣಿ: ಯದುವೀರ್

Pinterest LinkedIn Tumblr

yadveer pustaka

ಮಂಡ್ಯ: ಮಂಡ್ಯ ಜಿಲ್ಲೆಯ ಜನತೆ ಹೃದಯ ವೈಶಾಲ್ಯತೆ ಉಳ್ಳವರು. ನಮ್ಮ ಪೂರ್ವಿಕರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂದು ಮೈಸೂರು ಯುವರಾಜ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ತಿಳಿಸಿದರು.

ನಗರದ ಅಭಿನವ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಅನಂತ ಸಭಾಂಗಣ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಮೈಸೂರಿನ ರಾಜ ಮನೆತನದವರು ಮಂಡ್ಯ ಜಿಲ್ಲೆಗೆ ಬಂದಾಗಲೆಲ್ಲಾ ಇಲ್ಲಿನ ಜನತೆ ಪ್ರೀತಿ ಪೂರ್ವಕವಾಗಿ ನಡೆಸಿಕೊಳ್ಳುತ್ತಿದ್ದರು. ಅಂತಹ ಪ್ರೀತಿಯನ್ನು ನನಗೂ ನೀಡುತ್ತಿದ್ದಾರೆ. ಇದು ತಮಗೆ ಅತೀವ ಸಂತಸವನ್ನುಂಟುಮಾಡಿದೆ ಎಂದು ಹೇಳಿದರು.

ಜನರ ಪ್ರೀತಿ- ವಿಶ್ವಾಸ ನನ್ನನ್ನು ಆಗಾಗ್ಗೆ ಜಿಲ್ಲೆಗೆ ಬರುವಂತೆ ಕರೆಯುತ್ತಿದೆ ಎಂದ ಅವರು, ಅಭಿನವ ಭಾರತಿ ಪದವಿಪೂರ್ವ ಕಾಲೇಜು ಚೆನ್ನಾಗಿ ಬೆಳೆಯುತ್ತಿದೆ. ಇನ್ನೂ ಎತ್ತರಕ್ಕೆ ಬೆಳೆದು ಸಾಕಷ್ಟು ವಿದ್ಯಾರ್ಥಿಗಳಿಗೆ ಒಳ್ಳೆಯ ಜ್ಞಾನವನ್ನು ನೀಡಲಿ ಎಂದು ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಅಭಿನವ ಜ್ಯೋತಿ ಕೃತಿ ಬಿಡುಗಡೆ ಮಾಡಿದರು. ಅಭಿನವ ಭಾರತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಶ್ರೀ ಅನಂತಕುಮಾರಸ್ವಾಮೀಜಿ, ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ. ಅನಿಲ್ ಆನಂದ್, ಅಭಿನವ ಭಾರತಿ ಶಿಕ್ಷಣ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಕೀಲಾರ, ಪ್ರಾಂಶುಪಾಲ ರವೀಂದ್ರನಾಥ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Write A Comment