ರಾಷ್ಟ್ರೀಯ

ಆಸ್ಪತ್ರೆಯಿಂದ ಸುಷ್ಮಾ ಸ್ವರಾಜ್ ಮರಳಿ ಮನೆಗೆ

Pinterest LinkedIn Tumblr

sushma

ನವದೆಹಲಿ: ತೀವ್ರ ಎದೆನೋವಿನಿಂದ ಇಲ್ಲಿನ ಎಐಐಎಂಎಸ್ ಆಸ್ಪತ್ರೆಗೆ ಮೂರು ವಾರಗಳ ಹಿಂದೆ ದಾಖಲಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಇಂದು ಆಸ್ಪತ್ರೆಯಿಂದ ಮನೆಗೆ ತೆರಳಿದರು.

ವೈದ್ಯರ ತಂಡವೊಂದು ಅವರನ್ನು ಪರೀಕ್ಷಿಸಿ ಸಂಪೂರ್ಣವಾಗಿ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಂಡ ನಂತರ ಅವರನ್ನು ಕಳುಹಿಸಲಾಯಿತು ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಸಿ. ಮಿಶ್ರಾ ಹೇಳಿದ್ದಾರೆ.

ನ್ಯೂಮೋನಿಯಾಕ್ಕಾಗಿ ಸುಶ್ಮಾಗೆ ಚಿಕಿತ್ಸೆ ನೀಡಲಾಗಿದ್ದು, ಅವರು ಈಗ ಆರೋಗ್ಯವಾಗಿದ್ದಾರೆ. 64 ವರ್ಷದ ಸುಶ್ಮಾ ಸ್ವರಾಜ್‌ರನ್ನು ಏ. 25 ರಂದು ಎದೆ ನೋವಿನಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Write A Comment