ಕರ್ನಾಟಕ

ಅಹಿತರ ಘಟನೆಗಳು, ಅಪರಾಧಿಗಳ ಮೇಲೆ ನಿಗಾ ವಹಿಸಲು ಡ್ರೋನ್ ಕಣ್ಗಾವಲು

Pinterest LinkedIn Tumblr

Drones

ಸಮಾವೇಶ,ಪ್ರತಿಭಟನೆ, ಹೋರಾಟ ಸೇರಿದಂತೆ ಇನ್ನಿತರ ಅತಿ ಹೆಚ್ಚು ಜನಸಂದಣಿಯಿರುವ ಕಡೆಗಳಲ್ಲಿ ನಡೆಯುವ ಅಹಿತರ ಘಟನೆಗಳು ಅಪರಾಧಿಗಳ ಮೇಲೆ ನಿಗಾ ವಹಿಸಲು ರಾಜ್ಯ ಪೊಲೀಸರು ಡ್ರೋನ್ ಕ್ಯಾಮರಾ ಬಳಸಲು ಮುಂದಾಗಿದ್ದಾರೆ.

ದೊಡ್ಡ ಮಟ್ಟದ ಪ್ರತಿಭಟನೆಗಳು, ಹೋರಾಟಗಳು ನಡೆದಾಗ ಕಿಡಿಗೇಡಿಗಳು ಸರ್ಕಾರಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುವುದು ಅಪರಾಧ ಕೃತ್ಯಗಳನ್ನು ಎಸಗುವುದು ಕಾನೂನು ಕೈಗೆತ್ತಿಕೊಂಡು ಅವಾಂತರ ಸೃಷ್ಠಿಸುವುದರ ಮೇಲೆ ಡ್ರೋನ್ ಕ್ಯಾಮರಾಗಳು ಹದ್ದಿನ ಕಣ್ಣಿಡಲಿವೆ.

ದೊಡ್ಡ ದೊಡ್ಡ ಸಮಾವೇಶ, ಕಾರ್ಯಕ್ರಮಗಳು ನಡೆದಾಗ ಅಲ್ಲಿ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಈ ಡ್ರೋನ್ ಕ್ಯಾಮರಾಗಳು ಕಣ್ಣಿಡಲಿವೆ. ಇದರ ಜತೆಗೆ ಅರಣ್ಯ ಪ್ರದೇಶದಲ್ಲಿ ನಡೆಯುವ ಅಕ್ರಮ ಮರಳು ಸಾಗಾಟ, ಗಣಿಗಾರಿಕೆ ತಡೆಯಲೂ ಕೂಡ ಈ ಕ್ಯಾಮರಾಗಳನ್ನು ಪೊಲೀಸರು ಬಳಸಿಕೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ನಡೆಯುವ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಈ ಕ್ಯಾಮರಾಗಳನ್ನು ಬಳಸಲು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.ಡ್ರೋನ್ ಕ್ಯಾಮರಾಗಳ ಅಗತ್ಯತೆಯನ್ನು ಮನಗಂಡಿರುವ ಇಲಾಖೆ ಈಗ ಸ್ವಂತ ಖರ್ಚಿನಲ್ಲೇ ಖರೀದಿಸಿದೆ. ಈ ಕ್ಯಾಮರಾಗಳ ಬಳಕೆ ಮತ್ತು ನಿರ್ವಹಣೆ ಮಾಡಲೆಂದೇ ಪೊಲೀಸ್ ಸಿಬ್ಬಂದಿಗೆ ನುರಿತ ತಜ್ಞರಿಂದ ತರಬೇತಿ ನೀಡಲಾಗಿದೆ.

ದಕ್ಷಿಣ ಕೋರಿಯಾ ಮೂಲದ ಖಾಸಗಿ ಕಂಪನಿಯಿಂದ ಈಗಾಗಲೇ ೧೨ ಡ್ರೋನ್ ಕ್ಯಾಮರಾಗಳನ್ನು ಖರೀದಿಸಲಾಗಿದ್ದು, ೩೦ ನಿಮಿಷಗಳ ಕಾಲ ಗರಿಷ್ಠ ಒಂದು ಕಿಲೋ ಮೀಟರ್ ಎತ್ತರದವರೆಗೂ ಹಾರಾಟ ನಡೆಸುವ ಸಾಮರ್ಥ್ಯವನ್ನು ಈ ಕ್ಯಾಮರಾಗಳು ಹೊಂದಿವೆ. ಇವುಗಳಲ್ಲಿ ೧೮ ಮೆಗಾ ಫಿಕ್ಸಲ್ ಕ್ಯಾಮರಾ ಅಳವಡಿಸಲಾಗಿದ್ದು, ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ವಿಡಿಯೋ ಚಿತ್ರೀಕರಣ ಮಾಡಲಿವೆ.

ಕತ್ತಲಲ್ಲೂ ಚಿತ್ರೀಕರಣ ಮಾಡುವ ಸಾಮರ್ಥ್ಯ ಈ ಡ್ರೋನ್ ಕ್ಯಾಮರಾಗಳಿಗಿದೆ. ನಾಲ್ಕರಿಂದ ಐದು ಕಿಲೋ ಮೀಟರ್ ದೂರದವರೆಗೆ ನಡೆಯುವ ಚಟುವಟಿಕೆಗಳ ಮೇಲೆ ಈ ಡ್ರೋನ್ ಕ್ಯಾಮರಾ ಕಣ್ಣಿಡಲಿವೆ. ಅಂದ ಹಾಗೆ ದ್ರೋನ್ ಕ್ಯಾಮಾರ ಬೆಲೆ ೧.೫ಲಕ್ಷರೂ ಗಳಾಗಿದೆ.

ಬೆಂಗಳೂರು ನಗರ ಪೊಲೀಸರು ಮೊದಲ ಬಾರಿಗೆ ಡ್ರೋನ್ ಕ್ಯಾಮರಾಗಳನ್ನು ಬಳಸಿದ್ದರು. ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿನ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆಯ ಭದ್ರತೆಗೆಂದು ಡ್ರೋನ್ ಕ್ಯಾಮರಾಗಳನ್ನು ಬಳಸಲಾಗಿತ್ತು.

ಜತೆಗೆ ಎಂ.ಜಿ ರಸ್ತೆಯಲ್ಲಿ ನಡೆಯುವ ಹೊಸ ವರ್ಷಾಚಚರಣೆಯಂದು ಬಿಗಿ ಭದ್ರತೆ ದೃಷ್ಟಿಯಿಂದ ಪೊಲೀಸರು ಖಾಸಗಿ ಕಂಪನಿಗಳಿಂದ ಡ್ರೋನ್ ಕ್ಯಾಮರಾಗಳನ್ನು ಪಡೆದು ಬಳಸಿದ್ದರು.ಅಂದ ಹಾಗೆ ದೇಶದಲ್ಲಿ ಡ್ರೋನ್ ಕ್ಯಾಮರಾ ಬಳಸುತ್ತಿರುವ ಮೊದಲ ರಾಜ್ಯ ಎಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ.

Write A Comment