ಕರ್ನಾಟಕ

ಸಸ್ಪೆನ್ಸ್ ಥ್ರಿಲ್ಲರ್ ರಾಬರಿ…

Pinterest LinkedIn Tumblr

saspence

ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಮತ್ತು ತುಡಿತದೊಂದಿಗೆ ಹಲವು ಮಂದಿ ಭವಿಷ್ಯ ಹರಸಿಕೊಂಡು ಚಂದನವನಕ್ಕೆ ಬರುತ್ತಾರೆ,ಬಂದವರು ಬಂದಹಾಗೆ ಮಾಯಾನಗರಿಯಿಂ ಮರೆಯಾಗಿ ಬಿಟ್ಟರೆ ಮತ್ತೆ ಕೆಲವರು ಹೊಸ ಹೊಸ ಆಲೋಚನೆಯಿಂದ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಭರವಸೆ ಮೂಡಿಸುತ್ತಿದ್ದಾರೆ.

ಹೊಸಬರ ತಂಡ ಮಂಗಾಟ ಆಡಿಕೊಂಡೇ ಚಿತ್ರರಂಗದಲ್ಲಿ ಜನರ ಮನಸ್ಸನ್ನು ತಮ್ಮತ್ತ ಸೆಳೆಯಲು ಮುಂದಾಗಿದೆ. ಅದಕ್ಕಾಗಿ ದರೋಡೆ ಮತ್ತು ರಾಬರಿಯ ನೆಪ ಮಾಡಿಕೊಂಡು ಮುಂದೆ ಬಂದಿದೆ. ಸಂಜೀವ ಗವಂಡಿ ನಿರ್ಮಾಣ ಮಾಡಿ ನಟಿಸಿರುವ ಚಿತ್ರದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಖುಷಿ ಮತ್ತು ವಿಶ್ವಾಸದಲ್ಲಿ ಚಿತ್ರದ ಮುಂದುವರಿದ ಭಾಗ ಮಾಡಲು ತಂಡ ಮುಂದಾಗಿದೆ.

ಸಸ್ಪೆನ್ಸ್ ಥ್ರಿಲ್ಲರ್‌ನ ಎಳೆಗೆ ರಾಬರಿಯ ಲೇಪನ ಹಚ್ಚಿ ಮಾಡಿರುವ ಚಿತ್ರ ಇದು. ಮೈಸೂರು, ತುಮಕೂರು ಸೇರಿದಂತೆ ಎಲ್ಲಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಹೊಸಬರ ತಂಡದಲ್ಲಿ ಹೊಸ ವಿಶ್ವಾಸ ಮತ್ತು ಚೈತನ್ಯ ಮೂಡಿಸಿದೆ ಇದು ನಿರ್ಮಾಪಕ ಸಂಜೀವ್ ಗವಂಡಿ ಅವರ ಮುಖದಲ್ಲಿ ಮಂದಹಾಸದ ಗೆರೆ ಮೂಡುವಂತೆ ಮಾಡಿದೆ.

ಹೊಸಬರ ತಂಡವಾದರೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುದರ್ಶನ್,ಗೂಳಿಹಟ್ಟಿ ರಘು,ಪ್ರಶಾಂತ್ ಸಿದ್ದಿ,ಮಮತಾ ರಾವುತ್, ಒಊಜಾ ಸೇರಿದಂತೆ ಅನೇಕ ಕಲಾವಿದರ ದಂಡೇ ಚಿತ್ರದಲ್ಲಿದೆ.ಹಳ್ಳಿಯಿಂದ ಕೆಲಸ ಹುಡುಕಿಕೊಂಡು ನಗರಕ್ಕೆ ಬರುವ ಮಂದಿ ಇಲ್ಲಿ ಯಾವುದೇ ಕೆಲಸ ಸಿಗದೆ ಕಳ್ಳತನ ಮಾಡಲು ಆರಂಭಿಸುತ್ತಾರೆ.ಎಲ್ಲದರಲ್ಲಿಯೂ ತಪ್ಪಿಸಿಕೊಳ್ಳುವ ಈ ಹುಡುಗರ ತಂಡ ಕೊನೆಗೊಂದು ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.

ಆ ಪ್ರಕರಣ ಯಾವುದು ಅದರ ವಿಶೇಷತೆ ಏನು ಎನ್ನುವುದರ ಸುತ್ತವೇ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂದು ವಿವರ ನಿರ್ಮಾಪಕ ಸಂಜೀವ್ ಗವಂಡಿ.

ಜೊತೆಗೆ ಚಿತ್ರದಲ್ಲಿ ಸಮಾಜಕ್ಕೊಂದು ಉತ್ತಮ ಸಂದೇಶವೂ ಇದೆ. ಕೇಬಲ್‌ನವರು, ಹಾಲು ಹಾಕಲು ಬರುವವರು,ಮನೆ ಬಾಡಿಗೆಗೆ ಬಂದವರು, ಮನೆ ಅಕ್ಕ ಪಕ್ಕದವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಇಲ್ಲದಿದ್ದರೆ ಏನೆಲ್ಲಾ ತೊಂದರೆಗಳು ಮತ್ತು ಸಮಸ್ಯೆಗಳಾಗುತ್ತವೆ ಎನ್ನುವದನ್ನು ಚಿತ್ರದಲ್ಲಿ ತೋರಿಸಲಾಗಿದೆ.

ಚಿತ್ರ ನಿರ್ಮಾಣ ಮಾಡಿರುವುದು ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಸಂದೇಶಗಳಿರುವ ಚಿತ್ರಗಳನ್ನೇ ಮಾಡುವ ಭರಸವೆ ವ್ಯಕ್ತಪಡಿಸಿದರು ನಿರ್ಮಾಪಕರು.

ಹೊಸಸಬರ ತಂಡ ಹೊಸ ಆಲೋಚನೆ ಮತ್ತು ಕನಸಿನೊಂದಿಗೆ ನಿರ್ಮಾಣ ಮಾಡಿರುವ ಚಿತ್ರ ಮಂಗಾಟ. ಇದಕ್ಕೆ ಎಲ್ಲಡೆ ಉತ್ತಮ ಪ್ರಶಂಸೆ ಸಿಕ್ಕಿದೆ ಇದರಿಂದ ಪ್ರೇರೇಪಿತರಾಗಿರುವ ನಿರ್ಮಾಪಕ ಸಂಜೀವ್ ಗವಂಡಿ ಮತ್ತು ತಂಡ ಚಿತ್ರದ ಮುಂದುವರಿದ ಭಾಗ ಮಾಡಲು ಮುಂದಾಗಿದೆ.

Write A Comment