ರಾಷ್ಟ್ರೀಯ

ಮಿತ್ತಲ್‌ರವರ ಉಕ್ಕಿನಂತಹ ಬಸ್

Pinterest LinkedIn Tumblr

bus

ಭಾರತೀಯ ಮೂಲದ ಜಗತ್ತಿನ ಅತ್ಯಂತ ಶ್ರೀಮಂತ ಉಕ್ಕು ಉದ್ಯಮಿ ಲಕ್ಷ್ಮೀ ನಿವಾಸ್ ಮಿತ್ತಲ್, ವಿಶ್ವದ ಅತಿದೊಡ್ಡ ಸ್ಟೀಲ್ ಕಂಪನಿ ಆರ್ಸೆಲರ್‌ಮಿತ್ತಲ್ ಹೊಂದಿದ್ದಾರೆ.ಫೋರ್ಬ್ಸ್ ೨೦೧೧ನೇ ಸಾಲಿನ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದ ಮಿತ್ತಲ್ ಮುಂದಿನ ವರುಷಗಳಲ್ಲಿ ಉಕ್ಕು ಉದ್ಯಮ ಕುಸಿತದಿಂದಾಗಿ ಹಿನ್ನಡೆ ಅನುಭವಿಸಿದ್ದರು.

ಹೀಗೆ ಹಲವಾರು ಕಾರಣಗಳಿಂದಾಗಿ ಸುದ್ದಿ ಮಾಡಿರುವ ಉದ್ಯಮಿ ಮಿತ್ತಲ್ ಅವರ ಬಳಿರುವ ಸೂಪರ್ ಲಗ್ಷುರಿ ಬಸ್ ಬಗ್ಗೆ ನೆನಪಿಗೆ ಬರುತ್ತದೆ. ಇತರ ಸೆಲೆಬ್ರಿಟಿಗಳಂತೆ ಮಿತ್ತಲ್ ಕೂಡಾ ಆಡಂಬರ ವಾಹನ ಪ್ರೇಮಿ ಎಂಬುದನ್ನು ಇದರಿಂದಲೇ ಗಮನಿಸಬಹುದಾಗಿದೆ. ತಮ್ಮ ವಾಣಿಜ್ಯ ಪ್ರವಾಸಗಳಿಗಾಗಿ ಮಿತ್ತಲ್ ಇದೇ ಐಷಾರಾಮಿ ಬಸ್ಸನ್ನು ಬಳಸಿಕೊಳ್ಳುತ್ತಾರೆ.

ಸಾಮಾನ್ಯ ಸೆಲೆಬ್ರಿಟಿಗರ ಸಾಲಿನಲ್ಲಿ ಮಿತ್ತಲ್ ಸೂಪರ್ ಲಗ್ಷುರಿ ಬಸ್ ಗುರುತಿಸಿಕೊಂಡರೆ ತಪ್ಪಾದಿತು. ಯಾಕೆಂದರೆ ಮಿತ್ತಲ್ ಅವರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಸೂಪರ್ ಲಗ್ಷುರಿ ಬಸ್ ತಮ್ಮದಾಗಿಸಿಕೊಂಡಿದ್ದಾರೆ.

ನೀವು ಪಂಚತಾರಾ ಹೋಟೆಲ್‌ನಲ್ಲಿ ಲಭ್ಯವಾಗಲಿರುವ ಎಲ್ಲ ಐಷಾರಾಮಿ ಸೌಲಭ್ಯಗಳನ್ನು ಈ ಸೂಪರ್ ಲಗ್ಷುರಿ ಬಸ್ಸಿನಲ್ಲಿ ನಿರೀಕ್ಷಿಸಬಹುದಾಗಿದೆ. ಇದರಿಂದಲೇ ತಂತ್ರಜ್ಞಾನ ಎಟ್ಟರ ಮಟ್ಟಿಗೆ ಮುಂದುವರಿದಿದೆ ಎಂಬುದನ್ನು ತುಲನೆ ಮಾಡಿ ನೋಡಬಹುದಾಗಿದೆ.

ಒಂದೇ ವಾಕ್ಯದಲ್ಲಿ ಹೇಳುವುದಾದ್ದಲ್ಲಿ ಇದು ಲಕ್ಷ್ಮೀ ಮಿತ್ತಲ್ ಅವರ ಮನೆಯಿಂದ ಹೊರಗಿರುವ ಮನೆಯಾಗಿದೆ. ಅಂದರೆ ತಮ್ಮ ಮನೆಯಲ್ಲಿ ಲಭಿಸುವ ಎಲ್ಲ ತರಹದ ಆಡಂಬರದ ಸೌಲಭ್ಯಗಳು ಈ ಬಸ್ಸಿನಲ್ಲಿ ಲಭ್ಯವಾಗಲಿದೆ.

ಕೆಲವು ವರ್ಷಗಳ ಹಿಂದೆ ಮಿತ್ತಲ್ ಪುತ್ರಿಯ ಆಡಂಬರದ ಮದುವೆ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇತ್ತ ಮಿತ್ತಲ್ ಬಸ್ ಗಮನಿಸಿದ್ದಲ್ಲಿ, ಐಷಾರಾಮಿ ಲಿವಿಂಗ್ ರೂಂ, ಬೆಡ್ ರೂಂ ಹಾಗೂ ಶೌಚಾಲಯ ಸೌಲಭ್ಯಗಳಿರುತ್ತದೆ.

ಈ ಎಲ್ಲ ಕೋಣೆಗಳು ಹವಾ ನಿಯಂತ್ರಿತವಾಗಿರಲಿದೆ. ಗೋಡೆಗಳಲ್ಲಿ ವರ್ಣರಂಚಿತ ಚಿತ್ರಗಳ ಚಿತ್ತಾರದೊಂದಿಗೆ ಮನರಂಜನೆಗಾಗಿ ಎಲ್‌ಸಿಡಿ ಪರದೆಗಳ ಸೌಲಭ್ಯವಿರಲಿದೆ.

ಇನ್ನು ಐಷಾರಾಮಿ ಬಸ್ಸಿನಲ್ಲಿ ಸೂಪರ್ ಕಾರನ್ನು ಹೊತ್ತೊಯ್ಯಲು ಅವಕಾಶ ಮಾಡಿಕೊಡಲಾಗಿದೆ. ಇದು ಮಿತ್ತಲ್ ಪಯಣವನ್ನು ಇನ್ನಷ್ಟು ಸುಖಕರವೆನಿಸಲಿದೆ.

ಅಂತಿಮವಾಗಿ ಇದನ್ನು ಮನೆ ಅನ್ನುವದಕ್ಕಿಂತಲೂ ಲಕ್ಷ್ಮೀ ಮಿತ್ತಲ್ ಅರಮನೆ ಎಂದು ವಿಶ್ಲೇಷಿಸುವುದು ಹೆಚ್ಚು ಸೂಕ್ತವೆನಿಸುವುದು.

Write A Comment