ಅಂತರಾಷ್ಟ್ರೀಯ

ರಾಗಿ ಹಾಲು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

Pinterest LinkedIn Tumblr

raagi

ರಾಗಿ ಮುದ್ದೆ ಉಂಡವ ಬೆಟ್ಟ ಕೀಳುವಷ್ಟು ಶಕ್ತಿ ಹೊಂದಿರುತ್ತಾನೆ. ಮುದ್ದೆ ತಿಂದರೆ ಯಾವ ರೋಗವು ಹತ್ತಿರ ಸುಳಿಯದು. ರಾಗಿ ಮುದ್ದೆ ಬಗ್ಗೆ ಹತ್ತು ಹಲವು ವ್ಯಾಖ್ಯಾನಗಳಿವೆ. ರಾಗಿಯ ಮಹತ್ವವನ್ನು ದಾಸರು ವರ್ಣಿಸಿದ್ದಾರೆ.

ರಾಗಿಯಲ್ಲಿ ಎಷ್ಟು ವಿಧಗಳಿವೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಒಂದು, ಎರಡು, ಮೂರು, ನಾಲ್ಕು… ಬರೋಬ್ಬರಿ 53 ತಳಿಗಳ ರಾಗಿ ಇವೆ.

ರಾಗಿಯಲ್ಲೂ ಇಷ್ಟೊಂದು ಬಗೆಯೇ? ಅವುಗಳನ್ನು ನೋಡಬೇಕೇ ಹಾಗಾದರೆ ಸಾಂಸ್ಕೃತಿಕ ನಗರಿ ಬೋಗಾದಿಯಲ್ಲಿರುವ ಮಾತಾ ಅಮೃತಾನಂದಮಯಿರವರ ಅಮೃತ ವಿದ್ಯಾಲಯ ಶಾಲೆಗೆ ಭೇಟಿ ನೀಡಬೇಕು.

ಈ ಶಾಲೆ ದೇಸಿಯ ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಒತ್ತು ನೀಡಿದೆ. ಶಾಲಾ ಹಂತದಲ್ಲೆ ಮಕ್ಕಳಿಗೆ ಭಾರತೀಯ ಆಹಾರ ಪದ್ಧತಿ ಬಗ್ಗೆ ಆಸಕ್ತಿ -ಅರಿವು ಮೂಡಿಸುತ್ತದೆ. ರಾಸಾಯನಿಕ ವಸ್ತುಗಳನ್ನು ಬಳಸದೆ ನೈಸರ್ಗಿಕವಾಗಿ ಬೆಳೆಯುವ ಬೆಳೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ರಾಗಿ ಮುದ್ದೆ ಜತೆಗೆ ರಾಗಿ ಹಾಲು ಕೂಡ ಲಭ್ಯವಿದೆ . ರಾಗಿ, ಹಾಲು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ ಅಮೃತ ವಿದ್ಯಾಸಂಸ್ಥೆ ಶಿಕ್ಷಿಕಿ ಗೀತಾ.

ಆಧುನಿಕ ಜೀವನದಲ್ಲಿ ಒತ್ತಡದಲ್ಲೆ ಬದುಕಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮಧುಮೇಹಿಗಳಿಗೆ ರಾಗಿ ಉತ್ಪನ್ನಗಳು ರಾಮಬಾಣವಿದ್ದಂತೆ. ಆಧುನಿಕ ಯುಗದಲ್ಲಿ ರಾಗಿ ಪ್ರಮುಖ ಸ್ಥಾನ ಪಡೆಯುತ್ತಿದೆ. ಇನ್ನಷ್ಟು ದಶಕಗಳು ಕಳೆದರೆ ಅಡುಗೆ ಮನೆಯಲ್ಲಿ ರಾಗಿ ನಂ. 1 ಸ್ಥಾನ ಪಡೆಯಲಿದೆ.

ಇದೀಗ ರಾಗಿ ಹಾಲು ಜನಪ್ರಿಯತೆ ಪಡೆದು ಕೊಳ್ಳುತ್ತಿದೆ. ರಾಗಿ ಹಾಲು ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ವೈದ್ಯರು. ರಾಗಿಯನ್ನು 3 ತಾಸು ನೀರಿನಲ್ಲಿ ನೆನಸಬೇಕು ಅದನ್ನು ತೆಂಗಿನ ಕಾಯಿ, ಏಲಕ್ಕಿ, ಬೆಲ್ಲದ ಜತೆ ಬೆರಸಿ ನುಣ್ಣಗೆ ರುಬ್ಬಬೇಕು. ಈ ರೀತಿ ರುಬ್ಬಿದಾಗ ಬರುವ ಹಾಲನ್ನು ಕುಡಿಯಲು ಯೋಗ್ಯ ದೇಹಕ್ಕೂ ತಂಪು. ಆರೋಗ್ಯಕ್ಕೂ ಸಹಕಾರಿ.

Write A Comment