ಕರ್ನಾಟಕ

ಅಪಘಾತ ವಿಚಾರಕ್ಕೆ ಜಗಳ ಗುಂಪುಘರ್ಷಣೆಗೆ ಮಹಿಳೆ ಬಲಿ

Pinterest LinkedIn Tumblr

raich

ರಾಯಚೂರು: ದ್ವಿಚಕ್ರ ವಾಹನ ಅಪಘಾತ ಅವಾಂತರ ಗುಂಪು ಘರ್ಷಣೆಯಾಗಿ ತಿರುಗಿ, ಐವರು ಗಂಭೀರ ಗಾಯಗೊಂಡು, ಓರ್ವ ಮಹಿಳೆ ಬಲಿಯಾಗಿದ್ದಾರೆ.

ಅಪಾರ ಅಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾದ ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ನಡೆಸಿ, ಉದ್ವಿಗ್ನ ಸ್ಥಿತಿ ನಿಯಂತ್ರಣಕ್ಕೆ ತಿಮ್ಮಾಪೂರು ಪೇಟೆ – ಹರಿಜನವಾಡದಲ್ಲಿ ಜಿಲ್ಲಾಡಳಿತ 144 ನಿಷೇಧಾಜ್ಞೆ ಜಾರಿಗೊಳಿಸಿ, ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಶ್ರೀ ಮಾಣಿಕ್ ಪ್ರಭು ದೇವಸ್ಥಾನ ರಸ್ತೆಯ ವೀರಸಾರ್ವಕರ್ ವೃತ್ತದಲ್ಲಿ ದ್ವಿಚಕ್ರ ವಾಹನ ಮಧ್ಯೆ ಸಣ್ಣ ಅಪಘಾತ, ಕ್ಷುಲ್ಲಕ ಜಗಳ ನಗರದ ತಿಮ್ಮಾಪೂರು ಪೇಟೆ-ಹರಿಜನವಾಡದಲ್ಲಿ ಭಾರೀ ಉದ್ವಿಗ್ನತೆಗೆ ಕಾರಣವಾದ ಪರಿಣಾಮ ಸ್ಟೇಷನ್ ರಸ್ತೆಯಲ್ಲಿರುವ ಕಾಂಗ್ರೆಸ್ ನಾಯಕ ಮುರಳಿ ಯಾದವ್ ಅವರಿಗೆ ಸೇರಿದ ಹೈದ್ರಾಬಾದ್ ಬಿರಿಯಾನಿ ಹೌಸ್ ದ್ವಂಸ ಹಾಗೂ ಮಾಣಿಕ್ ಪ್ರಭು ರಸ್ತೆಯಲ್ಲಿರುವ ಕಛೇರಿಯನ್ನು ಸುಟ್ಟು ಭಸ್ಮ ಮಾಡಿದ ಘಟನೆ ನಗರದ ಅರ್ಧಭಾಗ ತಲ್ಲಣ್ಣಗೊಳ್ಳುವಂತೆ ಮಾಡಿದೆ.

ವೀರಸಾರ್ವಕರ್ ವೃತ್ತದಲ್ಲಿ ಮರುಳಿ ಯಾದವ್ ಅವರ ಸಹೋದರ ಹರೀಶ್ ಯಾದವ್ ಹಾಗೂ ಹರಿಜನವಾಡಕ್ಕೆ ಸೇರಿದ ಎಲ್‌ಐಸಿ ಸಿಬ್ಬಂದಿ ತಿಮ್ಮಪ್ಪ ಇವರ ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ನಗರದ ಎರಡೂ ಬಡಾವಣೆಗಳು ಹತ್ತಿ ಉರಿಯುವಂತೆ ಮಾಡಿತು. ಅಪಘಾತಕ್ಕೆ ಸಂಬಂಧಿಸಿ ಹರೀಶ್ ಯಾದವ್ ಮತ್ತು ಅವರ ಗುಂಪು ತಿಮ್ಮಪ್ಪ ಹಾಗೂ ರವಿ ಇವರ ಮೇಲೆ ಹಲ್ಲೆ ಮಾಡಿದಗ ಘಟನೆ ಪರಿಸ್ಥಿತಿ ವಿಕೋಪಕ್ಕೆ ತಿರುಗುವುದಕ್ಕೆ ಕಾರಣವಾಯಿತು.

ಹಲ್ಲೆಯಲ್ಲಿ ತಿಮ್ಮಪ್ಪ ತೀವ್ರ ಗಾಯಗೊಂಡು ಪ್ರಜ್ಞಾಹೀತ ಸ್ಥಿತಿಗೆ ಗುರಿಯಾದರು, ಜಗಳ ಬಿಡಿಸಲು ಬಂದ ತಿಮ್ಮಪ್ಪ ಅವರ ಸಂಬಂಧಿ ಯಂಕಣ್ಣ, ಮುನಿಸ್ವಾಮಿ ಅವರ ಮೇಲೆಯೂ ಹಲ್ಲೆ ಮಾಡಲಾಯಿತು. ಈ ಸುದ್ದಿ ಕಾಡ್ಗಿಚ್ಛಿನಂತೆ ಹರಡಿ, ಹರಿಜನವಾಡದ ಯುವಕರ ಗುಂಪು ರೊಚ್ಚಿಗೇಳುವಂತೆ ಮಾಡಿತು.

ದ್ವಿಚಕ್ರ ಅಪಘಾತ ಘಟನೆಯ ಕೆಲವೇ ಗಂಟೆಗಳಲ್ಲಿ ಹರಿಜನವಾಡದ ಸುಮಾರು 40-50 ಯುವಕರ ಗುಂಪು ಬಡಿಗೆ, ಚೈನ್ ಹಿಡಿದು ಸ್ಟೇಷನ್ ರಸ್ತೆಗೆ ಧಾವಿಸಿ, ಹರೀಶ್ ಯಾದವ್ ಅವರಿಗೆ ಸೇರಿದ ಹೈದ್ರಾಬಾದ್ ಬಿರಿಯಾನಿ ಹೌಸ್ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ದ್ವಂಸಗೊಳಿಸಲಾಯಿತು. ದಾಳಿಯಿಂದ ಬೆದರಿದ ಗ್ರಾಹಕರು ಮತ್ತು ಸೇವಕರು ದಿಕ್ಕಾಪಾಲು ಪರಾರಿಯಾದರು. ಈ ದಾಳಿಯಲ್ಲಿ ಬಿರಿಯಾನಿ ಹೌಸ್‌ನ ಸೇವಕ ಮಹಾಂತೇಶ ಎಂಬುವವರು ತೀವ್ರಗಾಯಗೊಂಡಿದ್ದು, ಗಾಯಾಳುಗಳ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ಸ್ವತಃ ಎಸ್‌ಪಿ ಡಾ. ಚೇತನಸಿಂಗ್ ರಾಥೋರ ಅವರು ಘಟನಾ ಸ್ಥಳದಲ್ಲಿಯೇ ಉಳಿದು ಕಾರ್ಯನಿರ್ವಹಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ನೇತಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಮುಖಂಡರಾದ ಮುರಳಿಯಾದವ್, ಹರೀಶ್ ಯಾದವ್, ಸಿದ್ದು ಯಾದವ್ ಮತ್ತು ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿರಿಯಾನಿ ಹೌಸ್ ದ್ವಂಸ ಮತ್ತು ದೊಂಬಿಗೆ ಸಂಬಂಧಿಸಿ 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Write A Comment