ಕರ್ನಾಟಕ

ವಿಜ್ಞಾನ , ಆಧ್ಯಾತ್ಮಕ್ಕೂ ಅವಿನಾಭಾವ ಸಂಬಂಧ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

Pinterest LinkedIn Tumblr

nirmalaಚಿಕ್ಕಮಗಳೂರು, ಮೇ 14- ವಿಜ್ಞಾನ ಮತ್ತು ಆಧ್ಯಾತ್ಮಕ್ಕೆ ಒಂದಕ್ಕೊಂದು ಅವಿನಾಭಾವ ಸಂಬಂಧವಿದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ. ಆಧ್ಯಾತ್ಮವಿಲ್ಲದೆ ವಿಜ್ಞಾನವು ಬೆಳೆಯುವುದಿಲ್ಲ. ಇದೇ ವೇಳೆ ಧ್ಯಾನದ ಮೂಲಕ ಆಧ್ಯಾತ್ಮ. ನಂತರ ನಿಮ್ಮ ನಿಜವಾದ ಶಿಕ್ಷಣ ಆರಂಭವಾಗುತ್ತದೆ ಎಂದು ಇಲ್ಲಿ ನಡೆದ ಆದಿಚುಂಚನಗಿರಿ ಮಹಾ ವಿದ್ಯಾಲಯದ ಅಂತಿಮ ವರ್ಷದ ಬಿಇ, ಎಂಟೆಕ್, ಎಂಬಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ತಂದೆ-ತಾಯಿಯರಿಗೆ ಗೌರವ, ಸಂಸ್ಕಾರ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಇದೇ ವೇಳೆ ಆಧ್ಯಾತ್ಮದತ್ತವೂ ಕೂಡ ಒಲವು ಬೆಳೆಸಿಕೊಂಡರೆ ಸಾಧನೆ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಒಂದಕ್ಕೊಂದು ಪೂರಕ. ಆದರೆ ವಿಜನ ಮತ್ತು ಆಧ್ಯಾತ್ಮವು ಬೆರೆತರೆ ಸಿಗುವ ಮಲ್ಯ ಹೆಚ್ಚು. ದೇವಾಲಗಳು ಮತ್ತು ಮಠಗಳು ದೇವರಿಗೆ ನಮ್ಮ ಭಕ್ತಿ ಭಾವನೆಗಳ ಸಂದೇಶಗಳನ್ನು ದೇವರಿಗೆ ತಲುಪಿಸುವ ಮಾಧ್ಯಮಗಳಿದ್ದಂತೆ.

ಹಾಗೆಯೇ ಮುನುಷ್ಯರನ್ನು ಸರಿ ದಾರಿಯಲ್ಲಿ ನಡೆಸುವ ಕೇಂದ್ರಗಳು. ಇಂದು ನಿಮಗೆ ಕಾಲೇಜಿನ ಕೊನೆಯ ದಿನವಲ್ಲ. ಈ ದಿನದಿಂದ ನಿಮ್ಮಗಳ ಜೀವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆಗಳನ್ನು ಇಡಲು ಪ್ರಯತ್ನಿಸಬೇಕು. ನಿಮ್ಮಯ ಹೃದಯದಲ್ಲಿ ತಂದೆ ತಾಯಿಗಳಿಗೆ ಒಳ್ಳೆಯ ಸ್ಥಾನ ನೀಡಿ ಅವರುಗಳನ್ನು ಗೌರವಿಸಿ. ರಾಷ್ಟ್ರವನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮಯ ಪ್ರಯತ್ಮ ನಿರಂತರವಾಗಿ ಸಾಗಬೇಕು ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ.ಕೆ.ಸುಬ್ಬರಾಯರನ್ನು ಪ್ರಶಂಸಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಅವರ ಶ್ರಮ ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕ ಪದ್ಮಶ್ರೀ ಡಾ. ಎಂ.ಅಣ್ಣಾದುರೈ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಚಿಕ್ಕಮಗಳೂರು ಶಾಖಾ ಮಠದ ಶ್ರೀ ಗುಣನಾಥಸ್ವಾಮಿಗಳು, ಹಾಸನ ಶಾಖೆಯ ಶ್ರೀ ಶಂಭುನಾಥ ಸ್ವಾಮೀಜಿ, ಹುಳಿಮಾವು ಶಾಖೆಯ ಶ್ರೀ ಶೈಲನಾಥ ಸ್ವಾಮೀಜಿ, ಆದಿಹಳ್ಳಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಇಸ್ರೋದ ವಿಜ್ಞಾನಿ ಡಾ.ಹಿರಿಯಣ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಸಾಯಿ ನಂದನ್ ವೇದಘೋಷದ ಮೂಲಕ ಸಭಿಕರನ್ನು ಮಂತ್ರ ಮುಗ್ಧಗೊಳಿಸಿದರು.

Write A Comment