ಅಂತರಾಷ್ಟ್ರೀಯ

ನೆಚ್ಚಿನ ದೇಗುಲಕ್ಕೆ ಭೇಟಿ ನೀಡಿದ ಲಂಡನ್‌ನ ಮುಸ್ಲಿಂ ಮೇಯರ್‌

Pinterest LinkedIn Tumblr

Sadiq-Khanಲಂಡನ್‌: ಲಂಡನ್‌ನ ಮೊದಲ ಮುಸ್ಲಿಂ ಮೇಯರ್‌ ಸಾದಿಕ್‌ ಖಾನ್‌ ನಗರದ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ದೇಗುಲಕ್ಕೆ ಭೇಟಿ ನೀಡಿದ ಚಿತ್ರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

ದೇಗುಲದಲ್ಲಿದ್ದ ಜನರ ಜತೆ ಮಾತುಕತೆ ನಡೆಸಿದ ಖಾನ್, ಕೆಲವು ಪೂಜೆ ವಿಧಾನಗಳಲ್ಲೂ ಭಾಗಿಯಾಗಿದ್ದರು. ‘ಲಂಡನ್‌ನಲ್ಲಿರುವ ನನ್ನ ನೆಚ್ಚಿನ ಸ್ಥಳಗಳ ಪೈಕಿ ಸ್ವಾಮಿ ನಾರಾಯಣ ಮಂದಿರ ಸಹ ಒಂದು. ಈ ವಾರಾಂತ್ಯ ದೇಗುಲಕ್ಕೆ ಭೇಟಿ ನೀಡಿದ್ದು ಖುಷಿಯಾಗಿದೆ,’ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.

‘ಮೇಯರ್‌ ಆಗಿ, ಲಂಡನ್‌ನ ಭಾರತೀಯ ಸಮುದಾಯದ ಪರ ನಿಲ್ಲುತ್ತೇನೆ. ಭಾರತದ ಜತೆಗಿನ ಲಂಡನ್‌ ಸಂಬಂಧವನ್ನು ಬಲಪಡಿಸುತ್ತೇನೆ. ಭಾರತಕ್ಕೆ ಭೇಟಿ ನೀಡಲಿರುವ ವಾಣಿಜ್ಯ ನಿಯೋಗದ ನೇತೃತ್ವಹಿಸುವ ಅವಕಾಶ ಎದುರು ನೋಡುತ್ತಿದ್ದೇನೆ,’ಎಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪಾಕಿಸ್ತಾನಿ ವಲಸಿಗ, ಬಸ್‌ ಚಾಲಕನ ಪುತ್ರ ಸಾದಿಕ್‌ ಖಾನ್‌, ಕನ್ಸರ್ವೇಟಿವ್‌ ಪಕ್ಷದ ಸ್ಪರ್ಧಿ ಜಾಕ್‌ ಗೋಲ್ಡ್‌ಸ್ಮಿತ್‌ ಅವರನ್ನು 13,10,143 ಮತಗಳಿಂದ ಸೋಲಿಸಿದ್ದರು. ಈ ಮೂಲಕ ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಮೊದಲ ಮುಸ್ಲಿಂ ಮೇಯರ್‌ ಆಗಿ ಇತಿಹಾಸ ನಿರ್ಮಿಸಿದ್ದಾರೆ.

Write A Comment