ರಾಷ್ಟ್ರೀಯ

ರಾಜನ್ ಕೊಲೆ ಹಿಂದೆ ರಾಜಕೀಯ ಕೈವಾಡ!

Pinterest LinkedIn Tumblr

rajanಪಾಟ್ನಾ: ಬಿಹಾರದ ಹಿಂದೂಸ್ತಾನ್ ಪತ್ರಿಕೆಯ ಪತ್ರಕರ್ತ ರಾಜ್‌ದೇವ್ ರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಅವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಸಿವಾನ್‌ ನ ಎಸ್‌ಪಿ ಸೌರಭ್ ಕುಮಾರ್ ಹೇಳಿದ್ದಾರೆ.

ಜತೆಗೆ ರಂಜನ್ ಕೊಲೆಯಲ್ಲಿ ಆರು ಮಂದಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಅದರಲ್ಲಿ ಈಗಾಗಲೆ ಮೂವರನ್ನು ಬಂಧಿಸಲಾಗಿದೆ. ಭಾನುವಾರದೊಳಗೆ ಕೊಲೆಗಾರರನ್ನು ಬಂಧಿಸುವುದಾಗಿ ಸೌರಭ್ ಭರವಸೆ ನೀಡಿದ್ದಾರೆ. ನಮಗೆ ಬಿಹಾರ ಪೊಲೀಸರ ಮೇಲೆ ನಂಬಿಕೆ ಇಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ರಂಜನ್ ಕುಟುಂಬಸ್ಥರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಂಜನ್ ಕೊಲೆಗೂ ಜನತಾ ದಳ ಪಕ್ಷದ ನಾಯಕ ಮಹಮ್ಮದ್ ಶಹಾಬುದ್ದೀನ್‌ಗೂ ಸಂಬಂಧ ಇದೆ ಎನ್ನಲಾಗಿದೆೆ. 2014ರಲ್ಲಿ ಶ್ರೀಕಂಠ್ ಭಾರ್ತಿ ಎಂಬುವವರ ಕೊಲೆ ನಡೆದಿದ್ದು, ಕೊಲೆಯ ಹಿಂದೆ ಶಹಾಬುದ್ದೀನ್ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ತಿಂಗಳಿನಿಂದ ರಂಜನ್ ತನಿಖೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

Write A Comment