ಅಂತರಾಷ್ಟ್ರೀಯ

ಕಾಶ್ಮೀರಿಗಳಿಂದ ಪಾಕ್ ಸರಕಾರದ ವಿರುದ್ದ ಪ್ರತಿಭಟನೆ

Pinterest LinkedIn Tumblr

Protestಲಂಡನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಲಂಡನ್‌ನ ಪಾಕಿಸ್ತಾನ ಹೈಕಮಿಷನರ್ ಕಚೇರಿಯ ಎದುರು ಕಾಶ್ಮೀರಿಗಳು ಶನಿವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ.

ಅಲ್ಲದೆ, ಕಾಶ್ಮೀರ ಸ್ವಾತಂತ್ರ್ಯ ಪರ ಹೋರಾಟ ನಡೆಸಿದ ಸರ್ದಾರ್ ಆರಿಫ್ ಶಾಹಿದ್ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕಾಶ್ಮೀರಿಗಳು ಪಾಕಿಸ್ತಾನ ಸೇನೆ ವಿರುದ್ಧ ಬ್ಯಾನರ್‌ಗಳನ್ನು ಹಿಡಿದು, ಶಾಹಿದ್ ಸಾವಿಗೆ ಪಾಕ್ ಸೈನಿಕರೇ ಕಾರಣ ಎಂದು ಘೋಷಣೆ ಕೂಗಿದರು.

‘ಶಾಹಿದ್, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದ್ದರಿಂದ ಈ ಹತ್ಯೆಯ ಹಿಂದೆ ಪಾಕಿಸ್ತಾನ ಬೇಹುಗಾರಿಕಾ ಪಡೆಯ ಕೈವಾಡವಿದೆ ಎಂಬುದು ನಮಗೆ ತಿಳಿದಿದೆ’ ಎನ್ನುವುದು ಪ್ರತಿಭಟನಾಕಾರರ ಆರೋಪ. ಶಾಹಿದ್ ಕಾಶ್ಮೀರ ಸ್ವಾತಂತ್ರ್ಯ ಪರ ಹೋರಾಟ ನಡೆಸಿದ ನಾಯಕನಾಗಿದ್ದು, 2013ರ ಮೇ 14ರಂದು ರಲ್ಪಿಂಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದ. ಈ ಪ್ರಕರಣದ ತನಿಖೆ ನಡೆಸುವಂತೆ ಈಗ ಕಾಶ್ಮೀರಿಗಳು ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದಾರೆ

Write A Comment