ಕರ್ನಾಟಕ

ಬಲ್ಬ್ ನಲ್ಲಿ ತಲೆ ಸಿಕ್ಕಿಸಿಕೊಂಡು ಜಿಂಕೆ ಒದ್ದಾಟ!

Pinterest LinkedIn Tumblr

jiವಿದ್ಯುತ್‌ ದೀಪಕ್ಕೆ ಅಳವಡಿಸುವ ಅಲಂಕಾರಿಕ ಬಲ್ಬ್ ನಲ್ಲಿ ತನ್ನ ತಲೆಯನ್ನು ಸಿಲುಕಿಸಿಕೊಂಡು, ಮುಂದೇನು ಮಾಡಬೇಕೆಂದು ತಿಳಿಯದೇ ಅಡ್ಡಾಡುತ್ತಿದ್ದ ಜಿಂಕೆಯೊಂದರ ಕಥೆಯಿದು. ಹೌದು ನ್ಯೂಯಾರ್ಕ್‌ನ ಲಾಂಗ್‌ ದ್ವೀಪದ ಅಡವಿಯೊಂದರಲ್ಲಿ ಜಿಂಕೆ ಗಮನ ಸೆಳೆದಿದೆ. ಕಾರಣ ಅದರ ತಲೆಗೆ ಸಿಲುಕಿದ್ದ ಬಲ್ಬ್.

ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ಜಿಂಕೆ ತಲೆಗೆ ಸಿಕ್ಕಿದ್ದ ಬಲ್ಬ್ ತೆಗೆಯಲು ಯತ್ನಿಸಿದ್ದಾರೆ. ಆದರೆ, ಅರಣ್ಯ ಸಿಬ್ಬಂದಿಯ ಕೈ ಜಾರಿ ಜಿಂಕೆ ಅಲ್ಲಿಂದ ಪರಾರಿಯಾಗಿದೆ.

ಕೊನೆಗೆ ಅದನ್ನು ಪತ್ತೆಹಚ್ಚಿದ ಅಧಿಕಾರಿಗಳು ನಿಧಾನವಾಗಿ ಬಲ್ಬ್ ಮೇಲೆ ಮೇಲೆ ತಮ್ಮ ಕೋಟನ್ನು ಹಾಕಿ ಗಟ್ಟಿಯಾಗಿ ಹಿಡಿದಿದ್ದಾರೆ. ಆಗ ಹಾಗೂ ಹೀಗೂ ಜಿಂಕೆ ತಲೆಯಿಂದ ಬಲ್ಬ್ ಬೇರ್ಪಟ್ಟಿದೆ. ತಲೆ ಆಚೆ ಬರುತ್ತಿದ್ದಂತೆ ಬದುಕಿದೆಯಾ ಬಡ ಜೀವವೇ ಎಂದು ಒಂದೆ ಸಮನೇ ಓಟ ಕಿತ್ತಿದೆ.
-ಉದಯವಾಣಿ

Write A Comment