ಕರ್ನಾಟಕ

ದೇಶದ ಅಪಘಾತದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ ! 2015ರಲ್ಲಿ ಬರೋಬ್ಬರಿ 10,856 ಮಂದಿ ಬಲಿ-ಬೆಂಗಳೂರು ನಗರದಲ್ಲಿ ನಿತ್ಯ ಇಬ್ಬರು ಅಪಘಾತದಿಂದ ಸಾವು

Pinterest LinkedIn Tumblr

A crane tows the remains of KSRTC bus which collided with a tree near Birur in Chikmagalore on Tuesday. 5 people were reported to be dead and 35 were injured. –KPN

ಕಳೆದ ವರ್ಷ ದೇಶಾದ್ಯಂತ ಅತೀ ಹೆಚ್ಚು ಅಪಘಾತ ಸಂಭವಿಸಿದ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ೪ನೇ ಸಾಲಿನಲ್ಲಿದೆ.! 2015ರಲ್ಲಿ ರಾಜ್ಯದಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಬರೋಬ್ಬರಿ 10,856 ಮಂದಿ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ ನಿತ್ಯ ಇಬ್ಬರು ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ.

ಈ ಅಂಕಿ ಅಂಶಗಳು ರಾಜ್ಯದಲ್ಲಿ ನಡೆಯುತ್ತಿರುವ ಅಪಘಾತದ ತೀವ್ರತೆಗೆ ಸಾಕ್ಷಿಯಾಗಿವೆ. ಕರ್ನಾಟಕ ಅಪಘಾತದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ ಮೊದಲ ಮೂರು ಸ್ಥಾನದಲ್ಲಿ ಕ್ರಮವಾಗಿ ಉತ್ತರಪ್ರದೇಶ (೧೭,೬೬೬), ತಮಿಳುನಾಡು (೧೫,೬೪೨) ಹಾಗೂ ಮಹಾರಾಷ್ಟ್ರ (೧೩,೨೧೨) ರಾಜ್ಯಗಳಿವೆ.

ವಾಹನ ಸವಾರರಿಗೆ ರಾಜಧಾನಿ ಬೆಂಗಳೂರು ಕೂಡ ಸೇಫ್ ಅಲ್ಲ. ಇಲ್ಲಿಯೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ೨೦೧೬ರ ಜ.೧ರಿಂದ ಮಾ.೩೧ರವರೆಗೆ ೧,೨೩೩ ಅಪಘಾತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ೧೯೦ ಮಂದಿ ಅಸುನೀಗಿದ್ದಾರೆ. ೧೦೫೧ ಮಂದಿಗೆ ಗಾಯವಾಗಿದೆ.

ಬೆಂಗಳೂರು ಸೇರಿ ರಾಜ್ಯದಲ್ಲಿ ಹೆಚ್ಚು ಅಪಘಾತಗಳು ಸಂಭವಿಸಲು ಅವೈಜ್ಞಾನಿಕ ರಸ್ತೆ ನಿರ್ಮಾಣ, ಉಬ್ಬುಗಳನ್ನು ಹಾಕಿರುವುದು, ಕಿರಿದಾದ ಸೇತುವೆಗಳು, ಅಪಾಯಕಾರಿ ತಿರುವು, ಹೆದ್ದಾರಿಗಳಲ್ಲಿ ಮೇಲ್ಸೇತುವೆ. ಜೊತೆಗೆ ಅಂಡರ್‌ಪಾಸ್ ಇಲ್ಲದೆ ಇರುವುದು, ಅತೀ ವೇಗದ ಚಾಲನೆ ಮತ್ತು ಅನನುಭವಿ ಚಾಲಕರು, ರಸ್ತೆ ಬದಿ ಸೂಚನಾ ಫಲಕ ಅಳವಡಿಸದೆ ಇರುವುದು, ಮದ್ಯದ ಅಮಲಿನಲ್ಲಿ ಚಾಲನೆ ಪ್ರಮುಖ ಕಾರಣಗಳಾಗಿವೆ.

ಅಪಾಯಕಾರಿ ಹೆದ್ದಾರಿಗಳು
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಬೆಳಗಾವಿ-ಬಾಗಲಕೋಟೆ, ಗೋಕಾಕ-ಸವದತ್ತಿ, ಚಿಕ್ಕೋಡಿ-ಅಥಣಿ, ಪುಣೆ-ಬೆಂಗಳೂರು, ಗೋಕಾಕ, ಅಥಣಿ, ರಾಮದುರ್ಗ ರಸ್ತೆಗಳು, ಹುಬ್ಬಳ್ಳಿಯ ಗಬ್ಬೂರು-ನರೇಂದ್ರ ಬೈಪಾಸ್, ಗದಗ-ಹುಬ್ಬಳ್ಳಿ, ನರಗುಂದ-ಬಾಗಲಕೋಟೆ ಹಾಗೂ ನರಗುಂದ-ಹುಬ್ಬಳ್ಳಿ ಹೆದ್ದಾರಿಗಳು ಹೆಚ್ಚು ಅಪಘಾತ ಸಂಭವಿಸುವ ರಸ್ತೆಗಳಾಗಿವೆ.

ಕೊಪ್ಪಳದಲ್ಲಿ ಟೆಂಗೂಂಟಿ ಕ್ರಾಸ್, ಕ್ಯಾದಿಗುಪ್ಪಾ ಕ್ರಾಸ್, ಬೋದೂರು ಕ್ರಾಸ್, ಕಟಗಮರಿ ಕ್ರಾಸ್. ರಾಯಚೂರಿನ ಶಕ್ತಿನಗರ-ಬೂದುಗುಂಪ ಹಾಗೂ ರಾಯಚೂರು-ಬೆಳಗಾವಿ ಹೆದ್ದಾರಿ. ಕಲಬುರಗಿಯ ಜೇರಟಗಿ, ನೇದಲಗಿ, ಮಂದೇವಾಲ ಕೆನಲ್, ಮಂದೇವಾಲ್ ಗ್ರಾಮ, ಎಸ್.ಎನ್.ಹಿಪ್ಪರಗಾ ಕ್ರಾಸ್. ಹಾಸನದ ಚನ್ನರಾಯಪಟ್ಟಣ ಚತುಷ್ಪಥ ರಸ್ತೆಗಳು ತುಂಬಾ ಅಪಾಯಕಾರಿ ಎಂದು ಗುರುತಿಸಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೧೩, ಕಾರವಾರದ ೬೩, ಬೆಂ.ಗ್ರಾಮಾಂತರ ಜಿಲ್ಲೆಯ ೪, ೭, ೪೮, ೪೪, ಕೋಲಾರದ ೭೫, ಚಿಕ್ಕಬಳ್ಳಾಪುರದ ೭, ೨೩೪, ಚಿತ್ರದುರ್ಗದ ೧೩, ೪, ೧೫೦, ಬಳ್ಳಾರಿಯ ೫೦, ೬೩ ಶಿವಮೊಗ್ಗದ ೨೦೬, ರಾಮನಗರದ ೨೦೯, ೨೭೫, ೭೫ ಹಾಗೂ ತುಮಕೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ೩೨ರಲ್ಲಿ ಅಪಘಾತಗಳು ಸರ್ವೇ ಸಾಮಾನ್ಯ ಅನ್ನುವಂತಾಗಿದೆ.

ಒಟ್ಟಾರೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಜತೆ ಜಿಲ್ಲಾ, ತಾಲೂಕು ಮಾರ್ಗಗಳಲ್ಲಿಯೂ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ.ವಾಹನ ಚಾಲಕರಿಗೆ ಪರವಾನಗಿ ನೀಡುವ ಸಂದರ್ಭ, ಹೊಸ ವಾಹನ ಮಾಲೀಕರಿಗೆ ರಹದಾರಿ ಪರವಾನಗಿ ನೀಡುವಾಗ ಸಾಕಷ್ಟು ಜಾಗೃತಿ, ಅರಿವು ಮೂಡಿಸುತ್ತೇವೆ. ಆದರೂ ಅಪಘಾತಗಳು ಹೆಚ್ಚುತ್ತಿವೆ ಎನ್ನುತ್ತಾರೆ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ.

ಅಪಾಯಕಾರಿ
ಬೆಳಗಾವಿ-ಬಾಗಲಕೋಟೆ, ಗೋಕಾಕ-ಸವದತ್ತಿ, ಚಿಕ್ಕೋಡಿ-ಅಥಣಿ, ಪುಣೆ-ಬೆಂಗಳೂರು, ಗೋಕಾಕ, ಅಥಣಿ, ರಾಮದುರ್ಗ ರಸ್ತೆಗಳು, ಹುಬ್ಬಳ್ಳಿಯ ಗಬ್ಬೂರು-ನರೇಂದ್ರ ಬೈಪಾಸ್, ಗದಗ-ಹುಬ್ಬಳ್ಳಿ, ನರಗುಂದ-ಬಾಗಲಕೋಟೆ ಹಾಗೂ ನರಗುಂದ-ಹುಬ್ಬಳ್ಳಿ

ಹೆಚ್ಚು ಆಪಾಯಕಾರಿ
ಕೊಪ್ಪಳದಲ್ಲಿ ಟೆಂಗೂಂಟಿ ಕ್ರಾಸ್, ಕ್ಯಾದಿಗುಪ್ಪಾ ಕ್ರಾಸ್, ಬೋದೂರು ಕ್ರಾಸ್, ಕಟಗಮರಿ ಕ್ರಾಸ್. ರಾಯಚೂರಿನ ಶಕ್ತಿನಗರ-ಬೂದುಗುಂಪ ಹಾಗೂ ರಾಯಚೂರು-ಬೆಳಗಾವಿ ಹೆದ್ದಾರಿ. ಕಲಬುರಗಿಯ ಜೇರಟಗಿ, ನೇದಲಗಿ, ಮಂದೇವಾಲ ಕೆನಲ್, ಮಂದೇವಾಲ್ ಗ್ರಾಮ, ಎಸ್.ಎನ್.ಹಿಪ್ಪರಗಾ ಕ್ರಾಸ್. ಹಾಸನದ ಚನ್ನರಾಯಪಟ್ಟಣ ಚತುಷ್ಪಥ ರಸ್ತೆಗಳು.

Write A Comment