
ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ‘ದಳಪತಿ’ ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಚೌಕ’ ಪೂರ್ಣಗೊಳ್ಳುವ ಹಂತಕ್ಕೆ ಬಂದು ನಿಂತಿದೆ.
ಈ ನಡುವೆ ಪ್ರೇಮ್ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಿಂಗಾಪುರಕ್ಕೆ ಭೇಟಿ ನೀಡಿ ಬೇಸಿಗೆ ರಜೆ ಕಳೆದು ಬಂದಿದ್ದಾರೆ.
ಸಾಮಾನ್ಯವಾಗಿ ಚಿತ್ರೀಕರಣ, ಸ್ನೇಹಿತರ ಜೊತೆ ವಿದೇಶಕ್ಕೆ ತೆರಳುವ ಪ್ರೇಮ್, ಈ ಬಾರಿ ಹೆಂಡತಿ, ಮಕ್ಕಳ ಜೊತೆ ಸೇರಿ ವಾರಗಳ ಕಾಲ ವಿದೇಶ ಯಾತ್ರೆ ಮುಗಿಸಿದ್ದಾರೆ.
ಮಕ್ಕಳ ಶಾಲೆಗೆ ರಜೆ ಇದ್ದರಿಂದ ಅವರೊಂದಿಗೆ ಸಿಂಗಾಪುರ್ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ವಾಪಸ್ಸಾಗಿದ್ದು, ಮಕ್ಕಳು ಕೂಡ ಬೇಸಿಗೆ ರಜೆಯನ್ನು ಎಂಜಾಯ್ ಮಾಡಿದ್ದಾರೆ. ಇದರಿಂದ ಅವರು ಥ್ರಿಲ್ ಆಗಿದ್ದಾರೆ.
ಪ್ರವಾಸಕ್ಕೆ ಹೋಗುವ ಮುನ್ನ ಯಾವುದೇ ಫೋನ್, ಸ್ನೇಹಿತರ ಸಂಪರ್ಕವಿಲ್ಲದೆ ವಾರಗಳ ಕಾಲ ಇಬ್ಬರು ಮಕ್ಕಳು ಹಾಗೂ ಪತ್ನಿಯ ಜೊತೆ ರಜೆಯ ಮಜಾದ ಸವಿಯನ್ನು ಸವಿದು ಬಂದಿದ್ದಾರೆ.
ಮಕ್ಕಳಿಗೆ ರಜೆ ಇದ್ದ ಕಾರಣ ಕುಟುಂಬ ಸಮೇತ ಸಿಂಗಾಪುರ್ಗೆ ತೆರಳಿ ಮಕ್ಕಳೊಂದಿಗೆ ಕಾಲ ಕಳೆದು ಬಂದಿದ್ದೇವೆ. ಇದು ನಿಜಕ್ಕೂ ಖುಷಿ ಪಡುವ ಸಂಗತಿ ಎನ್ನುತ್ತಾರೆ ಪ್ರೇಮ್.
ಇನ್ನು ವೃತ್ತಿ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ತೀರಾ ಅಪರೂಪ ಹಾಗೂ ವಿಭಿನ್ನವಾದ ಪಾತ್ರವನ್ನು ‘ಚೌಕ’ ಚಿತ್ರದಲ್ಲಿ ಮಾಡಿದ್ದಾರೆ.
ಅವರೊಂದಿಗೆ ವಿಜಯ ರಾಘವೇಂದ್ರ, ಪ್ರಜ್ವಲ್ ದೇವರಾಜ್, ದಿಗಂತ್ ಕೂಡ ಇದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟ ಸುದೀಪ್ ಕೂಡ ನಟಿಸುವ ವಿಶ್ವಾಸವಿದೆ ಎಂದರು ಪ್ರೇಮ್.
ಚಿತ್ರದಲ್ಲಿ ೨೫ ತಂತ್ರಜ್ಞರು, ಐವರು ಸಂಗೀತ ನಿರ್ದೇಶಕರು, ಐವರು ಗೀತ ರಚನೆಕಾರರು, ಐವರು ನಟರು ನಟಿಸುತ್ತಿರುವ ಚಿತ್ರ ಇದು. ಮೇಲಾಗಿ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರ ನಿರ್ಮಾಣದ ೫೦ನೇ ಚಿತ್ರ. ಈ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ದಾರೆ.
ಚಿಕ್ಕನೆಟಕುಂಟೆ ಜಿ. ರಮೇಶ್