ಮನೋರಂಜನೆ

ಮಾರ್ಕಸ್ ಆಲ್‌ರೌಂಡ್ ಆಟ: ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ 9 ರನ್‌ಗಳಿಂದ ಜಯಗಳಿಸಿದ ಕಿಂಗ್ಸ್‌ ಇಲೆವೆನ್‌

Pinterest LinkedIn Tumblr

kings-xi-punjab

ಮೊಹಾಲಿ :ಮಾರ್ಕಸ್ ಸ್ಟೊಯಿನಿಸ್ ಆಲ್‌ರೌಂಡ್ ಆಟದ ನೆರವಿ ನಿಂದ ಶನಿವಾರ ರಾತ್ರಿ ಪಂಜಾಬ್ ಕಿಂಗ್ಸ್‌ ಇಲೆವನ್ ತಂಡವು ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧ 9 ರನ್‌ಗಳಿಂದ ಜಯಗಳಿಸಿತು.

ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುರಳಿ ವಿಜಯ್ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ಮಾರ್ಕಸ್ ಅರ್ಧಶತಕ (52; 44ಎ, 3ಬೌಂ,2ಸಿ) ಗಳಿಸಿದ್ದರು. ಅವರ ಅಮೋಘ ಆಟದ ನೆರವಿನಿಂದ ಕಿಂಗ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ಗಳಿಗೆ 181 ರನ್ ಗಳಿಸಿತು. ನಂತರ ಗುರಿ ಬೆನ್ನತ್ತಿದ ಡೆಲ್ಲಿ ತಂಡದ ಮೂರು ವಿಕೆಟ್ ಕಬಳಿಸಿ ಪೆಟ್ಟು ನೀಡಿದರು.

ಇದರಿಂದಾಗಿ ಜಹೀರ್ ಖಾನ್ ನಾಯಕತ್ವದ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್‌ಗಳನ್ನು ಮಾತ್ರ ಗಳಿಸಿ ಸೋತಿತು. ಡೆಲ್ಲಿ ತಂಡದ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ (52 ರನ್) ಮತ್ತು ಸಂಜು ಸ್ಯಾಮ್ಸನ್ (49 ರನ್) ಅವರ ಆಟವು ವ್ಯರ್ಥವಾಯಿತು. ಅವರಿಬ್ಬರೂ ಮತ್ತು ಸ್ಯಾಮ್ ಬಿಲ್ಲಿಂಗ್ಸ್‌ ಅವರ ವಿಕೆಟ್‌ಗಳನ್ನು ಮಾರ್ಕಸ್ ಪಡೆದರು.

ಮಾರ್ಕಸ್–ಸಹಾ ಜೊತೆಯಾಟ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡಕ್ಕೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಕಿಂಗ್ಸ್ ತಂಡದ ಆರಂಭಿಕ ಜೋಡಿ ಮುರಳಿ ವಿಜಯ್ (25; 16ಎ, 4ಬೌಂ) ಮತ್ತು ಮಾರ್ಕಸ್ ಸ್ಟೋಯಿನಿಸ್ ಉತ್ತಮ ಆರಂಭ ನೀಡಿದರು.

ಮೊದಲ ಐದು ಓವರ್‌ಗಳಲ್ಲಿ ತಂಡವು 45 ರನ್ ಗಳಿಸಿತು. ಆರನೇ ಓವರ್‌ ಬೌಲಿಂಗ್ ಮಾಡಿದ ಕ್ರಿಸ್ ಮೊರಿಸ್ ಮೊದಲ ವಿಕೆಟ್ ಜೊತೆಯಾಟವನ್ನು ಮುರಿದರು. ಮುರಳಿ ಇದೇ ಮೊದಲ ಬಾರಿಗೆ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಹಾಶೀಂ ಆಮ್ಲಾ ಕೇವಲ ಒಂದು ರನ್ ಗಳಿಸಿ ರನ್‌ಔಟ್ ಆದರು.
ಆದರೆ, ನಂತರ ಬಂದ ವೃದ್ಧಿಮಾನ್ ಸಹಾ ಅವರು ಮೊಯಿಸೆಸ್ ಜೊತೆಗೂಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಬಂಗಾಳದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಹಾ (52; 33ಎ, 7ಬೌಂ) ಮತ್ತು ಮಾರ್ಕಸ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಗಳಿಸಿದರು.

ಇದರಿಂದ ತಂಡವು 14ನೇ ಓವರ್‌ನಲ್ಲಿ 100 ರನ್‌ಗಳ ಗಡಿ ದಾಟಿತು. ಜಹೀರ್ ಖಾನ್ ಎಸೆತದಲ್ಲಿ ಮಾರ್ಕಸ್ ನಿರ್ಗಮಿಸಿದರು. ಆದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 11 ಎಸೆತಗಳಲ್ಲಿ 16 ರನ್ ಗಳಿಸಿದರು. ಇನ್ನೊಂದೆಡೆ ತಮ್ಮ ಆಟಕ್ಕೆ ವೇಗ ನೀಡಿದ ವೃದ್ಧಿಮಾನ್ ಸಹಾ ತಂಡದ ಮೊತ್ತವನ್ನು ಹೆಚ್ಚಿಸಿದರು. ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಸಹಾ ಔಟಾದರು. ಕ್ರಿಸ್ ಮೊರಿಸ್ ಅವರು ಮ್ಯಾಕ್ಸ್‌ವೆಲ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು.

ಡೇವಿಡ್ ಮಿಲ್ಲರ್ (ಔಟಾಗದೆ 11) ಮತ್ತು ಅಕ್ಷರ್ ಪಟೇಲ್ (ಔಟಾಗದೆ 16) ಉಪಯುಕ್ತ ಕಾಣಿಕೆ ನೀಡಿದರು. ಒಟ್ಟು 9 ಪಂದ್ಯಗಳನ್ನು ಆಡಿರುವ ಕಿಂಗ್ಸ್ ತಂಡಕ್ಕೆ ಇದು ಮೂರನೇ ಜಯ. 6 ಪಾಯಿಂಟ್ಸ್‌ ಗಳಿಸಿರುವ ತಂಡವು ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಸ್ಕೋರ್‌ಕಾರ್ಡ್‌
ಕಿಂಗ್ಸ್‌ ಇಲೆವೆನ್ ಪಂಜಾಬ್ 5 ಕ್ಕೆ 181 (20 ಓವರ್‌ಗಳಲ್ಲಿ)

ಮುರಳಿ ವಿಜಯ್ ಸಿ ಕಾರ್ಲೋಸ್ ಬ್ರಾಥ್‌ವೈಟ್ ಬಿ ಕ್ರಿಸ್ ಮೊರಿಸ್ 25
ಮಾರ್ಕಸ್‌ ಸ್ಟೊಯಿನಿಸ್ ಸಿ ಸಂಜು ಸ್ಯಾಮ್ಸನ್ ಬಿ ಜಹೀರ್ ಖಾನ್ 52
ಹಾಶೀಂ ಆಮ್ಲಾ ರನ್‌ಔಟ್ (ಖಾನ್/ಡಿಕಾಕ್) 01
ವೃದ್ಧಿಮಾನ್ ಸಹಾ ಸಿ ಕ್ರಿಸ್ ಮೊರಿಸ್ ಬಿ ಮೊಹಮ್ಮದ್ ಶಮಿ 52
ಗ್ಲೆನ್ ಮ್ಯಾಕ್ಸ್‌ವೆಲ್ ಬಿ ಕ್ರಿಸ್ ಮೊರಿಸ್ 16
ಡೇವಿಡ್ ಮಿಲ್ಲರ್ ಔಟಾಗದೆ 11
ಅಕ್ಷರ್ ಪಟೇಲ್ ಔಟಾಗದೆ 16
ಇತರೆ: (ಲೆಗ್‌ಬೈ 5, ವೈಡ್ 3) 08
ವಿಕೆಟ್‌ ಪತನ: 1–45 (ವಿಜಯ್; 5.4), 2–48 (ಆಮ್ಲಾ; 6.6), 3–106 (ಸ್ಟೊಯಿನಿಸ್; 13.5), 4–152 (ಮ್ಯಾಕ್ಸ್‌ವೆಲ್; 17.6), 5–152 (ಸಹಾ; 18.1)
ಬೌಲಿಂಗ್‌: ಶಹಬಾಜ್ ನದೀಮ್ 4–0–30–0, ಮೊಹಮ್ಮದ್ ಶಮಿ 3–0–34–1 (ವೈಡ್ 1), ಕ್ರಿಸ್ ಮೊರಿಸ್ 4–0–30–2 (ವೈಡ್ 1), ಜಹೀರ್ ಖಾನ್ 3–0–25–1, ಕಾರ್ಲೋಸ್ ಬ್ರಾಥ್‌ವೈಟ್ 2–0–20–0, ಅಮಿತ್ ಮಿಶ್ರಾ 4–0–37–0 (ವೈಡ್1)

ಡೆಲ್ಲಿ ಡೇರ್‌ಡೆವಿಲ್ಸ್‌ 5 ಕ್ಕೆ 172 (20 ಓವರ್‌ಗಳಲ್ಲಿ)

ಕ್ವಿಂಟನ್ ಡಿ ಕಾಕ್‌ ಸಿ ಅಕ್ಷರ್‌ ಪಟೇಲ್‌ ಬಿ ಮಾರ್ಕಸ್‌ ಸ್ಟೊಯಿನಿಸ್‌ 52
ಸಂಜು ಸ್ಯಾಮ್ಸನ್‌ ಸಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಬಿ ಮಾರ್ಕಸ್‌ ಸ್ಟೊಯಿನಿಸ್‌ 49
ಕರುಣ್‌ ನಾಯರ್‌ ಸಿ ಡೇವಿಡ್‌ ಮಿಲ್ಲರ್‌ ಬಿ ಕೆ.ಸಿ. ಕಾರ್ಯಪ್ಪ 23
ಸ್ಯಾಮ್‌ ಬಿಲ್ಲಿಂಗ್ಸ್‌ ಸಿ ವೃದ್ಧಿಮಾನ್‌ ಸಹಾ ಬಿ ಮಾರ್ಕಸ್‌ ಸ್ಟೊಯಿನಿಸ್‌ 06
ಕ್ರೆಗ್‌ ಬ್ರಾಥ್‌ವೈಟ್‌ ಸಿ ಗುರುಕೀರತ್‌ ಸಿಂಗ್‌ ಬಿ ಸಂದೀಪ್‌ ಶರ್ಮಾ 12
ಕ್ರಿಸ್‌ ಮೊರಿಸ್‌ ಔಟಾಗದೆ 17
ರಿಷಭ್‌ ಪಂತ್‌ ಔಟಾಗದೆ 04
ಇತರೆ:( ಲೆಗ್‌ ಬೈ 6, ವೈಡ್‌ 3 ) 09
ವಿಕೆಟ್‌ ಪತನ: 1–70 (ಡಿ ಕಾಕ್‌; 7.5), 2–121 (ಸ್ಯಾಮ್ಸನ್‌; 13.4), 3–134 (ಕರುಣ್‌; 15.3), 4–141 (ಬಿಲ್ಲಿಂಗ್ಸ್‌; 16.5), 5–153 (ಬ್ರಾಥ್‌ವೈಟ್‌; 17.5).

ಬೌಲಿಂಗ್‌: ಸಂದೀಪ್‌ ಶರ್ಮಾ 4–0–36–1, ಮೋಹಿತ್‌ ಶರ್ಮಾ 4–0–21–0, ಕೆ.ಸಿ. ಕಾರ್ಯಪ್ಪ 4–0–37–1, ಮಾರ್ಕಸ್‌ ಸ್ಟೊಯಿನಿಸ್‌ 4–0–40–3, ಅಕ್ಷರ್‌ ಪಟೇಲ್‌ 4–0–32–0.
ಫಲಿತಾಂಶ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಕ್ಕೆ 9 ರನ್‌ ಗೆಲುವು
ಪಂದ್ಯಶ್ರೇಷ್ಠ: ಮಾರ್ಕಸ್‌ ಸ್ಟೊಯಿನಿಸ್‌

Write A Comment