ಕರ್ನಾಟಕ

ಬಾಡಿಗೆ ಬೈಕ್ ಸೇವೆ ಶುರು

Pinterest LinkedIn Tumblr

motorcycleಬೆಂಗಳೂರು,ಮೇ.2-ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಆಪ್ ಆಧಾರಿತ ಬೈಕ್‍ಗಳನ್ನು ಬಾಡಿಗೆಗೆ ಒದಗಿಸುವ ಸೇವೆ ನಗರದಲ್ಲಿ ಇಂದಿನಿಂದ ಆರಂಭಗೊಂಡಿದೆ.
ನಗರದಲ್ಲಿ ಯಾವುದೇ ಮೂಲೆಗೆ ಬೈಕ್ ಅನ್ನು ಬಾಡಿಗೆ ಪಡೆದು ಅದನ್ನು ನಗರದಲ್ಲಿ 20 ಕಡೆ ಗುರುತಿಸಲಾಗಿರುವ ರಾಯಲ್ಸ್ ಬ್ರದರ್ಸ್ ಮಳಿಗೆಗಳಲ್ಲಿ ಬಿಡುವ ಅವಕಾಶವನ್ನು ಪ್ರಯಾಣಿಕರಿಗಾಗಿಇ ಕಲ್ಪಿಸಿಲಾಗಿದೆ.

ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ.ಇದೊಂದು ಹೊಸ ಪರಿಕಲ್ಪನೆ. ಜನರಿಗೆ ಅನುಕೂಲವಾಗಲಿದೆ ಹೊರಗಡೆಯಿಂದ ಬಂದ ಜನರಿಗೆ ಅನುಕೂಲವಾಗಲಿದೆ.
-ಡಾ.ಇ.ವಿ ರಮಣರೆಡ್ಡಿ,ಸಾರಿಗೆ ಇಲಾಖೆ ಪ್ರದಾನ ಕಾರ್ಯದರ್ಶಿ

ಹೊರಗಡೆಯಿಂದ ಒಂದು ಎರಡು ದಿನದ ಕೆಲಸಗಳ ನಿಮಿತ್ತ ನಗರಕ್ಕೆ ಬಂದವರಿಗೆ ಈ ಸೇವೆ ನೆರವಾಗಲಿದೆ. ಆಟೋ ಟ್ಯಾಕ್ಸಿಗಿಂತ ಬಾಡಿಗೆ ಬೈಕ್ ಕಡಿಮೆ ದರದಲ್ಲಿ ಸಿಗಲಿದೆ.ಇದರಿಂದ ಜನರಿಗೂ ಉಪಯುಕ್ತವಾಗಲಿದೆ.
-ಪಿ.ರವಿಕುಮಾರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ

ನಗರದ ಟೌನ್‍ಹಾಲ್ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಪ್ರದಾನ ಕಾರ್ಯದರ್ಶಿ ಡಾ.ಇ.ವಿ ರಮಣರೆಡ್ಡಿ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಬೈಕ್ ಸೇವೆಗೆ ಚಾಲನೆ ನೀಡಿ ಶುಭಕೋರಿದರು.
ಈ ಕುರಿತು ಮಾತನಾಡಿದ ರಾಯಲ್ಸ್ ಬ್ರದರ್ಸ್‍ನ ಸಹ ಸ್ಥಾಪಕ ಮಂಜುನಾಥ್, ಮೊದಲು ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಮೈಸೂರು, ಮಣಿಪಾಲ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಈ ಸೇವೆ ಆರಂಬಿಸುವ ಉದ್ದೇಶವಿದೆ.ಸದ್ಯ 75 ಬೈಕ್‍ಗಳಿವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೈಕ್‍ಗಳನು ಒದಗಿಸಲಾಗುವುದು.ಅಲ್ಲದೆ ಹೈದರಾಬಾದ್, ವಿಶಾಖಪಟ್ಟಣ ಮತ್ತು ಚೆನ್ನೈ ನಗರಗಳಲ್ಲಿ ಈ ಸೇವೆಯನ್ನು ಆರಂಬಿಸಲಾಗುವುದು ಈಗಾಗಲೇ ಅನುಮತಿಯನ್ನೂ ಪಡೆಯಲಾಗಿದೆ ಎಂದು ಹೇಳಿದರು.
ನಗರದ ಜನರು ಒಂದುಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಅನುಕೂಲವಾಗುವಂತೆ ಬೈಕ್ ಸೇವೆ ಕಲ್ಪಿಸಲಾಗಿದೆ.ಅಪ್ ಡೌನ್‍ಲೋಡ್ ಮಾಡಿಕೊಂಡು ಅದಕ್ಕೆ ಡಿಎಲ್ ಮತ್ತು ವಿಳಾಸ ಮಾಹಿತಿಯನ್ನು ಅದನ್ನು ಪರಿಶೀಲಿಸಿ ಬೈಕ್ ನೀಡಲಾಗುವುದು ಪ್ರತಿ ಕ್ರಿ.ಮೀ 18 ರೂ ಒಂದು ಕಡೆಯಿಂದ ಬೈಕ್ ಪಡೆದರೆ ಗ್ರಾಹಕರು 20 ಸ್ಥಳದಲ್ಲಿ ಎಲ್ಲಿ ಬೇಕಾದರೂ ಬೈಕ್ ವಾಪಸ್ ಮಾಡಬಹುದು ಪಡೆದ ಸ್ಥಳದಲ್ಲಿಯೇ ಬಿಡಬೇಕು ಎಂದಿಲ್ಲ ಎಂದರು.

Write A Comment