ಕರ್ನಾಟಕ

ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದ ಹೊಸಬರ “ಖನನ”

Pinterest LinkedIn Tumblr

Khanana

ಹೊಸಬರ “ಖನನ” ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಳಿಸಿದೆ. ಶ್ರೀನಿವಾಸ್ ತಮ್ಮ ಪುತ್ರ ಆರ್ಯವರ್ಧನ್ ಅವರನ್ನು ಚಂದನವನಕ್ಕೆ ನಾಯಕರನ್ನಾಗಿ ಪರಿಚಯಿಸಿದ್ದಾರೆ. ಯಶವಂತ್ ಚೊಚ್ಚಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದು ತಮ್ಮ ಹೆಸರನ್ನು ರಾಧಾ ಎಂದು ಬದಲಾಯಿಸಿಕೊಂಡಿದ್ದಾರೆ.

ಬಹುತೇಕ ಹೊಸಬರೇ ಇರುವ ಖನನದಲ್ಲಿ ಹಲವು ಹೊಸ ಕಲಾವಿದರೂ ಇದ್ದಾರೆ. ಈ ಮೂಲಕ ಮಗನಿಗಾಗಿ ಚಿತ್ರ ನಿರ್ಮಾಣ ಮಾಡುವ ಪರಿಪಾಠ ಚಿತ್ರರಂಗದಲ್ಲಿ ಮುಂದುವರಿದಿದೆ.

ಕಳೆದವಾರ ಚಿತ್ರದ ಟ್ರೈಲರ್ ಬಿಡುಗಡೆ ಇತ್ತು, ಅಂದೇ ನಾಯಕನ ಹುಟ್ಟುಹಬ್ಬವೂ ಕೂಡ. ಈ ವೇಳೆ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ನೀಡಿತು. ಮೊದಲು ಮಾತನಾಡಿದ ನಿರ್ಮಾಪಕ ಶ್ರೀನಿವಾಸ್, ಇದೊಂದು ತಂಡದ ಕೆಲಸ,ಮಗನನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ ಎಲ್ಲರ ಸಹಕಾರ ಮತ್ತು ಬೆಂಬಲಬೇಕು ಎಂದು ಕೇಳಿಕೊಂಡರು.

ನಿರ್ದೇಶಕ ರಾಧಾ, ನಾಯಕನನ್ನು ಪಾತ್ರಕ್ಕೆ ತಕ್ಕಂತೆ ಮೋಲ್ಡ್ ಮಾಡಲಾಗಿದೆ. ಮೂರು ನಾಲ್ಕು ತಿಂಗಳು ನಟನೆಯ ಬಗ್ಗೆ ತರಬೇತಿಯನ್ನೂ ನೀಡಲಾಗಿದೆ.೪೫ ದಿನಗಳ ಕಾಲ ಮೈಸೂರು, ಚೆನ್ನಪಟ್ಟಣ,ಕೋಲಾರ,ಕೇರಳದ ವಿವಿದಡೆ ಚಿತ್ರೀಕರಣ ಮಾಡಲಾಗಿದೆ, ಚಿತ್ರದ ಕ್ಲೈಮಾಕ್ಸ್ ಇದುವರೆಗೂ ಚಿತ್ರರಂಗದಲ್ಲಿಯೇ ಎಲ್ಲಿಯೂ ಬಂದಿಲ್ಲ ಖನನ ಸಸ್ಪೆನ್ಸ್ ಥ್ರಿಲ್ಲರ್‌ನಿಂದ ಕೂಡಿದ ಮುದ್ದಾದ ಲವ್ ಸ್ಟೋರಿ, ಐದು ಹಾಡುಗಳಿವೆ ಎಲ್ಲವೂ ವಿಭಿನ್ನವಾಗಿ ಬಂದಿವೆ.

ಸದ್ಯದಲ್ಲಿಯೇ ಚಿತ್ರವನ್ನು ತೆರೆಗೆ ತರುವ ಆಲೋಚನೆ ಇದೆ ಎಂದರು ನಿರ್ದೇಶಕರು.

ನಾಯಕ ಆರ್ಯವರ್ಧನ್,ಪ್ರತಿಯೊಂದು ನನ್ನ ಬೆಳವಣಿಗೆಯಲ್ಲಿ ತಂದೆಯ ಪಾತ್ರ ದೊಡ್ಡದು ಅವರೇ ನನ್ನ ದೇವರು,ಚಿತ್ರರಂಗಕ್ಕೆ ಬರುವ ಆಸೆ ಇತ್ತು.ಅದು ಈಗ ನೆರವೇರಿದೆ. ಚಿತ್ರದಲ್ಲಿ ನನ್ನದು ಇಂಟೀರಿಯರ್ ಡಿಸೈನರ್ ಪಾತ್ರ. ಜೀವನದಲ್ಲಿ ಭವಿಷ್ಯದ ಭರವಸೆಯೊಂದಿಗೆ ಬದುಕು ಸಾಗಿಸಬಹುದು ಎನ್ನುವುದು ಪಾತ್ರದ ತಿರುಳು ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದರು.

ಖಳನಟನ ಪಾತ್ರ ಮಾಡಿರುವ ಯುವ ಕಿಶೋರ್ ಪಾತ್ರ ಚೆನ್ನಾಗಿ ಮೂಡಿ ಬಂದಿದೆ ಎಂದರು. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಟ್ರೈಲರ್ ಬಿಡುಗಡೆ ಮಾಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದ್, ನಿರ್ಮಾಪಕ ಶೈಲೇಂದ್ರ ಬಾಬು ಹಾಗು ನಿರ್ದೇಶಕ ಆನಂದ್ ಪಿ.ರಾಜ್ ಶುಭ ಹಾರೈಸಿದರು.

Write A Comment