ಕರ್ನಾಟಕ

ಸೆಟ್ಟೇರಿದ ರಾಜಾತಿಲಕ

Pinterest LinkedIn Tumblr

Rajatilaka

ಹೊಸಬರ ರಾಜಾ ತಿಲಕ ಚಿತ್ರ ಸೆಟ್ಟೇರಿದೆ. ಜುಗಾರಿ ಅವಿನಾಶ್ ನಾಯಕರಾಗಿರುವ ಈ ಚಿತ್ರಕ್ಕೆ ತೆಲುಗಿನ ಭಾನುಶ್ರೀ ಹಾಗು ಕನ್ನಡದ ಹುಡುಗಿ ಗಾಯತ್ರಿಗೌಡ ನಾಯಕಿಯರು. ಮಂಜುನಾಥ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದು ಜೋಶ್ ಮತ್ತು ವೇಣುಗೋಪಾಲ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ.

ಕಳೆದವಾರ ಚಿತ್ರದ ಮಹೂರ್ತ ಸಮಾರಂಭವಿತ್ತು. ಆ ಬಳಿಕ ಚಿತ್ರತಂಡ ಚಿತ್ರದ ಬಗ್ಗೆ ಮಾಹಿತಿ ನೀಡಿತು. ಮೊದಲು ಮಾತು ಆರಂಭಿಸಿದ ನಿರ್ದೇಶಕ ಮಂಜುನಾಥ್, ಬಹಳ ವರ್ಷಗಳ ನಂತರ ನಿರ್ದೇಶಕನಾಗುತ್ತಿದ್ದೇನೆ.

ಎರಡು ವರ್ಷಗಳಿಂದ ಕಥೆ ಚಿತ್ರಕಥೆ ಸಿದ್ದಪಡಿಸಿ ಅದನ್ನು ತಿದ್ದಿ ತೀಡಿ ಈಗ ಚಿತ್ರ ಮಾಡಲಾಗುತ್ತಿದೆ. ಕನ್ನಡದಲ್ಲಿ ಇದುವರೆಗೂ ಎಲ್ಲಿಯೂ ಬಂದಿಲ್ಲದ ಕಥೆಯನ್ನು ಚಿತ್ರರೂಪವನ್ನಾಗಿ ತೆರೆಗೆ ತರುವ ಉದ್ದೇಶವೊಂದಿದ್ದೇನೆ. ಅದಕ್ಕೆ ನಿರ್ಮಾಪಕರು ಸಾಥ್ ನೀಡಿದ್ದಾರೆ.

ಚಿತ್ರೀಕರಣವನ್ನು ಮೇ ಮೊದಲ ವಾರದವರೆಗೂ ನಡೆಸಿ ಆ ಬಳಿಕ ಜೂನ್ ಇಲ್ಲವೆ ಜುಲೈನಲ್ಲಿ ಚಿತ್ರದ ಎರಡನೇ ಶೆಡ್ಯೂಲ್ಡ್ ಚಿತ್ರೀಕರಣ ಮಾಡಲಾಗುವುದು ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಜನವರಿಯ ವೇಳೆಗೆ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದರು.

ನಟ ಅವಿನಾಶ್, ಹೊಸತರದ ಪಾತ್ರವಿದೆ. ಈ ಚಿತ್ರದ ಮೂಲಕ ಕಲಾವಿದನೆಂಬ ಭಡ್ತಿ ಸಿಗಲಿದೆ. ಎರಡು ರೀತಿಯ ಶೇಡ್‌ಗಳು ಚಿತ್ರದಲ್ಲಿವೆ. ಹಳ್ಳಿಯೊಂದರ ಮುಖ್ಯಸ್ಥನ ಮನೆಯ ಸದಸ್ಯ. ಆ ಮನೆಯಲ್ಲಿನ ಘಟನೆಗಳು ಮತ್ತು ಆ ನಂತರ ಆತ ಪಟ್ಟಣಕ್ಕೆ ಬರುತ್ತಾನೆ ಇಲ್ಲಿಯ ರಾಜಕೀಯ ಮುಂದೆ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು ಎಂದು ವಿವರ ನೀಡಿದರು.

ನಾಯಕಿ ಬಾನುಶ್ರೀ,ಕನ್ನಡದಲ್ಲಿ ಮೊದಲ ಚಿತ್ರ. ಈಗ ಕನ್ನಡ ಕಲಿಯುತ್ತಿದ್ದೇನೆ ಎಂದರೆ ಮತ್ತೊಬ್ಬ ನಾಯಕಿ ಗಾಯತ್ರಿ ಗೌಡ ಜಸ್ಟ್ ಮದ್ವೇಲಿ ಬಳಿಕ ಇದು ಎರಡನೇ ಚಿತ್ರ ಪಾತ್ರಕ್ಕೆ ಒಳ್ಳೆಯ ಅವಕಾಶವಿದೆ ಅದನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸವಿದೆ ಎಂದರು.

ನಿರ್ಮಾಪಕ ಜೋಶ್, ಕಥೆ ಕೇಳಿ ಇಷ್ಟವಾಯಿತು.ನಾವೇ ನಿರ್ಮಾಣ ಮಾಡೋಣ ಎಂದು ಮುಂದಾಗಿದ್ದೇವೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.ರಾಜು ಶಿವಾಜಿ ಕ್ಯಾಮರ ಚಿತ್ರಕ್ಕಿದೆ. ಇದು ಅವರಿಗೆ ಕನ್ನಡದಲ್ಲಿ ಮೊದಲ ಚಿತ್ರ ಇದಕ್ಕೂ ಮುನ್ನು ತಮಿಳಿನ ಕತ್ತಿ,ರಾಜ ರಾಣಿ ಚಿತ್ರಗಳಿಗೆ ಸಹಾಯಕ ಕ್ಯಾಮರಾಮನ್ ಆಗಿ ಕೆಲಸ ಮಾಡಿದ್ದಾರೆ.

Write A Comment