ಕರ್ನಾಟಕ

ಮದರಂಗಿ ಹುಡುಗನ ಪ್ರೇಮ ಕಥೆ….

Pinterest LinkedIn Tumblr

Nanna-Ninna-Prema-Kathe

ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಅನೇಕ ಹೊಸ ನಿರ್ಮಾಪಕರು ಮತ್ತು ನಿರ್ದೇಶಕರು ಪಾದಾರ್ಪಣೆ ಮಾಡುತ್ತಿದ್ದಾರೆ. ಅಂತವರ ಸಾಲಿಗೆ ಈಗ ಹಿರಿಯ ರಾಜಕಾರಣಿ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ್ ಸಿ.ನ್ಯಾಮಗೌಡ ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ನಿರ್ದೇಶಕರಾಗಿ ಶಿವು ಜಮಖಂಡಿ ಕೂಡ.

ಅದುವೇ ” ನನ್ನ ನಿನ್ನ ಪ್ರೇಮ ಕಥೆ” ಚಿತ್ರದ ಮೂಲಕ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಚಿತ್ರೀಕರಿಸಿರುವ ಪ್ರೇಮಕಥೆಯಂತೆ ಚಿತ್ರದಲ್ಲಿ ನಾಯಕರಾಗಿ ವಿಜಯ್ ರಾಘವೇಂದ್ರ ನಟಿಸಿದ್ದು ಬಹಳ ದಿನಗಳ ನಂತರ ನಿಧಿ ಸುಬ್ಬಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಿಲಕ್,ಸುಧಾ ಬೆಳವಾಡಿ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

ಈ ಕುರಿತು ವಿವರ ನೀಡಿದ ನಿರ್ದೇಶಕ ಶಿವು ಜಮಖಂಡಿ,ಚಿತ್ರವನ್ನು ೪೮ ದಿನಗಳ ಕಾಲ ಉತ್ತರ ಕರ್ನಾಟಕದ ಸೊಗಡಿನಲ್ಲಿ ಚಿತ್ರೀಕರಿಸಲಾಗಿದೆ.ಮದರಂಗಿ ಹಾಕುವ ಹುಡುಗನೊಬ್ಬ ಅದೇ ಊರಿನ ಹುಡುಗಿಯನ್ನು ಪ್ರೀತಿಸುತ್ತಾನೆ.

ಆತನ ಪ್ರೀತಿಗೆ ಹುಡುಗಿಯ ಅಣ್ಣ ವಿರೋದಿಸುತ್ತಾನೆ.ಅಣ್ಣನ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಚಿತ್ರದಲ್ಲಿ ಶಾಹಿರಿಗಳನ್ನು ಬಳಸಲಾಗಿದೆ. ಚಿತ್ರ ನೋಡಿ ಹೊರಬಂದವರಿಗೆ ಮುದ್ದಾದ ಪ್ರೇಮಕಥೆಯನ್ನು ನೋಡಿದ ಅನುಭವವಾಗಲಿದೆ ಎಂದರು.

ನಿರ್ಮಾಪಕ ಆನಂದ್ ಸಿ.ನ್ಯಾಮಗೌಡ, ಒಳ್ಳೆಯ ಚಿತ್ರ ನೀಡುವ ಉದ್ದೇಶದಿಂದ ಚಿತ್ರರಂಗ್ಕಕೆ ಬಂದಿದ್ದೇವೆ.ದುಡ್ಡು ತುಸು ಹೆಚ್ಚು ಖರ್ಚಾದರೂ ಪರವಾಗಿಲ್ಲ.ಒಳ್ಳೆಯ ಚಿತ್ರವನ್ನು ಜನರಿಗೆ ಕೊಡಬೇಕು ಎನ್ನುವ ಮನಸ್ಸಿತ್ತು ಅಲ್ಲದೆ ಉತ್ತರ ಕರ್ನಾಟಕದ ಸೊಗಡಿನಲ್ಲಿ ಚಿತ್ರ ಮೂಡಿಬಂದಿದೆ.

ಇದು ಮತ್ತಷ್ಟು ಖುಷಿ ಹೆಚ್ಚಿಸಲು ಕಾರಣವಾಗಿದೆ.ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರೀಕರಣ ಮುಗಿದಿದ್ದುದೋ ಗೊತ್ತಾಗಲಿಲ್ಲ. ಚಿತ್ರ ಯಶಸ್ವಿಯಾಗುವ ಎಲ್ಲಾ ವಿಶ್ವಾಸವಿದೆ ಎಂದು ಹೇಳಿಕೊಂಡರು.

ನಟ ವಿಜಯ್ ರಾಘವೇಂದ್ರ ಈ ರೀತಿಯ ಪಾತ್ರವನ್ನೂ ಇದುವರೆಗೂ ಮಾಡಿರಲಿಲ್ಲ.ಹೊಸತನದಿಂದ ಕೂಡಿದೆ.ಚಿತ್ರದಲ್ಲಿ ಮದರಂಗಿ ಹಾಕುವ ಹುಡುಗನ ಪಾತ್ರ. ಚಿತ್ರದುದ್ದಕ್ಕೂ ಪ್ರೀತಿ ಮಾಡುತ್ತೇನೆ ಎಂದರೆ ಮತ್ತೊಬ್ಬ ನಟ ತಿಲಕ್,ವಿಭಿನ್ನವಾದ ಪಾತ್ರ. ಇಷ್ಟವಾಯಿತು ಹಾಗಾಗಿ ನಟಿಸಲು ಒಪ್ಪಿಕೊಂಡೆ ಎಂದರು.

ಪತ್ರಿಕಾಗೋಷ್ಟಿ ಮುಗಿಯುವ ವೇಳೆ ತಂಡ ಸೇರಿಕೊಂಡ ಹಿರಿಯ ಪೋಷಕ ಕಲಾವಿದೆ ಸುಧಾ ಬೆಳವಾಡಿ ಚಿತ್ರಲ್ಲಿ ಒಳ್ಳೆಯ ಪಾತ್ರವಿದೆ ಎಂದು ಹೇಳಿಕೊಂಡರು.

Write A Comment