ಕರ್ನಾಟಕ

“ಊಟಿ”ಚಿತ್ರದ ವೇದಿಕೆಯಲ್ಲಿ ಕಾಣಿಸಕೊಂಡು ಚಿತ್ರತಂಡಕ್ಕೆ ಶುಭಕೋರಿದ ರಾಜ್‌ಕುಮಾರ್ ಹಿರಿಯ ಪುತ್ರಿ ಲಕ್ಷ್ಮಿ

Pinterest LinkedIn Tumblr

raj

ಡಾ.ರಾಜ್‌ಕುಮಾರ್ ಕುಟುಂಬದ ಸದಸ್ಯರಲ್ಲಿ ಸ್ಟಾರ್‌ಗಳೇ ಹೆಚ್ಚಾಗಿ ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಾರೆ.ಆದರೆ ಸ್ಟಾರ್‌ಗಳ ಹಿಂದಿರುವ ಕುಟುಂಬದ ಮಹಿಳಾ ಸದಸ್ಯರು ಚಿತ್ರಗಳಿಗೆ ಸಂಬಂಧಿಸಿದ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ ತೀರಾ ಅಪರೂಪ ಎನ್ನುವಂತೆ ರಾಜ್‌ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮಿ “ಊಟಿ”ಚಿತ್ರದ ವೇದಿಕೆಯಲ್ಲಿ ಕಾಣಿಸಕೊಂಡು ಚಿತ್ರತಂಡಕ್ಕೆ ಶುಭಕೋರಿದರು.

ಚಿತ್ರತಂಡಕ್ಕೆ ಒಳ್ಳೆಯದಾಗಲಿ ಒಳ್ಳೆಯ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಲಿ ಎಂದು ಸಂಕೋಚದಿಂದಲೇ ಮನದುಂಬಿ ಹಾರೈಸಿದರು.

ರಾಜ್ ಅವರ ಸಹೋದರ ವರದಪ್ಪ ಅವರ ಪುತ್ರಿ ಅಶಾ ಹಾಗು ಅವರ ಪತಿ ವಿಜಯ್‌ಕುಮಾರ್ ವೇದಿಕೆಯಲ್ಲಿದ್ದು ಚಿತ್ರತಂಡಕ್ಕೆ ಶುಭಕೋರಿದರು.

ಮಾಜಿ ಸಚಿವ ಹಾಗು ನಟ ಕುಮಾರ್ ಬಂಗಾರಪ್ಪ, ಹಲವು ವರ್ಷಗಳ ಒಡನಾಟದ ಸಂಬಂದವಿದ್ದರೂ ಮೊಟ್ಟ ಮೊದಲ ಬಾರಿಗೆ ರಾಜ್ ಅವರ ಮೊದಲ ಪುತ್ರಿ ಲಕ್ಷ್ಮಿ ಅವರ ಜೊತೆ ವೇದಿಕೆ ಹಂಚಿಕೊಂಡಿರುವುದು ಖುಷಿಯಾಗಿದೆ.

ರಾಜ್‌ಕುಮಾರ್ ಯುಗಪುರುಷ,ಅವರು ಎಲ್ಲಾ ಕಾಲಕ್ಕೂ ಸಲ್ಲುತ್ತಾರೆ.ಅವರ ಕುರಿತು ಪುಸ್ತಕ ಬರೆದು ರಾಷ್ಟ್ರಪ್ರಶಸ್ತಿ ಪಡೆದ ದೊಡ್ಡ ಹುಲ್ಲೂರು ರುಕ್ಕೋಜಿ ಕೂಡ ಅಷ್ಟೇ ಶ್ರೇಷ್ಟರು ಎಂದು ಹೇಳಿದರು.

ಸನ್ಮಾನ ಸ್ವೀಕರಸಿ ಮಾತನಾಡಿದ ದೊಡ್ಡಹುಲ್ಲೂರು ರುಕ್ಕೋಜಿ.ಮಹಾನ್ ನಟ ರಾಜ್‌ಕುಮಾರ್ ಕುರಿತು ಪುಸ್ತಕ ಬರೆಯಲಿ ವರದಪ್ಪ ಸೇರಿದಮತೆ ಅನೇಕರು ಸಹಕರಿಸಿದ್ದರು.ಪುಸ್ತಕ ರೂಪಕ್ಕೆ ಬರುವಲ್ಲಿ ಅವರ ಅಳಿಯ ವಿಜಯ್‌ಕುಮಾರ್ ಅವರ ಸಹಕಾರ ಮರೆಯಲಾಗದು ಎಂದು ಹೇಳಿಕೊಂಡರು.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

೧೯೯೧ರಲ್ಲಿ ನಡೆದ ಕಾವೇರಿ ಗಲಬೆಯಲ್ಲಿ ನಲುಗಿದ ನೈಜ ಪ್ರೇಮಕಥೆಯನ್ನು ಊಟಿ ಚಿತ್ರರೂಪವಾಗಿ ತೆರೆಗೆ ತರತಂದಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್ ಅವರಿಗೆ ಹೆಚ್. ಮೊಹನ್ ಕುಮಾರ್ ಬೆನ್ನುಲುಬಾಗಿ ನಿಂತಿದ್ದಾರೆ.ಡಾ.ಕೃಷ್ಣಮೂರ್ತಿ ಚಮರಂ ಅವರ ಕಥೆ ಚಿತ್ರಕ್ಕಿದೆ. ಅವಿನಾಶ್, ಗಿರಿರಾಜ್ ಮತ್ತಿತರ ತಾರಾಗಣವಿದೆ.

Write A Comment