ಕರ್ನಾಟಕ

ರಾಜ್ಯದಲ್ಲಿ ಭೀಕರ ಬರವಿದೆ! : ಸಚಿವ ಎಚ್‌.ಕೆ.ಪಾಟೀಲ್‌ ಯೂಟರ್ನ್

Pinterest LinkedIn Tumblr

5ರಾಯಚೂರು : ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಗುರುವಾರ ಯೂಟರ್ನ್ ಹೊಡೆದಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್‌ ‘ಬರ ಇಲ್ಲವೆಂದು ಎಲ್ಲೂ ಹೇಳಿಕೆ ನೀಡಿಲ್ಲ.ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ.ಅರ್ಥ ಆಗದೆ ಇರುವವರೂ ಹಾಗೆ ಹೇಳಿರಬಹುದು. ಪತ್ರಿಕೆಗಳು ಸುದ್ದಿ ಮಾಡಿವೆ.ಅವರು ಬರೋಬ್ಬರಿ ಬರೆದಿದ್ದಾರೆ’ಎಂದರು.

‘ಬರದ ವಿಚಾರದಲ್ಲಿ ರಾಜಕಾರಣಿಗಳೇ ರಾಜಕಾರಣ ಮಾಡಬಾರದು ಆ ನೆಲೆಯಲ್ಲಿ ಮಾಧ್ಯಮಗಳು ಹಾಗೆಬರೆಯಬಾರದು .ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದಲ್ಲಿ ಬರಗಾಲ ಇದೆ’ ಎಂದು ಹೇಳಿದರು.

ರಾಜ್ಯದಲ್ಲಿ ಈಗ ಇರುವುದು ಬರಗಾಲವಲ್ಲ. ಕಡು ಬೇಸಿಗೆ. ಮುಂಗಾರುಧಿಹಿಂಗಾರು ಎರಡೂ ಕೈ ಕೊಟ್ಟಿದ್ದರಿಂದ ಉರಿಬಿಸಿಲು ಹೆಚ್ಚಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಪಾಟೀಲ್‌ ಕಲಬುರ್ಗಿಯಲ್ಲಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.
-ಉದಯವಾಣಿ

Write A Comment