ಕರ್ನಾಟಕ

‘ಬಿ.ಟಿ ಕಂಪೆನಿ ಆರಂಭಿಸುವುದು ಕಷ್ಟ’

Pinterest LinkedIn Tumblr

ಕಿಬೆಂಗಳೂರು: ದೇಶದಲ್ಲಿ ಜೈವಿಕ ತಂತ್ರಜ್ಞಾನಕ್ಕೆ (ಬಯೊಟೆಕ್ನಾಲಜಿ – ಬಿ.ಟಿ) ಸಂಬಂಧಿಸಿದ ಕಂಪೆನಿಯೊಂ ದನ್ನು ಆರಂಭಿಸಿ, ಮುನ್ನಡೆಸುವುದು ಇಂದಿಗೂ ಕಷ್ಟದ ಕೆಲಸ ಎಂದು ಬಯೋಕಾನ್ ಕಂಪೆನಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿದರು. ಪತ್ರಕರ್ತೆ ಸೀಮಾ ಸಿಂಗ್‌ ಬರೆದಿರುವ ಕಿರಣ್‌ ಮಜುಂದಾರ್‌ ವೃತ್ತಿ ಜೀವನದ ಕುರಿತ ‘ಮಿತ್‌ ಬ್ರೇಕರ್‌’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೀಮಾ ಅವರು ಈ ಪುಸ್ತಕದಲ್ಲಿ ಬರೆದಿರುವುದು ನನ್ನ ಜೀವನದ ಕತೆ ಮಾತ್ರವೇ ಅಲ್ಲ. ಭಾರತದಲ್ಲಿ ಬಿ.ಟಿ ಉದ್ಯಮ ಬೆಳೆದು ಬಂದ ಬಗೆಯ ವಿವರಣೆ ಕೂಡ ಇದರಲ್ಲಿದೆ. ಈ ಕ್ಷೇತ್ರದಲ್ಲಿ ನಾನು ಉದ್ದಿಮೆಯನ್ನು ಕಟ್ಟಿ, ಬೆಳೆಸಿದ ಕತೆ ಇತರರಿಗೂ ತಿಳಿಯಬೇಕು. ಆ ಕತೆ ಈ ಪುಸ್ತಕದಲ್ಲಿದೆ’ ಎಂದು ಕಿರಣ್ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಇರುವ ಶಕ್ತಿಯ ಬಗ್ಗೆ ದೇಶ ಇನ್ನಷ್ಟು ಗಮನಹರಿಸಬೇಕು. ಬಿ.ಟಿ ಕ್ಷೇತ್ರಕ್ಕೆ ಅನುದಾನ ಒದಗಿಸುವುದು ಮಾತ್ರ ವಲ್ಲದೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ಗಳಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆಯೂ ಆಲೋಚಿಸಬೇಕು ಎಂದರು. ‘ಕೃತಿ ರಚನೆಗೆ ಇನ್ನೂರಕ್ಕೂ ಹೆಚ್ಚು ಜನರ ಜೊತೆ ಮಾತುಕತೆ ನಡೆಸಿದ್ದೇನೆ’ ಎಂದು ಸೀಮಾ ಸಿಂಗ್‌ ಹೇಳಿದರು.

ಪುಸ್ತಕ: ಮಿತ್‌ ಬ್ರೇಕರ್ (ಇಂಗ್ಲಿಷ್),
ಲೇಖಕಿ: ಸೀಮಾ ಸಿಂಗ್ಬೆ
ಲೆ: ₹ 599,
ಪುಟಗಳು: 280,
ಪ್ರಕಾಶಕರು: ಹಾರ್ಪರ್ ಕಾಲಿನ್ಸ್‌

Write A Comment