ಕರ್ನಾಟಕ

ನಿನ್ನ ಕೇಳಿ ಟಿಕೆಟ್ ಕೊಡೋದಕ್ಕೆ ಆಗಲ್ಲ ಕಣಯ್ಯ; ಕೈ ಮುಖಂಡನಿಗೆ ಸಿಎಂ

Pinterest LinkedIn Tumblr

Ramaiahಮೈಸೂರು: ನಾಲ್ಕು ಜಿಲ್ಲೆಯವರನ್ನು ಕೇಳಿಯೇ ಟಿಕೆಟ್ ನೀಡಲಾಗಿದೆ…ನಿನ್ನ ಕೇಳಿ ಟಿಕೆಟ್ ಕೊಡೋದಕ್ಕೆ ಆಗಲ್ಲ ಕಣಯ್ಯ…ಇದು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡರೊಬ್ಬರು ಒತ್ತಾಯಿಸಿದಾಗ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ ಈ ರೀತಿ ಪ್ರತಿಕ್ರಿಯೆ ನೀಡಿದ ಘಟನೆ ನಡೆಯಿತು.

ಗುರುವಾರ ಮೈಸೂರಿನ ಲಲಿತ್ ಮಹಲ್ ಹೆಲಿಪ್ಯಾಡ್ ಗೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ಬರಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೇವಣ್ಣ ಅವರು, ಮುಖ್ಯಮಂತ್ರಿಗಳ ಬಳಿ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಹೇಳಿದರು.

ರೇವಣ್ಣನವರು ಬದಲಾವಣೆಗೆ ಪಟ್ಟು ಹಿಡಿದು ಮಾತು ಮುಂದುವರಿಸಿದಾಗ…ಏಯ್..ಇಲ್ ಕೇಳಯ್ಯ…ನಿನ್ನ ಕೇಳಿ ಟಿಕೆಟ್ ಕೊಡೋದಕ್ಕೆ ಆಗಲ್ಲ ಕಣಯ್ಯ ಎಂದರು. ಆಗಲೂ ರೇವಣ್ಣ ತಮ್ಮ ಅಸಮಾಧಾನ ಮುಂದುವರಿಸಿದಾಗ ಸ್ವಲ್ಪ ತಾಳ್ಮೆ ಕಳೆದುಕೊಂಡ ಸಿಎಂ ಏಯ್…ಇದೇನ್ ದಾರಿಯಲ್ಲಿ ಚರ್ಚೆ ಮಾಡೋ ವಿಷಯಾನಾ…ನಿನ್ನ ಕೇಳಿ ಟಿಕೆಟ್ ಕೊಡೋದಕ್ಕೆ ಆಗೋದಿಲ್ಲ ಎಂದು ಹೊರಟು ಹೋಗಿದ್ದರು.

ಮುಖ್ಯಮಂತ್ರಿಗಳ ಮಾತಿನಿಂದ ನೊಂದುಕೊಂಡ ರೇವಣ್ಣ.. ನೋಡಿ ಸಾರ್ ನಾನೇನ್ ಕೇಳಿದ್ದೆ…ನನಗೇನು ಕೇಳಿಲ್ಲ..ಆದರೂ ಮುಖ್ಯಮಂತ್ರಿಗಳು ಹೀಗ್ ಮಾತಾಡಿದ್ರೆ ನಾವೇನ್ ಮಾಡೋಣ ಎಂದು ಸುದ್ದಿಗಾರರ ಜೊತೆ ಅಳಲು ತೋಡಿಕೊಂಡರು.
&ಉದಯವಾಣಿ

Write A Comment