ಕರ್ನಾಟಕ

ಸುದೀಪ್ ನಟನೆಯ ಕೋಟಿಗೊಬ್ಬ-2 ಹಾಡುಗಳ ಚಿತ್ರೀಕರಣಕ್ಕಾಗಿ ಮುಂಬೈಗೆ

Pinterest LinkedIn Tumblr

kotigobba-2

ಬೆಂಗಳೂರು: ಸುದೀಪ್ ನಟನೆಯ ದ್ವಿಭಾಷಾ ಸಿನೆಮಾ ಕೋಟಿಗೊಬ್ಬ-2 ಅಂತಿಮ ಹಂತದ ಚಿತ್ರೀಕರಣದಲ್ಲಿದೆ. ತಮಿಳಿನಲ್ಲಿ ‘ಮುಂದಿಂಜ ಇವನ ಪುಡಿ’ ಎಂದು ಕರೆಯಲಾಗಿದ್ದು ಮೇ 2 ರಿಂದ ಕೊನೆಯ ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಮುಂಬೈನ್ನು ಆಯ್ಕೆ ಮಾಡಲಾಗಿದೆ.

ಈ ಎರಡು ಹಾಡುಗಳಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶಿಸಲಿದ್ದಾರೆ. ಮೊದಲ ಹಾಡಿಗಾಗಿ ವೈಭವಯುತ ಸೆಟ್ ಹಾಕಲಾಗುತ್ತಿದ್ದು, ಇದು ಸಿನೆಮಾದಲ್ಲಿ ಸುದೀಪ್ ಅವರ ಪರಿಚಯದ ಹಾಡಾಗಲಿದೆಯಂತೆ. ಮತ್ತೊಂದು ಹಾಡಿನಲ್ಲಿ ನಟಿ ನಿತ್ಯ ಮೆನನ್ ಭಾಗವಹಿಸಲಿದ್ದಾರಂತೆ.

ಹೆಚ್ಚು ವಿವರಗಳನ್ನು ನಿಡಲು ಇಚ್ಛಿಸದ ನಿರ್ಮಾಪಕ ಸೂರಪ್ಪ ಬಾಬು “ಈ ಸಿನೆಮಾ ಬಿಡುಗಡೆಯಾದ ಮೇಲೆ ಈ ಹಾಡುಗಳೇ ಎಲ್ಲ ಮಾತನಾಡಲಿವೆ. ಈ ಎರಡು ಹಾಡುಗಳ ಚಿತ್ರೀಕರಣ ಮುಗಿದ ನಂತರ ಇಡೀ ಚಿತ್ರೀಕರಣ ಸಂಪೂರ್ಣಗೊಂಡಂತೆ ಆಗ ನಾನು ಎರಡೂ ಭಾಷೆಗಳಲ್ಲಿ ಬಿಡುಗಡೆ ದಿನಾಂಕ ಘೋಷಿಸಲಿದ್ದೇನೆ” ಎಂದಿದ್ದಾರೆ.

ಜೊತೆಗೆ ಸಿನೆಮಾದ ಡಬ್ಬಿಂಗ್ ಪ್ರಕ್ರಿಯೆ ಕೂಡ ಜಾರಿಯಲ್ಲಿದೆ. ಮುಖೇಶ್ ತಿವಾರಿ, ಶರತ್ ಲೋಹಿತಾಶ್ವ, ನಸ್ಸೆರ್, ರವಿಶಂಕರ್ ಮತ್ತು ಚಿಕ್ಕಣ್ಣ ಕೂಡ ತಾರಾಗಣದಲ್ಲಿದ್ದಾರೆ. ಡಿ ಇಮಾಮ್ ಸಂಗೀತ ನೀಡಿದ್ದು, ರಾಜರಥಿನಂ ಸಿನೆಮ್ಯಾಟೋಗ್ರಾಫರ್.

Write A Comment