ರಾಷ್ಟ್ರೀಯ

ಮದುವೆ ಮನೆಯಲ್ಲಿ ಐಸ್ ಕ್ರೀಂ ಸಿಕ್ಕಿಲ್ಲ ಎಂಬ ಕಾರಣದಿಂದ ಜಗಳ: 10 ಮಂದಿಗೆ ಗಾಯ

Pinterest LinkedIn Tumblr

marrage

ಆಗ್ರಾ: ಬುಧವಾರ ಮಥುರಾದಲ್ಲಿ ನಡೆದ ಮದುವೆಯೊಂದರಲ್ಲಿ ವರನ ಕಡೆಯವರಿಗೆ ಐಸ್‌ಕ್ರೀಂ ಸಿಕ್ಕಿಲ್ಲ ಎಂಬ ಕಾರಣದಿಂದ ಜಗಳ ನಡೆದಿದೆ.

ಇಲ್ಲಿನ ರಯಾ ಪ್ರದೇಶದಲ್ಲಿ ಮದುವೆ ನಡೆದಿದ್ದು, ರಾತ್ರಿ 2 ಗಂಟೆಯ ವೇಳೆ ವರನ ಕಡೆಯವರಿಗೆ ಐಸ್ ಕ್ರೀಂ ಸಿಕ್ಕಿಲ್ಲ ಎಂದು ವಾಗ್ವಾದ ನಡೆದಿದೆ. ವಧು ಮತ್ತು ವರನ ಕಡೆಯವರ ನಡುವೆ ಮಾತಿನ ಚಕಮಕಿ ನಡೆದು ಆಮೇಲೆ ಎರಡೂ ಕಡೆಯವರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಈ ಜಗಳ ತಾರಕಕ್ಕೇರುತ್ತಿದ್ದಂತೆ ಅತಿಥಿಯೊಬ್ಬರು ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಜಗಳವನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಗಿ ಬಂತು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಲ್ಲಿ ಜಗಳವಾಡುತ್ತಿದ್ದವರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ಹದ ಮೀರುತ್ತಿದ್ದಂತೆ ಮದುವೆ ಮನೆಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು. ಈ ಜಗಳದಲ್ಲಿ 10 ಮಂದಿಗೆ ಗಾಯಗಳಾಗಿದ್ದು, 6 ಮಂದಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Write A Comment