ಕರ್ನಾಟಕ

ಬಿಜೆಪಿ ಜಿಲ್ಲಾ ಪ್ರಭಾರಿಗಳಲ್ಲಿ ಬದಲಾವಣೆ ಮಾಡಿದ ರಾಜ್ಯಾಧ್ಯಕ್ಷ ಯಡಿಯೂರಪ್ಪ

Pinterest LinkedIn Tumblr

bbbಬೆಂಗಳೂರು,ಏ.27-ಮುಂಬರು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಮತ್ತು ಸ್ಥಾಯಿ ಸಮಿತಿ ಚುನಾವಣಾ ಸಂಬಂಧ ಜಿಲ್ಲಾ ಪ್ರಭಾರಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಮಾಡಿದ್ದಾರೆ. ಈ ಹಿಂದೆ ನಿರ್ಗಮಿತ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಅಧಿಕಾರಾವಧಿಯಲ್ಲಿ ನೇಮಕಗೊಂಡಿದ್ದ ಪ್ರಭಾರಿಗಳನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ. ನೂತನ ಪ್ರಭಾರಿಗಳ ಪಟ್ಟಿಯಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು, ಪಕ್ಷದ ಮುಖಂಡರಿಗೆ ಆದ್ಯತೆ ನೀಡಲಾಗಿದೆ. ಹಳಬರು ಮತ್ತು ಕಿರಿಯರು ಒಳಗೊಂಡ ಈ ಸಮಿತಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಿದೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ನಲ್ಲಿ ಬಹುಮತ ಹೊಂದಿರುವ ಕಡೆ ಅಧ್ಯಕ್ಷ , ಉಪಾಧ್ಯಕ್ಷ ಹಾಗೂ ಸ್ಥಾಯಿಸಮಿತಿಗಳಿಗೆ ನೇಮಕ ಮಾಡುವ ಸಂಬಂಧ ಪ್ರಭಾರಿಗಳನ್ನು ಸಂಪರ್ಕಿಸಿ ಯಾವುದೇ ತೀರ್ಮಾಗಳನ್ನು ಕೈಗೊಳ್ಳಬೇಕು. ಅಂತಿಮವಾಗಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಪ್ರತಿಯೊಬ್ಬ ಜಿಲ್ಲಾ ಪ್ರಭಾರಿಗಳು ರಾಜ್ಯಾಧ್ಯಕ್ಷರನ್ನು ಸಂಪರ್ಕಿಸಿಯೇ ಪಕ್ಷದ ಹಿತದೃಷ್ಟಿಯಿಂದ ಸರ್ವ ಸಮ್ಮತವಾದ ನಿರ್ಣಯವನ್ನು ಕೈಗೊಳ್ಳುವಂತೆ ಬಿಎಸ್‌ವೈ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಆದರೆ ಸ್ಥಳೀಯ ಮುಖಂಡರು ಯಾವುದೇ ಕಾರಣಕ್ಕೂ ಪ್ರಭಾರಿ ಇಲ್ಲವೆ ಅಧ್ಯಕ್ಷರ ನೇಮಕವಿಲ್ಲದ ತೀರ್ಮಾನ ಕೈಗೊಂಡರೆ ಪಕ್ಷ ಅದನ್ನು ಮಾನ್ಯ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ನೂತನ ಪ್ರಭಾರಿಗಳ ಪಟ್ಟಿ ಈ ಕೆಳಕಂಡಂತಿದೆ.

ಬೆಂಗಳೂರು ನಗರ -ಡಿ.ವಿ.ಸದಾನಂದಗೌಡ, ಆರ್.ಅಶೋಕ್

ದಾವಣಗೆರೆ- ಜಿ.ಎಂ. ಸಿದ್ದೇಶ್ವರ್, ಅಯನೂರು ಮಂಜುನಾಥ್

ತುಮಕೂರು – ಎಸ್.ಸುರೇಶ್ ಕುಮಾರ್, ಸುರೇಶ್ ಗೌಡ,

ಮೈಸೂರು- ಸಿ.ಟಿ.ರವಿ, ಪ್ರತಾಪ್ ಸಿಂಹ

ಕೊಡಗು – ಕೆ.ಜಿ.ಬೋಪಯ್ಯ, ನಳಿನ್‌ಕುಮಾರ್ ಕಟೀಲ್

ದ.ಕನ್ನಡ – ಕೃಷ್ಣ ಪಾಲೇಮರ್ , ನಳಿನ್‌ಕುಮಾರ್ ಕಟೀಲ್

ಉಡುಪಿ – ಶೋಭ ಕರಂದ್ಲಾಜೆ, ಸುನಿಲ್ ಕುಮಾರ್

ಚಿಕ್ಕಮಗಳೂರು- ಸಿ.ಟಿ.ರವಿ, ಡಿ.ಎನ್.ಜೀವರಾಜ್

ಶಿವಮೊಗ್ಗ – ಕೆ.ಎಸ್.ಈಶ್ವರಪ್ಪ , ಭಾನುಪ್ರಕಾಶ್

ಧಾರವಾಡ – ಜಗದೀಶ್ ಶೆಟ್ಟರ್ , ಪ್ರಹ್ಲಾದ್ ಜೋಷಿ

ಬೆಳಗಾವಿ – ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ

ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್, ಬಸವರಾಜ ಬೊಮ್ಮಾಯಿ

ವಿಜಯಪುರ -ಲಕ್ಷ್ಮಣ್ ಸವದಿ, ವೀರಣ್ಣ ಚರಂತಿ ಮಠ್

ಕಲಬುರ್ಗಿ – ಭಗವಂತ್ ಕೂಬ, ಬಿ.ಜೆ.ಪಾಟೀಲ್

ರಾಯಚೂರು- ಗೋವಿಂದ ಕಾರಜೋಳ, ಶಂಕರಪ್ಪ

ಬಳ್ಳಾರಿ – ಶ್ರೀರಾಮುಲು, ಹಾಲಪ್ಪ ಚಾರ್

Write A Comment