ಕರ್ನಾಟಕ

ಆಸ್ತಿ ತೆರಿಗೆ ಹೆಚ್ಚಳಕ್ಕೆ ನೂತನ ಆಯುಕ್ತರ ಸಮರ್ಥನೆ

Pinterest LinkedIn Tumblr

OUT GOING BBMP COMMNISINOR KUMAR NAIK GREETTING NEW BBMP COMMNISINOR MANJUNATH PRASAD AT BBMP HEAD OFFICE

ಬೆಂಗಳೂರು, ಏ. ೨೫ – ನಮುಖಪುಟ ರಾಜ್ಯ ಆಸ್ತಿ ತೆರಿಗೆ ಹೆಚ್ಚಳಕ್ಕೆ ನೂತನ ಆಯುಕ್ತರ ಸಮರ್ಥನೆಗರದಲ್ಲಿ ಆಸ್ತಿ ದರ ಹೆಚ್ಚಳವನ್ನು ಕಾನೂನು ಅನ್ವಯ ಮಾಡಲಾಗಿದೆ ಎಂದು ಸರ್ಕಾರದ ಕ್ರಮವನ್ನು ಬಿಬಿಎಂಪಿಯ ನೂತನ ಆಯುಕ್ತ ಮಂಜುನಾಥ ಪ್ರಸಾದ್ ಅವರು ಸಮರ್ಥಿಸಿಕೊಂಡಿದ್ದಾರೆ.
ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿರಲಿಲ್ಲ. ಕೆಎಂಸಿ ಕಾಯ್ದೆ ಪ್ರಕಾರವೇ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಎ.ಬಿ.ಸಿ.ಡಿ.ಇ. ವಲಯಾವಾರು ಅನ್ವಯ ತೆರಿಗೆ ಹೆಚ್ಚಳ ಆಗಿದೆ ಎಂದು ನಾಗರಿಕರಿಗೆ ಅನಿಸಿದೆ ಈ ಸಂಬಂಧ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.
ನಗರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅದಕ್ಕಾಗಿ ಪಾಲಿಕೆಯ ಆದಾಯವನ್ನು
ವೃದ್ಧಿಸಬೇಕು. ಬಾಕಿ ತೆರಿಗೆದಾರರನ್ನು ಪತ್ತೆ ಮಾಡಿ ಅವರಿಂದ ತೆರಿಗೆಯನ್ನು ಕಟ್ಟಿಸಿಕೊಳ್ಳಬೇಕಿದೆ. ತೆರಿಗೆ ಕಟ್ಟುವುದು ದೊಡ್ಡವರಿಗೂ ಹಾಗೂ ಸಣ್ಣವರಿಗೂ ಒಂದೇ. ಯಾರೂ ತೆರಿಗೆಯನ್ನು ಕಟ್ಟಿಸಿಕೊಳ್ಳದೆ ದೂರ ಉಳಿಯುವಂತಿಲ್ಲ ಎಂದರು.
ಉದ್ಯಾನವನ ಎಂಬ ಹೆಸರನ್ನು ಮತ್ತೆ ಉಳಿಸಬೇಕಾಗಿದೆ. ಇದಕ್ಕಾಗಿ ಹಸಿರು ಮತ್ತು ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಎಂ ಕಿವಿಮಾತು

ಬರ ನಿರ್ವಹಣೆಗಾಗಿ ಬೆಳಗಾಂ ವಿಭಾಗದ ಮೇಲ್ವಿಚಾರಣೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವರದಿ ಸಲ್ಲಿಸುವ ವೇಳೆ ನನ್ನನ್ನು ಬಿಬಿಎಂಪಿ ಆಯುಕ್ತರನ್ನಾಗಿ ನೇಮಕ ಮಾಡಿರುವುದಾಗಿ ಖುದ್ದು ಮುಖ್ಯಮಂತ್ರಿಗಳೇ ತಿಳಿಸಿದರು. ಈ ವೇಳೆ ಸರ್ಕಾರದಿಂದ ಬಿಬಿಎಂಪಿಗೆ ಹೆಚ್ಚು ಅನುದಾನ ನೀಡಲಾಗಿವೆ. ಅದನ್ನು ಸದ್ಭಳಕೆ ಮಾಡಿಕೊಂಡು ಜನತೆಗೆ ಮೂಲ ಸೌಲಭ್ಯಗಳನ್ನು ಒದಗಿಸುವತ್ತ ಗಮನ ನೀಡುವಂತೆ ಕಿವಿಮಾತು ಹೇಳಿದ್ದಾರಷ್ಟೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.
ನಗರದಲ್ಲಿ ಉದ್ಯಾನವನಗಳ ನಿರ್ವಹಣೆ, ಉತ್ತಮ ರಸ್ತೆಗಳು ಹಾಗೂ ಅಗತ್ಯ ನಾಗರಿಕ ಸೌಲಭ್ಯ ನೀಡಲು ಮೇಯರ್, ಉಪ ಮೇಯರ್, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ನಾಗರಿಕ ಸಮಿತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುತ್ತೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ನಾಗರಿಕರ ದೂರು ಬಂದಲ್ಲಿ ತಕ್ಷಣವೇ ಅದಕ್ಕೆ
ಪ್ರತಿಕ್ರಿಯೆ ನೀಡುವುದಲ್ಲದೇ, ಸಮಸ್ಯೆ ಪರಿಹಾರ ಕಂಡುಕೊಳ್ಳಲು ಪಾಲಿಕೆ ಬದ್ಧವಾಗಬೇಕು ಎಂದರು.
ನನ್ನ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆದಿದ್ದೇನೆ. ಹಾಗಾಗಿ ಇಲ್ಲಿನ ಸಮಸ್ಯೆಗಳ ಅರಿವೂ ಇದೆ. ಜನರ ಸೇವೆ ಮಾಡಲು ನನ್ನನ್ನು ಬಿಬಿಎಂಪಿ ಆಯುಕ್ತರನ್ನಾಗಿ ನೇಮಕ ಮಾಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

Write A Comment