ಕರ್ನಾಟಕ

ಈಜಲು ನದಿಗೆ ಇಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

Pinterest LinkedIn Tumblr

waterಶಿವಮೊಗ್ಗ, ಏ.23- ಈಜಲು ನದಿಗೆ ಇಳಿದ ಬೆಂಗಳೂರು ಮೂಲದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಿಗಂದೂರಿನಲ್ಲಿ ನಡೆದಿದೆ.

ಬೆಂಗಳೂರಿನ ಲಗ್ಗೆರೆ ವಾಸಿಗಳಾದ ಪ್ರತಾಪ್ (21) ಮತ್ತು ರಾಜು (21) ಮೃತಪಟ್ಟ ಯುವಕರು. ಬೆಂಗಳೂರಿನ ವಿಜಯನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಇಬ್ಬರು 11 ಜನ ಸ್ನೇಹಿತರ ಜತೆ ಸಿಗಂದೂರು ಕ್ಷೇತ್ರಕ್ಕೆ ಪ್ರವಾಸ ಬಂದಿದ್ದರು.

ಇಂದು ಬೆಳಗ್ಗೆ ಸಿಗಂದೂರಿನ ಹೊಳೆಬಾಗಿಲು ಸಮೀಪ ಈಜಲು ಇಬ್ಬರು ನದಿಗೆ ಇಳಿದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಾಗರ ಠಾಣೆ ಪೊಲೀಸರು ಶವಗಳಿಗಾಗಿ ಶೋಧ ನಡೆಸಿದ್ದಾರೆ. ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment