ಕರ್ನಾಟಕ

ವಾಟ್ಸ್ಯಾಪ್ ಬಳಕೆದಾರರ ಸುರಕ್ಷತೆಗೆ ‘ಎಂಡ್ ಟು ಎಂಡ್ ಎನ್ಕ್ರಿಪ್ ಷನ್’ ಜಾರಿ.. !

Pinterest LinkedIn Tumblr

watsಬೆಂಗಳೂರು, ಏ.23- ಪ್ರಸಿದ್ದ ಸಾಮಾಜಿಕ ತಾಣವಾದ ವಾಟ್ಸ್ಯಾಪ್ ತನ್ನ ಬಳಕೆದಾರರ ಸುರಕ್ಷತೆಯ ನಿಟ್ಟಿನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ ಷನ್ ಜಾರಿ ಮಾಡಿತ್ತು. ಇದರಿಂದಾಗಿ ಸುರಕ್ಷಾ ಎಜೆನ್ಸಿಗಳಿಗೆ ನುಂಗಲಾರದ ತುತ್ತಾಗಿದೆ. ಜಮ್ಮು ಕಾಶ್ಮೀರ ಸರಕಾರವು ಇಂದು ವಾಟ್ಸ್ಯಾಪ್ ಸೇವೆಗಳ ಬಗ್ಗೆ ಹೊಸದೊಂದು ನೊಟೀಸು ಜಾರಿಗೊಳಿಸಿದೆ.

ಯಾವುದೇ ವಾಟ್ಸ್ಯಾಪ್ ಬಳಕೆದಾರರು ನ್ಯೂಸ್ ಗ್ರೂಪ್ ರಚಿಸುವದಾದರೆ, ಅದಕ್ಕೆ ಖಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕಾಗಿದೆ. ನ್ಯೂಸ್ ಗ್ರೂಪ್ ಗಳಲ್ಲಿ ಬರುವ ಪ್ರತಿ ಪೋಸ್ಟ್ ಗಳಿಗೆ ಅಯಾಯ ಗ್ರೂಪ್ ಗಳ ಅಡ್ಮಿನ್ ಗಳು ಜವಾಬ್ದಾರಾಗಿರುತ್ತಾರೆ.

ಪ್ರತಿ ನ್ಯೂಸ್ ಗ್ರೂಪ್‌ಗಳ ಅಡ್ಮಿನ್‌ಗಳು ತಮ್ಮ ತಮ್ಮ ನ್ಯೂಸ್ ಗಳನ್ನು ಮುಂದಿನ ಹತ್ತು ದಿನಗಳೊಳಗೆ ನೊಂದಾವಣೆ ಮಾಡಿಕೊಳ್ಳ ಬೇಕು. ಯಾವುದೇ ಗ್ರೂಪ್ ಗಳ ನೊಂದಾವಣೆಯಾಗದಿದ್ದಲ್ಲಿ ಹಾಗೂ ಯಾವುದೇ ಬೇಜವಬ್ದಾರಿಯುತ ಸಂದೇಶಗಳಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವ ವಿಷಯಗಳಿದ್ದಲ್ಲಿ ಅಂತಹ ಗ್ರೂಪ್ ಅಡ್ಮಿನ್ ಹಾಗೂ ಸಂಬಂಧ ಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ನೊಟಿಸನ್ನು ಜಮ್ಮು ಕಾಶ್ಮೀರದ ಡಿವಿಜನಲ್ ಕಮೀಶನರ್ ಡಾ. ಅಸ್ಗರ್ ಹಸನ್ ಸಮೂಹ್ ರವರು ಪ್ರಸ್ತುತ ಪಡಿಸಿದರು.

Write A Comment