ಕರ್ನಾಟಕ

ತಾಯಿಯಿಂದ ಬೇರ್ಪಟ್ಟ ಕೋತಿ ಮರಿಗೆ ಆಸರೆಯಾದ ಟೆಡ್ಡಿ..!

Pinterest LinkedIn Tumblr

monkeyಮೈಸೂರು, ಏ.23-ತಾಯಿಯಿಂದ ಬೇರ್ಪಟ್ಟು ಆಹಾರ ತ್ಯಜಿಸಿದ್ದ ಕೋತಿ ಮರಿಯೊಂದು ಟೆಡ್ಡಿ ಬೇರ್ ಗೊಂಬೆ ಆಸರೆಯಾಗಿದೆ. ಚಾಮರಾಜೇಂದ್ರ ಮೃಗಾಲಯದಲ್ಲಿ ಕಳೆದ 14 ದಿನಗಳ ಹಿಂದೆ ಡಯಾನಾ ಎಂಬ ಬಬೂನ್ ಜಾತಿಯ ಕೋತಿ ಎರಡು ಮರಿಗಳಿಗೆ ಜನ್ಮ ನೀಡಿತ್ತು. ಒಂದು ಮರಿ ಸಾವನ್ನಪ್ಪಿದ್ದು, ಮತ್ತೊಂದು ಮರಿಯನ್ನು ಅದೇ ತಿಂದು ಬಿಡಬಹುದು ಎಂಬ ಭಯದಿಂದ ಮೃಗಾಲಯದ ಸಿಬ್ಬಂದಿ ತಾಯಿಯಿಂದ ಮರಿ ಕೋತಿಯನ್ನು ಬೇರ್ಪಡಿಸಿ ಬೇರೆಡೆ ಇರಿಸಿದ್ದರು.

ಆದರೆ ಈ ಮರಿ ಕೋತಿ ತಾಯಿಯಿಂದ ದೂರ ಬಂದಾಗಿನಿಂದ ಹಾಲು, ಇನ್ನಿತರ ಯಾವುದೇ ಆಹಾರ ಸೇವಿಸದೆ ನಿತ್ರಾಣವಾಗುತ್ತಿದ್ದನ್ನು ಕಂಡ ಸಿಬ್ಬಂದಿ ಏನು ಮಾಡುವುದೆಂದು ಯೋಚಿಸಿ, ಕಡೆಗೆ ಟೆಡ್ಡಿ ಬೇರ್ ಗೊಂಬೆಯನ್ನು ಅದಕ್ಕೆ ನೀಡಿದ್ದಾರೆ. ಅದನ್ನು ಮರಿ ಕೋತಿ ಅದರೊಂದಿಗೆ ಆಟವಾಡುತ್ತಾ ಸಿಬ್ಬಂದಿ ನೀಡುತ್ತಿರುವ ಆಹಾರವನ್ನು ಸೇವಿಸಲಾರಂಭಿಸಿದೆ. ಅಲ್ಲದೆ, ಟೆಡ್ಡಿ ಜೊತೆಯಲ್ಲಿರುವುದರಿಂದ ಲವಲವಿಕೆಯಿಂದ ಆಟವಾಡುತ್ತಾ ದಿನ ಕಳೆಯುತ್ತಿದೆ. ಮರಿಯನ್ನು ಉಳಿಸಿಕೊಳ್ಳಲು ಸಿಬ್ಬಂದಿ ಪಡುತ್ತಿದ್ದ ಕಷ್ಟ ಸದ್ಯಕ್ಕೆ ದೂರವಾಗಿ ಅವರು ನಿಟ್ಟುಸಿರು ಬಿಟ್ಟಿದ್ದಾರೆ.

Write A Comment