ಕರ್ನಾಟಕ

ಕಾಂಗ್ರೆಸ್ ಮುಕ್ತ ಕರ್ನಾಟಕ ಪ್ರಧಾನಿಯಿಂದಲೂ ಸಾಧ್ಯವಿಲ್ಲ : ಕೆ.ಜೆ.ಜಾರ್ಜ್ ತಿರುಗೇಟು

Pinterest LinkedIn Tumblr

geoಬೆಂಗಳೂರು, ಏ.23-ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಲ್ಲ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದಲೂ ಸಾಧ್ಯವಿಲ್ಲ ಎಂದು ಕೆ.ಜೆ.ಜಾರ್ಜ್ ತಿರುಗೇಟು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಬೇರುಗಳು ಭದ್ರವಾಗಿವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದು ಬಿಜೆಪಿ ಅವರ ಹಗಲುಗನಸು, ಅದು ಈಡೇರಿರುವುದಿಲ್ಲ ಎಂದರು.

ಹೈಟೆಕ್‌ಸಿಟಿ ಬೆಂಗಳೂರಿನ ಅಭಿವೃದ್ಧಿಯನ್ನು ಹಾಳು ಮಾಡಿದ್ದು ಬಿಜೆಪಿಯವರು. ಉದ್ಯಾನ ನಗರಿಗೆ ಕಸದ ನಗರ ಎಂಬ ಕೆಟ್ಟ ಹೆಸರು ತಂದುಕೊಟ್ಟವರು ಅವರೇ. ಅವರು ಅಂದು ಮಾಡಿದ ತಪ್ಪಿನಿಂದಾಗಿ ನಗರಕ್ಕೆ ಕೆಟ್ಟ ಹಣೆಪಟ್ಟಿ ಬಂದಿದೆ ಎಂದು ಹೇಳಿದರು. ನಮ್ಮ ಸರ್ಕಾರ ಅವರ ತಪ್ಪುಗಳನ್ನು ಸರಿಪಡಿಸಿ ಬೆಂಗಳೂರಿನ ಅಭಿವೃದ್ಧಿಗೆ ಕ್ರಮಕೈಗೊಂಡಿದೆ. ಹಾಗಾಗಿ ನಿಧಾನಗತಿಯಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.

Write A Comment