ಅಂತರಾಷ್ಟ್ರೀಯ

ಹೆಚ್ಚು ಆತ್ಮಹತ್ಯೆಗಳು ನಡೆಯುತ್ತಿರುವುದು ಅಮೆರಿಕದಲ್ಲೇ..!

Pinterest LinkedIn Tumblr

suವಾಷಿಂಗ್ಟನ್, ಏ.23- ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅಮೆರಿಕದಲ್ಲಿ ಅತಿ ಹೆಚ್ಚಾಗಿದ್ದು, ಕಳೆದ ಮೂರು ದಶಕಗಳಲ್ಲಿ ಹೆಚ್ಚಿನ ಆತ್ಮಹತ್ಯೆಗಳು ಇಲ್ಲಿ ನಡೆದಿವೆ ಎಂದು ತಿಳಿದು ಬಂದಿದೆ. ಒಟ್ಟು ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಮಂದಿ ಅಮೆರಿಕರನ್ನೇ ಆಗಿದ್ದಾರೆ. ಇದಕ್ಕೆ ಕಾರಣ ಏನೆಂಬುದು ಮಾತ್ರ ವರದಿಯಲ್ಲಿ ವಿವರಿಸಿಲ್ಲ. ಕೆಲವು ತಜ್ಞರ ಪ್ರಕಾರ 2008ರಲ್ಲಿ ಆರಂಭಗೊಂಡ ಹಣಕಾಸಿನ ಮುಗ್ಗಟ್ಟು ಮತ್ತು ಅಫೀಮು ಬಳಕೆ ಕಾರಣ ಎನ್ನಲಾಗಿದೆ.

ಹಿಂದಿನ ವರದಿಯ ಅಧ್ಯಯನದಿಂದಲೂ ಇದೇ ಕಾರಣ ಎಂದು ಹೇಳಲಾಗುತ್ತಿದೆ. ಬಡತನ, ನಿರಾಶವಾದ ಮತ್ತು ಆರೋಗ್ಯ ಸಮಸ್ಯೆಗಳೇ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ ಎಂದು ಹಾರ್‌ವರ್ಡ್‌ನ ಪ್ರೊ. ರಾಬರ್ಟ್ ಡಿ ಪುಟ್ನಾಮ್ ಪ್ರತಿಪಾದಿಸಿದ್ದಾರೆ. ಮಧ್ಯವಯಸ್ಕ ಬಿಳಿ ಜನರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಟ್ಟಾರೆ ಅಮೆರಿಕದ ಒಂದು ಲಕ್ಷ ಜನರಲ್ಲಿ 13 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು 1986ಕ್ಕೆ ಹೋಲಿಸಿದರೆ ಅತಿ ಹೆಚ್ಚು ಎಂದು ವರದಿಯೊಂದನ್ನು ಬಿಡುಗಡೆ ಮಾಡಲಾಗಿದೆ.

1999ರಿಂದ 2014ರ ಅವಧಿಯಲ್ಲಿ ಆತ್ಮಹತ್ಯೆ ಪ್ರಮಾಣ ಶೇ.24ರಷ್ಟು ಹೆಚ್ಚಾಗಿದೆ. ಅಲ್ಲದೆ, 45ರಿಂದ 64 ವರ್ಷದೊಳಗಿನ ವಯೋಮಾನದವರಲ್ಲಿ ಶೇ.43ರಷ್ಟು ಇದೇ ವಯಸ್ಸಿನ ಮಹಿಳೆಯರಲ್ಲಿ ಶೇ.63ರಷ್ಟು ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಸಿಡಿಸಿ ವರದಿಯಲ್ಲಿ ಹೇಳಿದೆ. ಕಪ್ಪು ಜನರು, ಸ್ಪ್ಯಾನಿಸ್, ಏಷ್ಯನ್ನರು, ಫೆಸಿಫಿಕ್ ದ್ವೀಪದ ಜನರು ಹಾಗೂ ಅಲ್ಯಾಕ್ಸ ಜನರಿಗೆ ಹೋಲಿಸಿದರೆ ಬಿಳಿ ಜನರ ಆತ್ಮಹತ್ಯೆ ಪ್ರಮಾಣ ದ್ವಿಗುಣಗೊಂಡಿದೆ ಎಂಬ ವರದಿ ಬಹಿರಂಗಗೊಂಡಿದೆ.

Write A Comment