ಮುಂಬೈ

ಥಾಣೆ, ನವಿ ಮುಂಬೈಗೂ ನೀರು, ಸಚಿವ ಸುರೇಶ್ ಪ್ರಭು ಆದೇಶ

Pinterest LinkedIn Tumblr

sureshಮುಂಬೈ: ಮರಾಠಾವಾಡದ ಲಾತೂರ್​ನ ಬರ ಪ್ರದೇಶಗಳಿಗೆ ರೈಲ್ವೆ ಗೂಡ್ಸ್ ಟ್ಯಾಂಕರ್​ಗಳ ಮೂಲಕ ನೀರು ಪೂರೈಸಿದ ಬೆನ್ನಲ್ಲೇ ಈಗ ರೈಲ್ವೇ ಜಲಾಶಯಗಳಿಂದ ನೀರನ್ನು ತುಂಬಿ ಥಾಣೆ, ನವಿ ಮುಂಬೈಗೂ ನೀರು ಪೂರೈಸಲು ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಆದೇಶಿಸಿದ್ದಾರೆ.

ಥಾಣೆಯಲ್ಲಿರುವ ರೈಲ್ವೇ ಜಲಾಶಯ ನವಿ ಮುಂಬೈಗೆ ನೀರು ಸರಬರಾಜು ಮಾಡಲು ಸಹಾಯವಾಗುತ್ತಿದೆ. ಇದೇ ರೀತಿ ಥಾಣೆ ನಗರಪಾಲಿಕೆಗೆ ನೀರು ಕೊಡುತ್ತೇವೆ ಎಂದು ಸುರೇಶ್ ಪ್ರಭು ಶುಕ್ರವಾರ ಟ್ವೀಟ್ ಮಾಡಿದ್ದರು.

ರೈಲ್ವೇ ಜಲಾಶಯಗಳಲ್ಲಿರುವ ನೀರನ್ನು ರೈಲ್ವೇಯ ದೈನಂದಿನ ಅಗತ್ಯಗಳಿಗೆ ಉಪಯೋಗಿಸಲಾಗುತ್ತಿದ್ದು ಈಗ ಥಾಣೆ ಮತ್ತು ನವಿ ಮುಂಬೈನಲ್ಲಿರುವ ಪೌರ ಸಂಸ್ಥೆಗಳಿಗೆ ಇದೇ ರೀತಿ ನೀರು ಒದಗಿಸಲಾಗುವುದು

ಮುಂಬೈನಿಂದ 25 ಕಿ.ಮೀ ದೂರದಲ್ಲಿರುವ ಥಾಣೆ ಶೇ.60ರಷ್ಟು ನೀರಿನ ಕೊರತೆಯನ್ನು ಎದುರಿಸುತ್ತಿದೆ. ಮರಾಠಾವಾಡದಲ್ಲಿ 100 ವರ್ಷಗಳಲ್ಲೇ ಅತ್ಯಂತ ಭೀಕರ ಬರ ಕಾಡಿದ್ದು ಅಲ್ಲಿನ 11 ಜಲಾಶಯಗಳು ಬತ್ತಿ ಹೋಗಿವೆ.

Write A Comment