ಕರ್ನಾಟಕ

ಶ್ರೀಕಂಠ ಸಿನೆಮಾದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಳ್ಳಲಿದ್ದಾರೆ ಶಿವರಾಜ್ ಕುಮಾರ್

Pinterest LinkedIn Tumblr

Srikanta

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಶ್ರೀಕಂಠ. ಇದರಲ್ಲಿ ಅವರು ಸಾಮಾನ್ಯ ಮನುಷ್ಯನಂತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಿರ್ದೇಶಕರು ಮಂಜು ಸ್ವರಾಜ್.

Srikantaa1

” ಶ್ರೀಕಂಠದಲ್ಲಿ ಶಿವರಾಜ್ ಕುಮಾರ್ ಅವರು ಸಾಮಾನ್ಯ ಮನುಷ್ಯನ ಪಾತ್ರ ನಿರ್ವಹಿಸಲಿದ್ದಾರೆ. ಹೀರೋ, ವಿಲನ್, ತಂದೆ, ಸಹೋದರನಾಗಿ ತೆರೆಯ ಮೇಲೆ ಮಿಂಚಿದ್ದ ಶಿವರಾಜ್ ಕುಮಾರ್ ಸಾಮಾನ್ಯ ಮನುಷ್ಯನ ಪಾತ್ರ ಮಾಡಿರಲಿಲ್ಲ. ವಾಣಿಜ್ಯ ದೃಷ್ಟಿಯಿಂದ ಚಿತ್ರದಲ್ಲಿ ನಾಯಕನ ಆರಾಧನೆಯಿದ್ದರೂ ಕೂಡ ಶಿವರಾಜ್ ಕುಮಾರ್ ಚಿತ್ರದಲ್ಲಿ ನೈಜವಾಗಿ ಕಾಣುತ್ತಾರೆ. ಚಿತ್ರದ ಶೇಕಡಾ 80 ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾತಿನ ಭಾಗದವನ್ನು ಏಪ್ರಿಲ್ 30ರೊಳಗೆ ಮುಗಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ.

ಚಿತ್ರದಲ್ಲಿ ನೈಜತೆ ಮತ್ತು ಸರಳತೆ ಹೆಚ್ಚಾಗಿ ಮೂಡಿಬರಲು ಪ್ರತಿ ಶೂಟ್ ನ್ನು ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಇದುವರೆಗೆ ನಿರ್ದೇಶಿಸಿದ ಚಿತ್ರಗಳಲ್ಲಿ ಈ ಚಿತ್ರ ಸವಾಲಿನದಾಗಿತ್ತು. ಆದರೆ ಶಿವರಾಜ್ ಕುಮಾರ್ ರವರ ಕಾರ್ಯನಿಷ್ಠೆ ಮತ್ತು ಸಹಕಾರದಿಂದ ಸುಸೂತ್ರವಾಗಿ ನಡೆದಿದೆ. ಕೆಲವು ಹೀರೋಗಳು ಸಾರ್ವಜನಿಕರ ಎದುರು ಶೂಟಿಂಗ್ ಮಾಡಲು ಒಪ್ಪುವುದಿಲ್ಲ. ಆದರೆ ತಮ್ಮ ಸ್ಟಾರ್ ಗಿರಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಜನರ ಗುಂಪಿನ ಎದುರು ಶೂಟ್ ಮಾಡಲು ಒಪ್ಪಿಕೊಂಡರು. ಹೀಗಾಗಿ ಸಾರ್ವಜನಿಕರ ನೈಜ ಭಾವನೆ ನಮಗೆ ಸಿಕ್ಕಿತು. ಜನರ ಗುಂಪು ತೀವ್ರವಾಗಿದ್ದರಿಂದ ಪ್ರತಿ ಶಾಟ್ ತೆಗೆಯಲು ಸುಮಾರು ಒಂದು ಗಂಟೆ ಹಿಡಿಯುತ್ತಿತ್ತು.

ಚಿತ್ರಕ್ಕಾಗಿ 60 ಅಡಿ ಎತ್ತರದ ಕಟೌಟ್ ಗೆ ಹತ್ತಿರುವ ಬಗ್ಗೆ ಕೇಳಿದಾಗ ಮಂಜು ಸ್ವರಾಜ್, ಶಿವರಾಜ್ ಕುಮಾರ್ ರವರ ಪಾತ್ರವೊಂದು ಚಿತ್ರದಲ್ಲಿ ವ್ಯಕ್ತಿಯೊಬ್ಬರನ್ನು ಆರಾಧಿಸುತ್ತಾರೆ. ಆ ವ್ಯಕ್ತಿ ಯಾರು ಎಂಬುದನ್ನು ಚಿತ್ರ ಬಿಡುಗಡೆ ವೇಳೆ ಹೇಳುತ್ತೇವೆ. 60 ಅಡಿ ಎತ್ತರದ ಕಟೌಟನ್ನು ಕಟ್ಟಲಾಯಿತು. ಅಷ್ಟು ಎತ್ತರಕ್ಕೆ ಶಿವರಾಜ್ ಕುಮಾರ್ ಹತ್ತಬೇಕು. ಅದು ನೈಜವಾಗಿ ಮೂಡಿಬರಬೇಕೆಂದು ಶಿವರಾಜ್ ಕುಮಾರ್ ಅವರೇ ಸ್ವತಃ ಒಂದೇ ಶಾಟ್ ನಲ್ಲಿ ಹತ್ತಿದರು. ಎನ್ನುತ್ತಾರೆ ಮಂಜು ಸ್ವರಾಜ್.

ಚಿತ್ರದ ಒಂದು ಹಾಡು ಬಾಕಿಯಿದ್ದು ಅದರ ಚಿತ್ರೀಕರಣ ವಿದೇಶದಲ್ಲಿ ಜೂನ್ ನಲ್ಲಿ ನಡೆಯಲಿದೆ. ಯಾವ ಲೊಕೇಶನ್ ಎಂದು ಇನ್ನೂ ನಿರ್ಧಾರಗೊಂಡಿಲ್ಲ ಎಂದರು.

Write A Comment