ಕರ್ನಾಟಕ

ಸಲ್ಮಾನ್ ಖಾನ್ ನಿಂದ ಸ್ಫೂರ್ತಿ ಪಡೆದ ನಟಿ ರಾಗಿಣಿ ಪೇಂಟಿಂಗ್‌ ಮೊರೆ

Pinterest LinkedIn Tumblr

Ragini Dwivedi

ಬ್ಯಾಕ್ ಟು ಬ್ಯಾಕ್ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಸ್ಯಾಂಡಲ್ ವುಡ್ ನಟಿ ರಾಗಿಣಿ ಒತ್ತಡ ತಗ್ಗಿಸಿಕೊಳ್ಳಲು ಪೇಂಟಿಂಗ್‌ ಮೊರೆ ಹೋಗಿದ್ದಾರಂತೆ.

ಹೌದು, ಹಾಗಂತ ಸ್ವತಃ ರಾಗಿಣಿ ಅವರೇ ಹೇಳಿಕೊಂಡಿದ್ದಾರೆ. ಪೇಂಟಿಂಗ್‌ ನಿಂದಾಗಿ ಒತ್ತಡ ತಗ್ಗಿ ಉತ್ಸಾಹ ಹೆಚ್ಚುತ್ತದೆ. ಅದೇ ರೀತಿ ಯೋಚನೆಗಳು ಸಹ ಬಣ್ಣಮಯವಾಗುತ್ತದೆ ಎಂದ ಹೇಳಿಕೊಂಡಿದ್ದಾರೆ.

ಕಳೆದ ಐದು ತಿಂಗಳಿನಿಂದ ಪೇಟಿಂಗ್ ಅಭ್ಯಾಸ ಮಾಡುತ್ತಾ ಬಂದಿದ್ದೇನೆ. ಬಿಳಿ ಹಾಳೆಗಳ ಮೇಲೆ ನನ್ನ ಸೃಜನಶೀಲತೆಗೆ ತಕ್ಕಂತ ರೇಖೆಗಳನ್ನು ಗೀಚಿ ಅದಕ್ಕೆ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದೇನೆ. ಸದ್ಯ ಕೃಷ್ಣನ ಚಿತ್ರವೊಂದನ್ನು ಬಿಡಿಸಿ ಅದಕ್ಕೆ ಬಣ್ಣ ಬಳಿಯುವ ಕೆಲಸದಲ್ಲಿ ತೊಡಗಿದ್ದೇನೆ ಎಂದರು.

ನಾನು ಸೃಜನಶೀಲಲಾಗಿರುವವರೆಗೂ ನನ್ನು ಪೇಂಟಿಂಗ್‌ ಗೆ ಕೊನೆ ಇಲ್ಲ. ಇದನ್ನು ವೃತ್ತಿಯಾಗಿ ತೆಗೆದುಕೊಂಡಿಲ್ಲ. ನನ್ನ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದೇನೆ. ಶೀಘ್ರದಲ್ಲೇ ನನ್ನದೇ ಪೇಟಿಂಗ್ ಹೊರಬರಲಿದೆ ಎಂದರು.

ರಾಗಿಣಿ ತಾವು ಪೇಂಟಿಂಗ್‌ ಕಲಿಯಲು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸ್ಫೂರ್ತಿಯಂತೆ. ಸೆಟ್ ನಲ್ಲಿ ಬಿಡುವಿನ ವೇಳೆಯಲ್ಲಿ ಸಲ್ಮಾನ್ ಅವರು ಪೇಂಟಿಂಗ್‌ ಮಾಡುತ್ತಿರುತ್ತಾರೆ. ಅವರೇ ನನಗೆ ಸ್ಫೂರ್ತಿ ಎಂದರು. ಒತ್ತಡ ತಗ್ಗಿಸಿಕೊಳ್ಳಲು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸಾಮಾನ್ಯ ಅದೇ ರೀತಿ ನಾನು ಸಹ ಪೇಂಟಿಂಗ್‌ ಮೊರೆ ಹೋಗಿದ್ದೇನೆ. ಇದರಿಂದ ನನಗೆ ಹೆಚ್ಚು ಖುಷಿ ಸಿಗುತ್ತದೆ. ಜತೆಗೆ ಕೆಲವರನ್ನು ಬಿಡಲು ಸಹ ಪೇಟಿಂಗ್ ಸಹಕಾರಿಯಾಗಿದೆ ಎಂದರು.

ರಾಗಿಣಿ ಅವರು ಸದ್ಯ ನಾನೇ ನೆಕ್ಸ್ಟ್ ಸಿಎಂ ಚಿತ್ರದ ಹಾಡುಗಳ ಶೂಟಿಂಗ್ ಮುಗಿಸಿದ್ದು, ರಾಣಚಂಡಿ ಚಿತ್ರದ ಆಡಿಯೋ ಬಿಡುಗಡೆ ನಿರೀಕ್ಷೆಯಲ್ಲಿದ್ದಾರೆ.

Write A Comment