ಮನೋರಂಜನೆ

ಬೇಫಿಕ್ರೆ ಸಿನಿಮಾದಲ್ಲಿ ನಾಯಕಿಯೊಂದಿಗೆ 23 ಬಾರಿ ಲಿಪ್ ಲಾಕ್ ಮಾಡಿದ ರಣವೀರ್ ಸಿಂಗ್

Pinterest LinkedIn Tumblr

Ranveer Singh

ನವದೆಹಲಿ: ಬಾಲಿವುಡ್ ಎನರ್ಜಿ ಬಂಡಲ್ ರಣವೀರ್ ಸಿಂಗ್ ಬಾಜೀರಾವ್ ಮಸ್ತಾನಿ ಚಿತ್ರದ ನಂತರ ಸಾಕಷ್ಟು ಸದ್ದು ಮಾಡುತ್ತಿದ್ದಾರೆ, ಆದಿತ್ಯಾ ಛೋಪ್ರಾ ನಿರ್ಮಾಣದ ಭೇಪಿಕ್ರೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಬೇಫಿಕ್ರೆ ಚಿತ್ರದಲ್ಲಿ ರಣ್ವೀರ್ ಸಿಂಗ್ ಸುಮಾರು 23 ಬಾರಿ ನಾಯಕಿಯೊಂದಿಗೆ ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಆಂಗ್ಲ ಪತ್ರಿಕೆಯೊಂದರ ಪ್ರಕಾರ ಬಾಲಿವುಡ್ ನಟಿ ವಾಣಿ ಕಪೂರ್ ಅವರೊಂದಿಗೆ ರಣವೀರ್ ಸಿಂಗ್ ಸುಮಾರು 23 ಬಾರಿ ಲಿಪ್ ಲಾಕ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಹೊರಟ್ಟಿದ್ದಾರೆ.

ಬೇಫಿಕ್ರೆ ಚಿತ್ರದ ಪೋಸ್ಟರ್ ನಲ್ಲಿ ರಣ್ವೀರ್ ಮತ್ತು ವಾಣಿ ಕಪೂರ್ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಲಿಪ್ ಲಾಕ್ ಮಾಡಿರುವ ಪೋಸ್ಟರ್ ಗಳು ಸಿನಿಪ್ರಿಯರಲ್ಲಿ ಸಂಚಲನ ಮೂಡಿಸಿದೆ.

Write A Comment