ಮನೋರಂಜನೆ

ನಾವಿಬ್ಬರು ಒಪ್ಪಿ ಗರ್ಭಪಾತ ಮಾಡಿಸಲು ನಿರ್ಧರಿಸಿದ್ದೆವು: ರಾಹುಲ್ ರಾಜ್ ಸಿಂಗ್

Pinterest LinkedIn Tumblr

pratyusha

ನವದೆಹಲಿ: ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಗರ್ಭಪಾತ ಮಾಡಿಸಲು ನಿರ್ಧರಿಸಿದ್ದೆವು ಎಂದು ಕಿರುತೆರೆ ನಟಿ ಪ್ರತ್ಯೂಷಾ ಬ್ಯಾನರ್ಜಿ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ತಿಳಿಸಿದ್ದಾನೆ.

ಪೊಲೀಸರ ವಿಚಾರಣೆ ವೇಳೆ ಪ್ರತ್ಯೂಷಾ ಬ್ಯಾನರ್ಜಿ ಗರ್ಭಿಣಿಯಾಗಿದ್ದಳು ಎಂಬುದು ವದಂತಿ ಎಂದು ಮಾಧ್ಯಮಗಳಿಗೆ ಹೇಳಿದ್ದ ರಾಹುಲ್ ರಾಜ್ ಸಿಂಗ್ ಉಲ್ಟಾ ಹೊಡೆದಿದ್ದಾನೆ.

ತನಗೆ ಮುಟ್ಟು ನಿಂತಿದೆ ಎಂದು ಪ್ರತ್ಯೂಷಾ ಬ್ಯಾನರ್ಜಿ ತಿಳಿಸಿದ್ದಳು, ನಂತರ ನಾವಿಬ್ಬರು ವೈದ್ಯರನ್ನು ಭೇಟಿ ಮಾಡಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದೆವು. ನಮ್ಮಿಬ್ಬರ ಭವಿಷ್ಯದ ಹಿತದೃಷ್ಟಿಯಿಂದ ಇಬ್ಬರು ಪರಸ್ಪರ ಒಪ್ಪಿಯೇ ಗರ್ಭಪಾತ ಮಾಡಿಸಲು ನಿರ್ಧರಿಸಿದ್ದೆವು. ನಾವಿಬ್ಬರು ಮದುವೆಯಾಗಿರಲಿಲ್ಲ. ಆದರೆ ಒಟ್ಟಿಗೆ ವಾಸಿಸುತ್ತಿದ್ದೆವು ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ.

ಗರ್ಭಪಾತ ಮಾಡಿಸುವುದು ದೀರ್ಘ ಸಮಯದ ಪ್ರಕ್ರಿಯೆಯಾಗಿತ್ತು. ನಾವು ವೈದ್ಯರನ್ನು ಭೇಟಿದ ದಿನವೇ ಗರ್ಭವನ್ನು ತೆಗೆಸಲು ನಿರ್ಧರಿಸಿ ಔಷಧಿಗಳನ್ನು ತೆಗೆದುಕೊಂಡಿದ್ದೆವು. ನಾವಿಬ್ಬರು ನವೆಂಬರ್ ನಲ್ಲಿ ಮದುವೆಯಾಗಲು ನಿಶ್ಚಯಿಸಿದ್ದೆವು ಎಂದು ಹೇಳಿದ್ದಾನೆ.

ರಾಹುಲ್ ರಾಜ್ ಸಿಂಗ್ ಸದ್ಯಕ್ಕೆ ಜಾಮೀನಿನ ಮೇಲೆ ಹೊರ ಬಂದಿದ್ದಾನೆ, ಇದೇ ವೇಳೆ ಪ್ರತ್ಯೂಷಾ ಬ್ಯಾನರ್ಜಿ ಪೋ|ಕರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಬಾಂಬೆ ಹೈ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ.

Write A Comment