ಕರ್ನಾಟಕ

ಟೋಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ, ಮುಕ್ಕಂಪಿಯಲ್ಲಿ ಘಟನೆ

Pinterest LinkedIn Tumblr

Koppala-Web1ಕೊಪ್ಪಳ: ಟೋಲ್ ಶುಲ್ಕ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ತಡರಾತ್ರಿ ಗಂಗಾವತಿ ತಾಲೂಕಿನ ಮುಕ್ಕಂಪಿ ಬಳಿ ನಡೆದಿದೆ.

ಮಹೇಶ್, ಕರಿಯಪ್ಪ, ಏಳುಕೊಂಡಲವಾಡ ಮುಕ್ಕುಂಪಿ ಗ್ರಾಮದ ಬಳಿ ಇರುವ ಜೆಕೆಸಿ ಕಂಪನಿಗೆ ಸೇರಿದ ಸಿಬ್ಬಂದಿಯಾಗಿದ್ದು, ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಕೆಲವು ವ್ಯಕ್ತಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಮರೇಶ್, ಶರಣಪ್ಪ, ಆನಂದ, ಚನ್ನಬಸವ, ಬಸವರಾಜ ಎನ್ನುವವರು ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಇವರಲ್ಲಿ ಬಸವರಾಜ್ ಎಂಬಾತ ಸಿದ್ದಾಪುರ ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ್ ಗೋನಾಳ ಸಹೋದರ ಎನ್ನಲಾಗಿದೆ.

ತಡರಾತ್ರಿ ವಾಹನದಲ್ಲಿ ಬಂದ ಇವರು ರಕ್ಷಣಾ ವೇದಿಕೆ ಕಾರ್ಯಕರ್ತರು ಎಂದು ಹೇಳಿಕೊಂಡು ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Write A Comment