ಅಂತರಾಷ್ಟ್ರೀಯ

ಈಕ್ವೆಡಾರ್ ಭೂಕಂಪ, ಮೃತಪಟ್ಟವರ ಸಂಖ್ಯೆ 413ಕ್ಕೆ ಏರಿಕೆ

Pinterest LinkedIn Tumblr

1-Ecuador-1-webಕ್ವಿಟೋ: ಕಳೆದ ಶನಿವಾರ ದಕ್ಷಿಣ ಅಮೆರಿಕಾದ ಈಕ್ವೆಡಾರ್​ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 413 ಕ್ಕೆ ಏರಿಕೆಯಾಗಿದೆ.

ಭೂಕಂಪನದಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು, ಸಾವಿರಾರು ಕಟ್ಟಡಗಳು ನೆಲಕ್ಕುರುಳಿವೆ. ಕಟ್ಟಡಗಳ ಅವಶೇಷಗಳಡಿ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಗಾಗಿ 10 ಸಾವಿರ ಯೋಧರು ಮತ್ತು 3500 ಪೊಲೀಸರನ್ನು ನಿಯೋಜಿಸಲಾಗಿದೆ. ಗಾಯಗೊಂಡವರ ಸಂಖ್ಯೆ 2600 ಕ್ಕೂ ಹೆಚ್ಚಿದೆ ಎಂದು ಈಕ್ವೆಡಾರ್​ನ ರಕ್ಷಣಾ ಸಚಿವಾಲಯ ತಿಳಿಸಿದೆ.

ಪ್ರಬಲ ಭೂಕಂಪದ ನಂತರ ಅದೇ ಪ್ರದೇಶದಲ್ಲಿ 300 ಕ್ಕೂ ಹೆಚ್ಚು ಸಣ್ಣ ಭೂಕಂಪನಗಳು ಸಂಭವಿಸಿದ್ದು, ಜನರು ಭಯದಲ್ಲೇ ದಿನದೂಡುವಂತೆ ಮಾಡಿದೆ.

Write A Comment